ಭಟ್ಕಳ:ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ

Source: sonews | By MV Bhatkal | Published on 5th September 2021, 12:53 PM | Coastal News | Don't Miss |

ಭಟ್ಕಳ: ಭಟ್ಕಳ ತಾಲ್ಲೂಕಿನ ನಗರ ವ್ಯಾಪ್ತಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮತ್ತು ತಾಲ್ಲೂಕ ತಂಬಾಕು ತನಿಖಾ ದಳವು ಸಾರ್ವಜನಿಕವಾಗಿ ಕಾನೂನು ಬಾಹಿರವಾಗಿ ತಂಬಾಕು ಮತ್ತು ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸಿ ಜಾಗ್ರತಿ ಮೂಡಿಸಲಾಯಿತು 

ಈ ಬಗ್ಗೆ ಮಾದ್ಯಮದೊಂದಿಗೆ ಮಾತನಾಡಿದ  ತಂಬಾಕು ನಿಯಂತ್ರಣ ಕೋಶ ಕಾರವಾರ ಜಿಲ್ಲಾ ಸಲಹೆಗಾರ ಪ್ರೇಮ ಕುಮಾರ ನಾಯ್ಕ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಕೋಟ್ಪಾ 2003ರ ಕಾಯ್ದೆಯಡಿಯಲ್ಲಿ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪ್ರತಿ ತಾಲೂಕಿನಲ್ಲಿ ತಿಂಗಳಿಗೆ ಎರಡು ಬಾರಿ ದಾಳಿ ನಡೆಸಲು ಸಮಿತಿ ತೀರ್ಮಾಸಿದೆ. ಈ ಕಾಯ್ದೆಯ ಮೂಲ ಉದ್ದೇಶ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳು ತಂಬಾಕು ಉತ್ಪನದ ಬಳಕೆಯ ದಾಸರಾಗುವುದನ್ನು ತಪ್ಪಿಸುವುದರ ಜೊತೆಗೆಕೋಟ್ಪಾ 2003ರ ಕಾಯ್ದೆಯಡಿಯಲ್ಲಿ ಬರುವ ಸೆಕ್ಷನ್ 4ರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವಿದ್ದರೂ ಅದರ ಅಡಿಯಲ್ಲಿ ಪ್ರತಿ ಯೊಂದು ಅಂಗಡಿಯಲ್ಕಿ ನಾಮಫಲಕಗಳನ್ನು ಅಳವಡಿಸಬೇಕಾಗುತ್ತದೆ. ಹಾಗೂ ಪ್ರಮುಖವಾದ 6(ಬಿ)ಪ್ರಕಾರ ಶೈಕ್ಷಣಿಕ ಸಂಸ್ಥೆಗಳು ಅಂದರೆ ಶಾಲಾ ಕಾಲೇಜು ಸಮೀಪ 100 ಮೀ  ಅಂತರದ ಒಳಗೆ ತಂಬಾಕು ಉತ್ಪನ್ನ ಮಾರಾಟ ಮಾಡುವುದರ ಮೇಲೆ ನಿಷೇಧ ಹೇರಲಾಗಿದ್ದು .100 ಮೀ ಅಂತರ ಅಂತರದ ಒಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಮಾರಾಟಗಾರರಿಗೆ ಸದರಿ ಸೆಕ್ಷನ್ ಅಡಿಯಲ್ಲಿ 5 ಪ್ರಕರಣಗಳು ಒಟ್ಟು 32 ಪ್ರಕರಣಗಳನ್ನು ದಾಖಲಿಸಿ 4700 ದಂಡ ವಿಧಿಸಿ ಜನ ಸಾಮಾನ್ಯರಲ್ಲಿ ಜಾಗ್ರತಿ ಮೂಡಿಸಿ ಎಚ್ಚರಿಗೆ ಬಿಡಿದ್ದೇವೆ ಎಂದರು 

ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯಧಿಕಾರಿಗಳಾದ ಡಾ. ಮೂರ್ತಿರಾಜ್ ಭಟ್ , ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಕಾರವಾರ ಜಿಲ್ಲಾ ಸಲಹೆಗಾರ ಪ್ರೇಮ ಕುಮಾರ ನಾಯ್ಕ, ಸಮಾಜ ಕಾರ್ಯಕರ್ತರಾದ ಗಫೂರ್ ಸಾಬ್ ನದಾಫ್, ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಸುಜಿಯಾ ಸೋಮನ್ ಸೇರಿದಂತೆ ತಾಲೂಕಾ ತಂಬಾಕು ತನಿಖಾದಳದ ಇತರೆ ಇಲಾಖೆ ಅಧಿಕಾರಿ ಸದಸ್ಯರು, ಪೊಲೀಸ ಸಿಬ್ಬಂದಿಗಳು ಇದ್ದರು.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...