ಸೈಬ‌ರ್ ಕ್ರೈಂ ವಿರುದ್ಧ ಎಚ್ಚರವಿರಲಿ; ಜನತೆಗೆ ಮೋದಿ ಕರೆ 'ಡಿಜಿಟಲ್ ಬಂಧನ' ದ ಬೆದರಿಕೆಗೆ ಬಲಿಪಶುವಾಗದಂತೆ ಕಿವಿಮಾತು

Source: Vb | By I.G. Bhatkali | Published on 28th October 2024, 3:42 PM | National News |

ಹೊಸದಿಲ್ಲಿ: 'ಡಿಜಿಟಲ್ ಬಂಧನ' ದಂತಹ ಸೈಬ‌ರ್ ಅಪರಾಧಗಳು ಸಮಾಜದ ಎಲ್ಲಾ ವರ್ಗಗಳನ್ನು ಬಾಧಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿಯವರು, ಯಾವುದೇ ತನಿಖಾ ಏಜೆನ್ಸಿಯು ಯಾರನ್ನೂ ತನಿಖೆಗಾಗಿ ದೂರವಾಣಿ ಅಥವಾ ವೀಡಿಯೊ ಕರೆ ಮೂಲಕ ಸಂಪರ್ಕಿಸುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಇಂತಹ ಸನ್ನಿವೇಶಗಳು ಎದುರಾದಾಗ 'ನಿಲ್ಲು, ಯೋಚಿಸು ಹಾಗೂ ಕ್ರಮ ಕೈಗೊಳ್ಳು' ಎಂಬ ಮಂತ್ರವನ್ನು ಅಳವಡಿಸಿಕೊಳ್ಳಬೇಕೆಂದು ಅವರು ದೇಶದ ಜನತೆಗೆ ಕರೆ ನೀಡಿದ್ದಾರೆ.

ರವಿವಾರ ತನ್ನ 'ಮನ್ ಕಿ ಬಾತ್' ಬಾನುಲಿ ಭಾಷಣದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ಡಿಜಿಟಲ್ ಅಪರಾಧಗಳನ್ನು ಹತ್ತಿಕ್ಕಲು ರಾಜ್ಯಗಳು ತನಿಖಾ ಸಂಸ್ಥೆಗಳ ಜೊತೆ ಕೈಜೋಡಿಸಿ ಕೆಲಸ ಮಾಡುತ್ತಿವೆ. ಆದರೆ ಸೈಬರ್ ಅಪರಾಧಗಳಿಗೆ ಬಲಿಪಶುವಾಗುವುದರಿಂದ ತಮ್ಮನ್ನು ರಕ್ಷಿಸಿಕೊಳ್ಳುವುದಕ್ಕೆ ಜನತೆ ಜಾಗೃತರಾಗಿರುವುದು ಅತ್ಯಗತ್ಯ ಎಂದವರು ಹೇಳಿದರು.

ಕ್ರಿಮಿನಲ್‌ಗಳು ತಮ್ಮ ಸಂಭಾವ್ಯ ಬಲಿಪಶುಗಳ ಕುರಿತಾಗಿ ವಿಶ್ವತವಾದ ಮಾಹಿತಿಯನ್ನು ಕಲೆಹಾಕಿದ ನಂತರ, ತನಿಖಾ ಏಜೆನ್ಸಿಗಳ ಅಧಿಕಾರಿಗಳ ಸೋಗಿನಲ್ಲಿ ಜನರನ್ನು ಹೇಗೆ ವಂಚಿಸುತ್ತಿದ್ದಾರೆಂಬುದನ್ನು ವಿವರಿಸಲು ಪ್ರಧಾನಿಯವರು ತನ್ನ ಭಾಷಣದ ನಡುವೆ ಸಾಂದರ್ಭಿಕ ವೀಡಿಯೊ ಒಂದನ್ನು ಪ್ರಸಾರ ಮಾಡಿದರು.

ಇಂತಹ ಪ್ರಕರಣಗಳು ಎದುರಾದಾಗ ಜನರು ಸಂಭಾಷಣೆಗಳನ್ನು ದಾಖಲಿಸಿಕೊಳ್ಳಬೇಕು ಹಾಗೂ ಸ್ಕ್ರೀನ್ ಶಾಟ್ ಗಳನ್ನು ತೆಗೆದುಕೊಳ್ಳಬೇಕೆಂದು ಅವರು ಕರೆ ನೀಡಿದರು. ಅನಿಮೇಶನ್‌ ಜಗತ್ತಿನಲ್ಲಿ ಭಾರತೀಯ ಪ್ರತಿಭೆಗಳಿಂದ ಕ್ರಾಂತಿ ಅನಿಮೇಶನ್ ಪ್ರಪಂಚದ ಮೇಲೆ ಭಾರತೀಯ ಪ್ರತಿಭೆಗಳು ಅಪಾರವಾದ ಪರಿಣಾಮವನ್ನು ಬೀರುತ್ತಿರುವ ಬಗ್ಗೆ ಪ್ರಧಾನಿಯವರು ತನ್ನ ಭಾಷಣದಲ್ಲಿ ಶ್ಲಾಘನೆ ವ್ಯಕ್ತಪಡಿಸಿದರು. ಭಾರತದಾದ್ಯಂತ ಸೃಜನಶೀಲ ಪ್ರತಿಭೆಗಳು ಹೊಸ ಅಲೆಯನ್ನೇ ಸೃಷ್ಟಿಸುತ್ತಿವೆ. 'ಮೇಡ್ ಇನ್ ಇಂಡಿಯಾ' ಹಾಗೂ 'ಮೇಡ್ ಬೈ ಇಂಡಿಯಾ' ಅಭಿಯಾನವು ಅನಿಮೇಶನ್ ಜಗತ್ತಿನಲ್ಲಿ ಪ್ರಕಾಶಮಾನವಾಗಿ ಬೆಳಗುತ್ತಿವೆಯೆಂದು ಅವರು ಹೇಳಿದರು.

