ಬೆಳ್ತಂಗಡಿ:ಅಕ್ರಮ ಕಲ್ಲು ಗಣಿಗಾರಿಕೆಗೆ ದಾಳಿ – ಇಬ್ಬರ ಬಂಧನ

Source: so news | Published on 21st March 2020, 11:52 PM | State News | Don't Miss |

ಬೆಳ್ತಂಗಡಿ:ಅಕ್ರಮ ಕಲ್ಲು ಗಣಿಗಾರಿಕೆಗೆ ದಾಳಿ – ಇಬ್ಬರ ಬಂಧನ
ಮಂಗಳೂರು: ಬೆಳ್ತಂಗಡಿ ತಾಲೂಕು ನಾವೂರು ಗ್ರಾಮದ ಓಡಿಕಾರು ಎಂಬಲ್ಲಿ ಅಕ್ರಮ ವಾಗಿ ನಡೆಯುತ್ತಿದ್ದ ಕಪ್ಪು ಕಲ್ಲು ಗಣಿಗಾರಿಕೆ ಮಾಡುತ್ತಿದ್ದಲ್ಲಿಗೆ ಬೆಳ್ತಂಗಡಿ ತಾಲ್ಲೂಕು ತಹಶೀಲ್ದಾರ್ ದಾಳಿ ನಡೆಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬೆಳ್ತಂಗಡಿ ತಾಲೂಕು ಲಾಯಿಲ ನಿವಾಸಿ ಪ್ರತೀಕ್ ಸಾಲ್ಯಾನತ್ ಮತ್ತು ವೇಣೂರು ನಿವಾಸಿ ಅಣ್ಣಪ್ಪ ಎಂದು ಗುರುತಿಸಲಾಗಿದೆ.
ಮಾರ್ಚ್ 19 ರಂದು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ನಾವೂರು ಗ್ರಾಮದ ಓಡಿಕಾರು ಎಂಬಲ್ಲಿ ಅಕ್ರಮ ವಾಗಿ ನಡೆಯುತ್ತಿದ್ದ ಕಪ್ಪು ಕಲ್ಲು ಗಣಿಗಾರಿಕೆ ಮಾಡುತ್ತಿದ್ದಲ್ಲಿಗೆ ಬೆಳ್ತಂಗಡಿ ತಾಲ್ಲೂಕು ತಹಶಿಲ್ದಾರವರು ದಾಳಿ ನಡೆಸಿದ್ದು, ಸ್ಥಳದಲ್ಲಿ ಜಿಲೆಟಿನ್ ಕಡ್ಡಿಗಳು ವೈರ್ ಜೀವಂತ ಮದ್ದುಗಳು -11, ಚೀಲದಲ್ಲಿ ಜಿಲೆಟಿನ್ ಕಡ್ಡಿಗಳು -15 ಇದ್ದು, ಕೆಲಸಕ್ಕೆ ಬಳಸಿದ ಟ್ರಾಕ್ಟರ್ ಟಿ ನಂಬ್ರ: 33-ಎಎಕ್ಸ್ 7275, ಹಳದಿ ಇಟಾಚಿ ನಂಬ್ರ:310, ಕೆಂಪು ಇಟಾಚಿ ನಂಬ್ರ:22922 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 25 ಲಕ್ಷ ಆಗಿರುತ್ತದೆ.ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read These Next

ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದ ನಿಯೋಗ ಮಹಾರಾಷ್ಟ್ರಕ್ಕೆ ಭೇಟಿ ಕೃಷ್ಣಾ ನದಿ ನೀರು ಬಳಕೆ, ನೆರೆ ನಿಯಂತ್ರಣ ಕುರಿತು ಚರ್ಚೆ

ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದ ನಿಯೋಗ ಮಹಾರಾಷ್ಟ್ರಕ್ಕೆ ಭೇಟಿ ಕೃಷ್ಣಾ ನದಿ ನೀರು ಬಳಕೆ, ನೆರೆ ನಿಯಂತ್ರಣ ಕುರಿತು ಚರ್ಚೆ

ಕೋವಿಡ್ ನಿಯಂತ್ರಣ ಕಾರ್ಯ ನಿರ್ಲಕ್ಷಿಸುವ ಅಧಿಕಾರಿಗಳು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ : ಜಿಲ್ಲಾಧಿಕಾರಿ ನಿತೇಶ್ ಪಾಟೀಲ