ಫೆಬ್ರವರಿ 5 ರಂದು ಭಟ್ಕಳದಲ್ಲಿ ಮ್ಯಾರಥಾನ್‌ 2023": ಕ್ಯಾನ್ಸರ್ ಜಾಗ್ರತೆ ಗಾಗಿ ಕಾರ್ಯಕ್ರಮ

Source: S O news | By MV Bhatkal | Published on 26th January 2023, 12:18 AM | Coastal News | Don't Miss |

ಭಟ್ಕಳ : ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಕ್ರಿಯಾಶೀಲ ಗೆಳೆಯರ ಸಂಘ ಮತ್ತು ಭಟ್ಕಳ ಪೊಲೀಸ್ ಇಲಾಖೆ, ತಾಲೂಕು ಆರೋಗ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ವಿವಿಧ ಸರ್ಕಾರಿ ಇಲಾಖೆ,  ಖಾಸಗಿ ಸಂಸ್ಥೆಗಳು, ತಾಲ್ಲೂಕಿನ ವಿವಿಧ ಸ್ಪೋರ್ಟ ಕ್ಲಬ್‌ ಗಳು ಹಾಗು ಭಟ್ಕಳದ ನಾಗರಿಕರ ಸಹಯೋಗದೊಂದಿಗೆ ಫೆಬ್ರವರಿ 5 ಭಾನುವಾರದಂದು "ಭಟ್ಕಳ 5ಕೆ ಮ್ಯಾರಥಾನ್ 2023"  ಕ್ಯಾನ್ಸರ್ ಜಾಗ್ರತಿಗಾಗಿ ಕಾರ್ಯಕ್ರಮವು ನಡೆಯಲಿದೆ ಎಂದು ಕ್ರಿಯಾಶೀಲ ಗೆಳೆಯರ ಸಂಘದ ಅಧ್ಯಕ್ಷ ದೀಪಕ ನಾಯ್ಕ ಹೇಳಿದರು. 

ಅವರು ಬುಧವಾರದಂದು ಇಲ್ಲಿನ ಭಟ್ಕಳ ಅರ್ಬನ ಕೋ ಆಪರೇಟಿವ್ ಬ್ಯಾಂಕ ಸಭಾಭವನದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
'ಭಟ್ಕಳದ ಇತಿಹಾಸದಲ್ಲಿಯೇ ಇದು ಮೊದಲ ಮ್ಯಾರಥಾನ್ ಆಗಿದ್ದು, ಜನರಲ್ಲಿ ಕ್ಯಾನ್ಸರ್ ಕುರಿತಾದ ಜಾಗ್ರತಿ ಹಾಗೂ ಮಾಹಿತಿ ತಲುಪಿಸಬೇಕೆಂಬ ಉದ್ದೇಶದಿಂದ ಆಯೋಜಿಸಲಾಗಿದೆ. ಈ ಕುರಿತಾದ ನುರಿತ ವೈದ್ಯರು ಸಹ ಮಾಹಿತಿ ನೀಡಲಿದ್ದಾರೆ. 
ಇಲ್ಲಿನ ಯಲ್ವಡಿಕವೂರ ಪಂಚಾಯತನ ಪಿಯು ಕಾಲೇಜು ಮೈದಾನದಿಂದ ಆರಂಭಗೊಂಡು ಸರ್ಪನಕಟ್ಟೆ ಮಾರ್ಗವಾಗಿ ಪುರವರ್ಗ ಜೋಸೆಪ್ ಚರ್ಚ ಮಾರ್ಗವಾಗಿ ಕಾಸಮುಡಿ ದೇವಸ್ಥಾನ ಚೌಥನಿ ರಸ್ತೆಯಿಂದ ಹೂವಿನ ಪೇಟೆ ರಸ್ತೆಯಾಗಿ ಮಾರಿಗುಡಿ ದೇವಸ್ಥಾನದ ರಸ್ತೆಯಿಂದ ಪುರಸಭೆ, ಭಟ್ಕಳ ಅರ್ಬನ ಬ್ಯಾಂಕ್ ರಸ್ತೆ, ಪಿಎಲ್ಡಿ ಬ್ಯಾಂಕ್, ಸಂಶುದ್ದೀನ ಸರ್ಕಲ ಮಾರ್ಗವಾಗಿ ಸಾಗರ ರಸ್ತೆಯಿಂದ ಪೋಲೀಸ್ ಇಲಾಖಾ ಮೈದಾನದಲ್ಲಿ ಮ್ಯಾರಥಾನ್ ಮುಕ್ತಾಯಗೊಳ್ಳಲಿದೆ‌. ಫೆಬ್ರವರಿ 5 ರಂದು ಯಲ್ವಡಿಕವೂರನ ಪಿಯು ಕಾಲೇಜಿನಲ್ಲಿ ಮುಂಜಾನೆ 5.30 ಕ್ಕೆ ಆಸಕ್ತರು ಸೇರಿದ್ದಲ್ಲಿ 6.30 ಕ್ಕೆ ಮ್ಯಾರಥಾನ್ ಆರಂಭಗೊಳ್ಳಲಿದೆ ಎಂದರು.