ಛೋಟಾ ಭೀಮ್, ಕೃಷ್ಣ ಹಾಗೂ ಮೋಟುಪತ್ತುನಂತಹ ಭಾರತೀಯ ಅನಿಮೇಶನ್ ಪಾತ್ರಗಳು ವ್ಯಾಪಕವಾದ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಭಾರತೀಯ ಕಂಟೆಂಟ್ ಹಾಗೂ ಸೃಜನಶೀಲತೆಯ ಜಗತ್ತಿನಾದ್ಯಂತ ಮೆಚ್ಚುಗೆಯನ್ನು ಗಳಿಸುತ್ತಿವೆ ಎಂದು ಪ್ರಧಾನಿ ಹರ್ಷ ವ್ಯಕ್ತಪಡಿಸಿದರು. ಅನಿಮೇಶನ್ ಜಗತ್ತಿನಲ್ಲಿ ಕ್ರಾಂತಿ ಸೃಷ್ಟಿಸುವ ದಾರಿಯಲ್ಲಿ ಭಾರತವು ಸಾಗುತ್ತಿದೆ ಹಾಗೂ ಭಾರತೀಯ ವೀಡಿಯೊಗೇಮ್ ಗಳು ಕೂಡಾ ಜನಪ್ರಿಯತೆ ಪಡೆದುಕೊಳ್ಳುತ್ತಿವೆಯೆಂದರು.

ಆತ್ಮನಿರ್ಭರ ಭಾರತ: ಪ್ರತಿಯೊಂದು ವಲಯದಲ್ಲಿಯೂ ಆತ್ಮನಿರ್ಭರ ಭಾರತವು ದಾಪುಗಾಲಿಡುತ್ತಿದೆ ಎಂದು ಹೇಳಿದ ಮೋದಿ ಅವರು, ದೇಶವು ಪ್ರಸಕ್ತ 85ಕ್ಕೂ ಅಧಿಕ ರಾಷ್ಟ್ರಗಳಿಗೆ ತನ್ನ ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ ಎಂದು ಹೇಳಿದರು.

Read These Next

ಸಿಎಂ ಸಿದ್ದರಾಮಯ್ಯರಿಂದ ಪ್ರಧಾನಿ ಮೋದಿ ಭೇಟಿ; ನೀರಾವರಿ ಯೋಜನೆಗಳಿಗೆ ನೆರವು ಕೋರಿ ಮನವಿ; ನಬಾರ್ಡ್ ಸಾಲದ ಪ್ರಮಾಣ ಕಡಿತಕ್ಕೆ ಆಕ್ಷೇಪ

ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಭದ್ರಾ ಮೇಲ್ದಂಡೆ, ಮಹಾದಾಯಿ, ಮೇಕೆದಾಟು ನೀರಾವರಿ ...

ಪೊಲೀಸರು-ಪ್ರತಿಭಟನಾಕಾರರ ನಡುವೆ ಘರ್ಷಣೆ; ತನಿಖೆಗೆ ಮೂವರು ಸದಸ್ಯರ ನ್ಯಾಯಾಂಗ ಆಯೋಗ ರಚನೆ

ಸಂಭಲ್‌ನಲ್ಲಿ ನವೆಂಬರ್ 24ರಂದು ನಡೆದ ಹಿಂಸಾಚಾರದ ತನಿಖೆಗೆ ಮೂವರು ಸದಸ್ಯರ ನ್ಯಾಯಾಂಗ ತನಿಖಾ ಆಯೋಗವನ್ನು ರಚಿಸಲಾಗಿದೆ ಎಂದು ...

ಸಂಭಲ್ ಜಾಮಾ ಮಸೀದಿ ಆವರಣದಲ್ಲಿ ಸರ್ವೇ; ವಿಚಾರಣಾ ನ್ಯಾಯಾಲಯದ ಕಲಾಪಗಳಿಗೆ ಸುಪ್ರೀಂ ತಡೆ

ಸರ್ವೇ ಆದೇಶವನ್ನು ಪ್ರಶ್ನಿಸಿ ಮಸೀದಿ ಸಮಿತಿಯು ಸಲ್ಲಿಸಿರುವ ಅರ್ಜಿಯನ್ನು ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಪಟ್ಟಿ ಮಾಡುವವರೆಗೆ ...