ಭಟ್ಕಳದಲ್ಲಿ ಭಾನುವಾರದಂದು ಬೆ.8ರಿಂದ ಮ.2 ಗಂಟೆ ವರೆಗೆ ಲಾಕ್‍ಡೌನ್  ಸಡಿಲಿಕೆ-ಸಹಾಯ ಆಯುಕ್ತ

Source: sonews | By Staff Correspondent | Published on 30th May 2020, 4:42 PM | Coastal News | Don't Miss |

ಕರ್ಫ್ಯೂ ಕುರಿತಂತೆ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡಿದ ಸುಳ್ಳು ಸುದ್ದಿ 

ಭಟ್ಕಳ: ರಾಜ್ಯಾದ್ಯಂತ ಭಾನುವಾರದ ಕಫ್ರ್ಯೂ ಆದೇಶವನ್ನು ಸರ್ಕಾರ ಹಿಂಪಡೆದ ಹಿನ್ನೆಯಲ್ಲಿ ಈ ಆದೇಶ ಭಟ್ಕಳಕ್ಕೂ ಅನ್ವಯಿಸುತ್ತಿದ್ದು ನಾಳೆ(ಮೇ31) ರಂದು ಭಟ್ಕಳದಲ್ಲಿ ಬೆಳಿಗ್ಗೆ 8ರಿಂದ ಮ.2ಗಂಟೆ ವರೆಗೆ ಲಾಕ್‍ಡೌನ್ ಸಡಿಲಿಕೆ ಇರುತ್ತದೆ ಎಂದು ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತ ಭರತ್ ಎಸ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಟ್ಕಳ ನಗರ ವ್ಯಾಪ್ತಿಯಲ್ಲಿನ ಕಂಟೇನ್ಮೆಂಟ್ ಪ್ರದೇಶಗಳಾದ ಮದೀನಾ ಕಾಲೋನಿ, ಸುಲ್ತಾನ್ ಸ್ರ್ಟೀಟ್, ಕೋಕ್ತಿನಗರ, ಉಸ್ಮಾನಿಯ ಮಸೀದಿ ರಸ್ತೆ, ಗುಡ್ ಲಕ್ ರೋಡ್ ಹೊರತು ಪಡಿಸಿ ನಗರ ವ್ಯಾಪ್ತಿಯ ಉಳಿದ ಪ್ರದೇಶಗಳಲ್ಲಿ ಮೇ.31 ರಂದು ಬೆಳಿಗ್ಗೆ 8ರಿಂದ ಮಧ್ಯಹ್ನಾ 2 ಗಂಟೆ ವರೆಗೆ ಕಿರಾಣಿ ಅಂಗಡಿ, ತರಕಾರಿ ಅಂಗಡಿ, ಬೇಕರಿ, ಔಷಧ ಅಂಗಡಿ, ಸಲೂನ್ಸ್, ಗ್ಯಾರೇಜ್, ಪೆಟ್ರೋಲ್ ಬಂಕ್, ಮಾಂಸದ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. 

ಭಾನುವಾರದಂದು ಸಂಪೂರ್ಣ ಲಾಕ್ಡೌನ್‍ಗಾಗಿ ನೀಡಿದ್ದ ಆದೇಶವನ್ನು ರಾಜ್ಯಸರ್ಕಾರ ಸಾರ್ವಜನಿಕರ ಒತ್ತಡದ ಮೇರೆಗೆ ಹಿಂಪಡೆದುಕೊಂಡಿದ್ದು ಭಾನುವಾರ ಜನತಾ ಕಫ್ರ್ಯೂ ಇರದೆ ಬೆಳಿಗ್ಗೆ 7ರಿಂದ ಸಂಜೆ7 ಗಂಟೆ ವರೆಗೆ ಲಾಕ್ಡೌನ್ ಸಡಿಲಿಕೆಯ ಆದೇಶವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಜಾರಿಗೊಳಿಸಿದ್ದಾರೆ.  

ಭಾನುವಾರದ ಲಾಕಡೌನ್ ಸಡಿಲಿಕೆ ಕುರಿತಂತೆ ಭಟ್ಕಳದ ಜನರಲ್ಲಿ ಗೊಂದಲ ಮೂಡಿಸುವಂತಹ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಭಟ್ಕಳದಲ್ಲಿ ಲಾಕ್ಡೌನ್ ಸಡಿಲಿಕೆ ಇರುವುದಿಲ್ಲ, ಇಲ್ಲಿ ಮಾತ್ರ ಕಫ್ರ್ಯೂ ಜಾರಿಯಲ್ಲಿರುತ್ತದೆ ಎಂದು ಬಿಂಬಿಸಿ ಭಟ್ಕಳವನ್ನು ಬೇರೆಯೆ ರೀತಿಯಲ್ಲಿ ಬಿಂಬಿಸುವ  ಪ್ರಯತ್ನಗಳು ಮಾಧ್ಯಮಗಳ ಮೂಲಕ ನಡೆಯುತ್ತಿವೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. 

ಈ ಹಿನ್ನೆಲೆಯಲ್ಲಿ ಭಟ್ಕಳ ಸಹಾಯಕ ಆಯುಕ್ತರನ್ನು ಸಂಪರ್ಕಿಸಿದಾಗ ಮೇಲಿನಂತೆ ಸ್ಪಷ್ಟೀಕರಣ ನೀಡಿದ್ದು ಭಟ್ಕಳ ರಾಜ್ಯದಿಂದ ಹೊರಗಡೆಯಿಲ್ಲ ಸರ್ಕಾರದ ಎಲ್ಲ ಆದೇಶಗಳನ್ನು ಭಟ್ಕಳಕ್ಕೂ ಅನ್ವಯಿಸುತ್ತಿದ್ದು ನಾಳೆ ಭಾನುವಾರ ಬೆಳಿಗ್ಗೆ 8ರಿಂದ ಮ.2 ಗಂಟೆ ವರೆಗೆ ಎಂದಿನಂತೆ ಲಾಕ್‍ಡೌನ್ ಸಡಿಲಿಕೆ ಇದ್ದು ಸಾರ್ವಜನಿಕರು ತನ್ನ ದೈನಂದಿನ ಚಟುವಟಿಗಳಲ್ಲಿ ಭಾಗಹವಿಸಬಹುದಾಗಿದೆ ಎಂದು ತಿಳಿಸಿದ್ದಾರೆ. 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...