ಬರಿದಾಗುತ್ತಿರುವ ಇಂಧನದಿಂದ ಮುಂದಿನ ದಿನಗಳಲ್ಲಿ ಆತಂಕದ ಸ್ಥಿತಿ ನಿರ್ಮಾಣ-ಭಾರ್ಗವ ಕಳವಳ

Source: sonews | By Staff Correspondent | Published on 12th November 2019, 5:38 PM | Coastal News |

ಭಟ್ಕಳ : ಪೆಟ್ರೋಲ್, ಡಿಸೇಲ್ ಸೇರದಂತೆ ನೈಸರ್ಗಿಕ ಇಂಧನಗಳನ್ನು ಇಂದು ಮೀತಿಯಲ್ಲದೆ ಬಳಸಲಾಗುತ್ತದೆ. ಸುಲಭವಾಗಿ ಸಿಕ್ಕುತ್ತಿರುವ ಇಂಧನಗಳ ದುರುಪಯೋಗ ಹೆಚ್ಚುತ್ತಿದೆ. ಇದರಿಂದ ಮುಂದಿನ ಕೆಲವು ವರ್ಷಗಳಲ್ಲಿ ಇದೆಲ್ಲಾ ಖಾಲಿಯಾಗಿ ಆತಂಕದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹುಬ್ಬಳ್ಳಿ ಎಲ್‍ಪಿಜಿ ಸೇಲ್ಸ್‍ನ ಪಿ.ವಿ.ಆರ್ ಭಾರ್ಗವ ಕಳವಳ ವ್ಯಕ್ತಪಡಿಸಿದರು.
  
ಅವರು ಭಟ್ಕಳ ತಾಲೂಕಿನ ಚಿತ್ರಾಪುರದಲ್ಲಿರುವ ಶ್ರೀವಲಿ ಪ್ರೌಢಶಾಲೆಯಲ್ಲಿ  ಇಂಡಿಯನ್ ಆಯಿಲ್ ಕಾರ್ಪರೇಶನ್, ರಂಜನ್ ಇಂಡೇನ್ ಎಜೆನ್ಸಿ ವತಿಯಿಂದ ವಿದ್ಯಾರ್ಥಿಗಳಿಗಾಗಿ ನಡೆದ ಸಕ್ಷಮ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಇಂದಿನ ಯುವಪೀಳಿಗೆ ಪರ್ಯಾಯ ಮಾರ್ಗದತ್ತ ಯೋಚಿಸಬೇಕಿದೆ. ಪ್ರೌಢಾವ್ಯಸ್ಥೆಯಲ್ಲಿರುವ ವಿದ್ಯಾರ್ಥಿಗಳು ನಮ್ಮಿಂದ ತಿಳಿದ ಮಾಹಿತಿಯನ್ನು ಪಾಲಕರು, ನೆರೆಹೊರೆಯವರೊಂದಿಗೆ ಹಂಚಿಕೊಂಡು ಇದರ ಕುರಿತು ಮಾಹಿತಿ ನೀಡಬೇಕು ಎಂದರು. 

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್ ಮುಂಜಿ, ಪತ್ರಕರ್ತ ಸಂಘದ ಅಧ್ಯಕ್ಷ ರಾಮಚಂದ್ರ ಕಿಣಿ, ಅಗ್ನಿಶ್ಯಾಮಕ ದಳದ ಎಸ್. ರಮೇಶ ಮಾತನಾಡಿದರು. ಶ್ರೀವಲಿ ಪ್ರೌಢಶಾಲೆಯ ಟ್ರಸ್ಟಿ ನಾರಾಯಣ ಮಲ್ಲಾಪುರ ಕಾರ್ಯಕ್ರಮ ಉದ್ಘಾಟಿಸಿದರು. 

ರಂಜನ್ ಇಂಡೇನ ಎಜೆನ್ಸಿಯ ಶಿವಾನಿ ಶಾಂತರಾಮ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಮುಖ್ಯೋಪಾಧ್ಯಾಯಿನಿ ಮಮತಾ ಭಟ್ಕಳ ಸ್ವಾಗತಿಸಿದರು. ಶಿಕ್ಷಕ ಸಂಜಯ ಗುಡಿಗಾರ ಕಾರ್ಯಕ್ರಮ ನಿರ್ವಹಿಸಿದರೆ, ಶಾಲೆಯ ರೇಷ್ಮಾ ನಾಯಕ ವಂದಿಸಿದರು.


 

Read These Next