ಮ್ಯಾರಥಾನನ್ನು ಒಟ್ಟು 5.5 ಕಿಮೀ. ಗೆ ನಿಗದಿ ಮಾಡಲಾಗಿದ್ದು, ಇದರಲ್ಲಿ ವಯಸ್ಸಿನ ಆಧಾರದ ಮೇಲೆ ನಾಲ್ಕು ವಿಭಾಗವಾಗಿ ‌ಮ್ಯಾರಥಾನ ಆರಂಭಿಸಲಿದ್ದೇವೆ.
5 ರಿಂದ 15 ವಯಸ್ಸಿನವರಿಗೆ 1.5 ಕಿ.ಮೀ., 16 ರಿಂದ 35 ವಯಸ್ಸಿನವರಿಗೆ 5.5 ಕಿ.ಮೀ., 36 ರಿಂದ 50 ವಯಸ್ಸಿನವರಿಗೆ 5.5 ಕಿ.ಮೀ. ಹಾಗೂ 50 ವರ್ಷ ಮೇಲ್ಪಟ್ಟವರಿಗೆ 1.5 ಕಿ.ಮೀ. ಮ್ಯಾರಥಾನ್ ನಿಗದಿ ಮಾಡಲಾಗಿದ್ದು, ನಾಲ್ಕು ವಿಭಾಗದಲ್ಲಿ ಒಟ್ಟು 12 ಮಂದಿ ವಿಜೇತರನ್ನು ಪ್ರಥಮ, ದ್ವೀತಿಯ ಹಾಗೂ ತ್ರತೀಯ ಸ್ಥಾನ ಆಯ್ಕೆ ಮಾಡಿ ಟ್ರೋಫಿಯ ಜೊತೆಗೆ ಇ- ಸರ್ಟಿಫಿಕೇಟ್ ಸಹ ನೀಡಲಿದ್ದೇವೆ ಎಂದ ಅವರು ಪಾಲ್ಗೊಳ್ಳುವ ಎಲ್ಲರು ಅವರ ವಯಸ್ಸಿನ ನಿಗದಿತ ದಾಖಲೆಯಾದ ಆಧಾರ ಕಾರ್ಡ್, ಗುರುತಿನ ಚೀಟಿಯನ್ನು ತರತಕ್ಕದಾಗಿದೆ ಎಂದು ಹೇಳಿದರು.

ಮ್ಯಾರಥಾನನಲ್ಲಿ ಪಾಲ್ಗೊಂಡ ಎಲ್ಲರಿಗೂ ಸಹ ಇ-ಸರ್ಟಿಪಿಕೇಟ್ ಸಹ ನೀಡಲಿದ್ದು, ಅಂದಾಜು 500 ಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಇವೆ ಎಂದ ಅವರು ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಈ ಮ್ಯಾರಥಾನಗೆ ರಿಜಿಸ್ಟರ್ ಮಾಡಿಸಲು ಜನವರಿ 31 ಕೊನೆಯ ದಿನಾಂಕವಾಗಿದ್ದು, 
ಪಾಂಡುರಂಗ ನಾಯ್ಕ - 9141629861, 
ಮನಮೋಹನ ನಾಯ್ಕ- 9980431987, ರಮೇಶ ಖಾರ್ವಿ - 9590923664, ಶ್ರೀಕಾಂತ ನಾಯ್ಕ - 77609012112 ಇವರನ್ನು ಸಂಪರ್ಕಿಸಬಹುದಾಗಿದೆ. ಇಲ್ಲವಾದಲ್ಲಿ ಬಂದರ್ ರಸ್ತೆಯಲ್ಲಿನ ವೆಸ್ಟರ್ನ ಮನಿ ಎಕ್ಸಜೆಂಜ್ ಕಚೇರಿಯಲ್ಲಿ ರಿಜಿಸ್ಟಟ್ರೇಶನ ಫಾರ್ಮ ಲಭಿಸಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆ‌ಸಿಐ ರಮೇಶ ಖಾರ್ವಿ, ಕ್ರೀಯಾಶೀಲ ಗೆಳೆಯರ ಸಂಘದ ಪಾಂಡು ನಾಯ್ಕ, ವಿನಾಯಕ ನಾಯ್ಕ, ಕುದುರೆ ಬೀರಪ್ಪ ಯುವಕ ಸಂಘದ ಪ್ರಮುಖರಾದ ಅರುಣ ನಾಯ್ಕ,  ಸ್ಪಂದನ ಚಾರಿಟೇಬಲ್ ಟ್ರಸ್ಟ್ ನ ಭವಾನಿಶಂಕರ ನಾಯ್ಕ ಮುಂತಾದ ಸಂಘ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...