ಮುರ್ಡೇಶ್ವರ ಲಯನ್ಸ್‍ನಿಂದ ಬ್ಯಾರಿಕೇಡ್ ದೇಣಿಗೆ

Source: sonews | By Staff Correspondent | Published on 1st August 2020, 4:56 PM | Coastal News | Don't Miss |

ಭಟ್ಕಳ: ಮುರ್ಡೇಶ್ವರದ ಲಯನ್ಸ್ ಕ್ಲಬ್ ವತಿಯಿಂದ ಪೋಲೀಸ್ ಇಲಾಖೆಗೆ 25000ರೂ. ಮೌಲ್ಯದ ಮೂರು ಬ್ಯಾರಿಕೇಡ್‍ಗಳನ್ನು ದೇಣಿಗೆಯಾಗಿ ನೀಡಿದರು. 

ಲಯನ್ಸ್ ಕ್ಲಬ್ ಅಧ್ಯಕ್ಷ ಗೌರೀಶ್ ಆರ್. ನಾಯ್ಕರವರ ಅಧ್ಯಕ್ಷತೆಯಲ್ಲಿ ರಸ್ತೆ ಸುರಕ್ಷತೆಯ ಕುರಿತಾಗಿ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ರಸ್ತೆ ನಿಯಮದ ಪಾಲನೆಗಾಗಿ ಬ್ಯಾರಿಕೇಡ್‍ಗಳನ್ನು ಮುರ್ಡೇಶ್ವರದ ಪೋಲೀಸ್ ಠಾಣೆಯ ಪೋಲೀಸ್ ಸಬ್ ಇನ್ಸ್‍ಪೆಕ್ಟರ್‍ರವರಿಗೆ ಹಸ್ತಾಂತರಿಸಲಾಯಿತು. 

ಈ ವೇಳೆ 317ಬಿ ಲಯನ್ ಜಿಲ್ಲೆಯ ಗವರ್ನರ್ ಡಾ.ಗಿರೀಶ್ ಕುಚಿನಾಡ, ಮಾತನಾಡಿ ರಸ್ತೆಯ ನಿಯಮಗಳನ್ನು ಪಾಲಿಸುವ ಮೂಲಕ ಸಂಭವನೀಯ ಅಪಘಾತಗಳನ್ನು ಹೇಗೆ ತಡೆಗಟ್ಟಬಹುದು ಎಂಬ ಕುರಿತು ಮಾಹಿತಿ ನೀಡಿದರು. 

ಲಯನ್ ಕಾರ್ಯದರ್ಶಿ ನಾಗೇಶ ಮಡಿವಾಳ, ಕೋಶಾಧ್ಯಕ್ಷರಾದ ಗೌರೀಶ ಟಿ. ನಾಯ್ಕ, ಲಯನ್ಸ್ ಕ್ಲಬ್ ಪದಾಧಿಕಾರಿಗಳು, ಸದಸ್ಯರು, ಪೋಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು. 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...