ಅಂಜುಮನ್ ಸ್ನಾತಕೋತ್ತರ ಕೇಂದ್ರ : ಪ್ರತಿಶತ ನೂರರಷ್ಟು ಫಲಿತಾಂಶ

Source: SO News | By Laxmi Tanaya | Published on 25th November 2020, 7:14 PM | Coastal News |

ಭಟ್ಕಳ : ಕರ್ನಾಟಕ ವಿಶ್ವವಿದ್ಯಾಲಯವು ನಡೆಸಿದ ಎಂ.ಕಾಂ. ಅಂತಿಮ ವರ್ಷದ ಫಲಿತಾಂಶ ಪ್ರಕಟವಾಗಿದ್ದು, ಸ್ಥಳೀಯ ಅಂಜುಮನ್ ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಓದುತ್ತಿರುವ ಎಂ.ಕಾಂ. ಅಂತಿಮ ವರ್ಷದ ವಿದ್ಯಾರ್ಥಿಗಳು ಶೇಕಡಾ ನೂರರಷ್ಟು ಫಲಿತಾಂಶ ದಾಖಲಿಸಿದ್ದಾರೆ. 

ಪರೀಕ್ಷೆಯನ್ನು ತೆಗೆದುಕೊಂಡ 37 ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿಗಳು ಉನ್ನತ ಶ್ರೇಣಿಯೊಂದಿಗೆ (ಡಿಸ್ಟಿಂಕ್ಷನ್) ತೇರ್ಗಡೆಯಾದರೆ, ಉಳಿದ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

 ಕುಮಾರಿ ರಮ್ಯಾ ಸುಬ್ರಾಯ ನಾಯ್ಕ ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದರೆ, ನಂತರದ ನಾಲ್ಕು ಸ್ಥಾನಗಳನ್ನು ಕ್ರಮವಾಗಿ ಸ್ವಾತಿ ಕೇಶವ ಖಾರ್ವಿ, ಐಶಾ ನಿದಾ, ಲಿಖಿತಾ ಆನಂದ ನಾಯ್ಕ ಮತ್ತು ಮಾಧುರಿ ಗಣಪತಿ ನಾಯಕ ಪಡೆದಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಯನ್ನು ಅಂಜುಮನ್ ಆಡಳಿತ ಮಂಡಳಿಯು ಶ್ಲಾಘಿಸಿದರೆ, ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಮುಸ್ತಾಕ್ ಕೆ. ಶೇಖ್ ಹಾಗೂ ಕಾಲೇಜಿನ ಪ್ರಾಧ್ಯಾಪಕವೃಂದ ಮತ್ತು ಸಿಬ್ಬಂಧಿಗಳು ವಿದ್ಯಾರ್ಥಿಗಳನ್ನು ಅಭಿನಂದಿಸಿ, ಅವರ ಭವಿಷ್ಯ ಉಜ್ವಲವಾಗಲೆಂದು ಹಾರೈಸಿದ್ದಾರೆ.

Read These Next

ಮುಂಡಗೋಡ: ಜಾನಪದ ರಾಜ್ಯ ಪ್ರಶಸ್ತಿ ವಿಜೇತ ಸಹದೇವಪ್ಪ ನಡಿಗೇರ ಗೆ ಗಂಗಾಮತ ಸಮಾಜದಿಂದ ಸನ್ಮಾನ

ಮುಂಡಗೋಡ ನಗರ ಗಂಗಾಮತಸ್ಥ ಕುಲಬಾಂದವರು  ಭಾನುವಾರ ರಾಜ್ಯಮಟ್ಟದ ಜಾನಪದ ಅಕಾಡಮಿ ಪ್ರಶಸ್ತಿ ಗೆ ಭಾಜನರಾದ ಇಂದೂರ ಗ್ರಾಮದ  ಸಹದೇವಪ್ಪ ...

ದೇಶದ ರಕ್ಷಣೆ, ಭದ್ರತೆ ಕಾಪಾಡುವುದು ರಕ್ಷಣಾ ಸಚಿವರ ಕರ್ತವ್ಯ : ಕೆಪಿಸಿಸಿ ವಕ್ತಾರ ಪ್ರಕಾಶ ರಾಠೋಡ್

ಮಂಗಳೂರು : ದೇಶದ ರಕ್ಷಣೆ ಉದ್ದೇಶದಿಂದ ಭದ್ರತಾ ವಿಷಯ ಗೌಪ್ಯವಾಗಿರಬೇಕು. ದೇಶದ ಹೀನ ಕೃತ್ಯದಲ್ಲಿ ರಿಪಬ್ಲಿಕ್ ಟಿವಿ ಮುಖ್ಯಸ್ಥ ...

ಸಿಎಂ ತವರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ : ಶಾಸಕ ಯು ಟಿ ಖಾದರ್ ಆರೋಪ.

ಮಂಗಳೂರು : ಸಿ.ಎಂ ತವರು ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಇಲ್ಲವಾ. ಜನ ಸಾಮಾನ್ಯರ ಮರಳು ಗಾಡಿಯನ್ನ ವಶ ಪಡಿಸಿಕೊಳ್ಳತ್ತಾರೆ. ಆದರೆ ...