ಪಿ–305 ಬಾರ್ಜ್‌ ದುರಂತ: ಕ್ಯಾಪ್ಟನ್‌, ಇತರರ ವಿರುದ್ಧ ಎಫ್‌ಐಆರ್‌

Source: PTI | Published on 21st May 2021, 7:14 PM | National News |

ಮುಂಬೈ: ತೌತೆ ಚಂಡಮಾರುತದ ಪ್ರಭಾವಕ್ಕೆ ಸಿಲುಕಿ ಅರಬ್ಬಿ ಸಮುದ್ರದಲ್ಲಿ ಮುಳುಗಡೆಯಾದ ಪಿ–305 ಬಾರ್ಜ್‌ನ ಕ್ಯಾಪ್ಟನ್‌ ಮತ್ತು ಇತರ ಕೆಲವರ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

‘ಈ ಸಂಬಂಧ ಬಾರ್ಜ್‌ನ ಮುಖ್ಯ ಎಂಜಿನಿಯರ್‌ ರಹಮನ್‌ ಹುಸೈನ್‌ ಅವರು ಯೆಲ್ಲೋ ಗೇಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಆಧಾರದ ಮೇಲೆ ಕ್ಯಾಪ್ಟ್‌ನ್‌ ರಾಕೇಶ್‌ ಬಳ್ಳ ಸೇರಿದಂತೆ ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

‘ಕಳೆದ ಐದು ದಿನಗಳ ಹಿಂದೆ ಅರಬ್ಬಿ ಸಮುದ್ರದಲ್ಲಿ ಮುಳುಗಡೆಯಾದ ಪಿ–305 ಬಾರ್ಜ್‌ನಲ್ಲಿ 261 ಸಿಬ್ಬಂದಿ ಇದ್ದರು. ಗುರುವಾರದವರೆಗೆ 186 ಮಂದಿಯನ್ನು ರಕ್ಷಿಸಲಾಗಿದ್ದು, 49 ಮಂದಿ ಮೃತಪಟ್ಟಿದ್ಧಾರೆ. ಆ್ಯಂಕರ್‌ ನಿರ್ವಹಣೆಯ ಬೋಟ್‌ ವರಪ್ರದಾದಿಂದ ನಾಪತ್ತೆಯಾಗಿರುವ 11 ಮಂದಿ ಮತ್ತು ಬಾರ್ಜ್‌ನಿಂದ ನಾಪತ್ತೆಯಾಗಿರುವ 26 ಸಿಬ್ಬಂದಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...