ಬೆಳಗಾವಿ ಜಿಲ್ಲಾಮಟ್ಟದ ಹ್ಯಾಂಡ್‍ಬಾಲ್ ಸ್ಪರ್ಧೆ: ಪ್ರಥಮ ಸ್ಥಾನ

Source: sonews | By Staff Correspondent | Published on 19th September 2019, 11:54 PM | State News |

ಬೆಳಗಾವಿ: ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಳಗಾವಿ ಹಾಗೂ ಸೇಂಟ್ ಪಾಲ್ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಬೆಳಗಾವಿ ಜಿಲ್ಲಾಮಟ್ಟದ ಹ್ಯಾಂಡ್‍ಬಾಲ್ ಸ್ಪರ್ಧೇಯಲ್ಲಿ ಗೋಪಾಲಜಿ ಇಂಟಿಗ್ರೇಟೆಡ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದು ವಿಜೇತರಿಗೆ ಸಂಸ್ಥೆಯ ಚೇರಮನ್, ಕಾರ್ಯದರ್ಶಿ, ಪ್ರಾಚಾರ್ಯರು, ಉಪ-ಪ್ರಾಚಾರ್ಯರು, ಆಡಳಿತಾಧಿಕಾರಿಗಳು ಹಾಗೂ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿ ವರ್ಗದವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 

ಅಕ್ಟೋಬರ 20 ರಂದು ಜೈನ ವಧು ವರ ಪರಿಚಯ ಮೇಳ 
ಬೆಳಗಾವಿ : ದಕ್ಷಿಣ ಭಾರತ ಜೈನ ಸಭೆ ಶಾಖೆ ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ್ ಬೆಳಗಾವಿ ವತಿಯಿಂದ ಕಳೆದ 11 ವರ್ಷಗಳಿಂದ ಜೈನ ವಧು-ವರ ಪರಿಚಯ ಮೇಳವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ 12 ನೇಯ ಜೈನ ವಧು-ವರ ಪರಿಚಯ ಮೇಳವನ್ನು ಇದೇ ಅಕ್ಟೋಬರ್ 20 2019 ರಂದು ಬೆಳಗಾವಿಯ ಧರ್ಮನಾಥ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಜೈನ ವಧು-ವರ ಪರಿಚಯ ಮೇಳದಲ್ಲಿ ಭಾಗವಹಿಸುವವರು ತಮ್ಮ ಹೆಸರುಗಳನ್ನು ನೋಂದಾಯಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಾಣಿಕಬಾಗ ದಿಗಂಬರ ಜೈನ ಬೋರ್ಡೀಂಗ ಹಳೆ ಪಿ.ಬಿ.ರಸ್ತೆ ಬೆಳಗಾವಿ. ಪೆÇ:0831-4213362. ಮೋ; ಕುಂತಿನಾಥ ಕಲಮನಿ ಮೊ:9480448108 , ನಿತೀನ ಪಾಟೀಲ ಮೋ: 8050099092 ಇಲ್ಲಿ ಸಂಪರ್ಕಿಸಲು ಕೋರಲಾಗಿದೆ. 

ಬೆನ್ನು ಮೂಳೆ ಉಚಿತ ತಪಾಸಣಾ ಶಿಬಿರ 
ಬೆಳಗಾವಿ: ಬೆಳಗಾವಿಯ ಮೂರನೇಯ ರೈಲು ಗೇಟ ಬಳಿವಿರುವ ವೇಣುಗ್ರಾಮ ಆಸ್ಪತ್ರೆಯಲ್ಲಿ ಶುಕ್ರವಾರ 20 ಅಕ್ಟೋಬರ ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಬೆನ್ನು ಮೂಳೆ ಕುರಿತು ಉಚಿತ ತಪಾಸಣೆ ಶೀಬಿರವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರು 0831-2413333 ಅಥವಾ 8884948333 ಇಲ್ಲಿ ಸಂಪರ್ಕಿಸಿ ಹೆಸರು ನೋಂದಾಯಿಸಲು ಕೋರಲಾಗಿದೆ. 
 

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...