ಉಡುಪಿ: ಪಂಚಗಂಗಾ ಎಕ್ಸ್‌ಪ್ರೆಸ್ ಸಂಚಾರ ಸಮಯದಲ್ಲಿ ವ್ಯತ್ಯಯ

Source: S O News | By I.G. Bhatkali | Published on 30th November 2021, 9:26 AM | Coastal News | Don't Miss |

ಉಡುಪಿ: ಕೆಎಸ್‌ಆರ್‌ ಬೆಂಗಳೂರು ಸಿಟಿ ಜಂಕ್ಷನ್ ಹಾಗೂ ಕಾರವಾರ ನಡುವೆ ಪ್ರತಿದಿನ ಸಂಚರಿಸುವ ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿನ ಸಂಚಾರ ಸಮಯದಲ್ಲಿ ಡಿ.1ರಿಂದ ಅಲ್ಪ ವ್ಯತ್ಯಯ ಉಂಟಾಗಲಿದೆ.

ಪ್ರತಿದಿನ ಕೆಎಸ್‌ಆರ್ ಬೆಂಗಳೂರು ಸಿಟಿ ಜಂಕ್ಷನ್ ನಿಂದ ನಿಗದಿತ ಸಮಯ ಸಂಜೆ 6:40ಕ್ಕೆ ಹೊರಡುವ ರೈಲು ಸುರತ್ಕಲ್ (ಬೆಳಗಿನ ಜಾವ 3:56) ಹಾಗೂ ಮುಲ್ಕಿ (4:12ಕ್ಕೆ) ಹಿಂದಿನ ಸಮಯಕ್ಕೆ ತಲುಪಲಿದೆ. ಆದರೆ ಉಡುಪಿ ನಿಲ್ದಾಣಕ್ಕೆ ಮೂರು ನಿಮಿಷ ಮುಂಚಿತವಾಗಿ -ಹಿಂದಿನ 4:38ಕ್ಕೆ ಬದಲು 4:35- ತಲುಪಲಿದೆ. ನಂತರ ಉಡುಪಿಯಿಂದ ಕಾರವಾರದ ನಡುವೆ ನಿಲುಗಡೆ ಇರುವ ಎಲ್ಲಾ ನಿಲ್ದಾಣಗಳಲ್ಲೂ ತಲಾ 2 ನಿಮಿಷ ನಿಲ್ಲಲಿದೆ. ಆದರೆ ನಿಲ್ದಾಣಕ್ಕೆ ಬರುವ ಸಮಯದಲ್ಲಿ ವ್ಯತ್ಯಾಸವಾಗಲಿದೆ. ಎಂದು ಪ್ರಕಟನೆ ತಿಳಿಸಿದೆ.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...