ಬೆಂಗಳೂರು:ಶ್ರೇಷ್ಠದಿಂದ `ಕೀಟನಾಶಕಗಳಿಂದ ಸ್ವಾತಂತ್ರ್ಯ' ಅಭಿಯಾನ ಪ್ರಾರಂಭ

Source: so english | By Arshad Koppa | Published on 11th August 2017, 8:59 AM | State News | Guest Editorial |

ಬೆಂಗಳೂರು, ಆಗಸ್ಟ್ 10, 2017: ಭಾರತದ ಅತ್ಯಂತ ದೊಡ್ಡ ಸಾವಯವ ಆಹಾರ ಕಂಪನಿಗಳಲ್ಲಿ ಒಂದು ಹಾಗೂ ಭಾರತದ ಮುಂಚೂಣ ಯ ಸಾವಯವ ಆಹಾರ ಬ್ರಾಂಡ್ `24 ಮಂತ್ರ ಆಗ್ರ್ಯಾನಿಕ್' ಉತ್ಪನ್ನಗಳ ಪ್ರವರ್ತಕರಾದ ಶ್ರೇಷ್ಠ ನ್ಯಾಚುರಲ್ ಬಯೋಪ್ರಾಡಕ್ಟ್ಸ್ ಇಂದು ಆಗಸ್ಟ್ 12ರಿಂದ `ಕೀಟನಾಶಕಗಳಿಂದ ಸ್ವಾತಂತ್ರ್ಯ' ಅಭಿಯಾನವನ್ನು ಅನಾವರಣಗೊಳಿಸಿದ್ದು ಕೀಟನಾಶಕ ಮಿಶ್ರಿತ ಆಹಾರದ ವಿರುದ್ಧ ಹೋರಾಟವನ್ನು ಪ್ರಾರಂಭಿಸಿದೆ. ಈ ಅಭಿಯಾನವನ್ನು ಗೌರವಾನ್ವಿತ ಮೇಯರ್ ಜಿ.ಪದ್ಮಾವತಿ ಹೃದಯ ತಜ್ಞರು, ನ್ಯೂಟ್ರಿಷನಿಸ್ಟ್‍ಗಳು, ಡಯಾಬಿಟಾಲಜಿಸ್ಟ್‍ಗಳು, ಮಾಸ್ಟರ್ ಷೆಫ್‍ಗಳು, ಆಂಕಾಲಜಿಸ್ಟರು ಮತ್ತು ಪರಿಸರ ತಜ್ಞರ ಉಪಸ್ಥಿತಿಯಲ್ಲಿ ಅನಾವರಣಗೊಳಿಸಿದರು. ಈ ಅಭಿಯಾನ ಕೀಟನಾಶಕ ಮಿಶ್ರಿತ ಆಹಾರದ ದುಷ್ಪರಿಣಾಮಗಳ ಕುರಿತು ಅರಿವನ್ನು ಉಂಟು ಮಾಡುವುದು ಮತ್ತು ಆರೋಗ್ಯಕರವಾಗಿರಲು ಸಾವಯವ ಆಹಾರವನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ಸಾವಯವ ಕೃಷಿಯಿಂದ ಮಣ ್ಣನ ಆರೋಗ್ಯ ಮತ್ತು ಫಲವತ್ತತೆ ಉಳಿಯುತ್ತದೆ, ಮಣ ್ಣನಲ್ಲಿ ನೀರು ಉಳಿಸಿಕೊಳ್ಳುವ ಸಾಮಥ್ರ್ಯ ಹೆಚ್ಚಾಗುತ್ತದೆ, ಹಸಿರುಮನೆ ಅನಿಲಗಳ ಪರಿಣಾಮ ಕಡಿಮೆ ಮಾಡುತ್ತದೆ ಮತ್ತು ಪರಿಸರ ವ್ಯವಸ್ಥೆಗೆ ಪೂರಕವಾಗಿರುತ್ತದೆ. 

ಈ ಅಭಿಯಾನ ಗ್ರಾಹಕರಿಗೆ ವಿನೂತನ ಆಫರಿಂಗ್ ನೀಡುತ್ತಿದ್ದು ಗ್ರಾಹಕರು 24 ಮಂತ್ರ ಆಗ್ರ್ಯಾನಿಕ್ ಉತ್ಪನ್ನಗಳಲ್ಲಿ ಶೇ.30ರವರೆಗೆ ಉಳಿತಾಯ ಮಾಡಬಹುದು. ಗ್ರಾಹಕರು ಹೆಚ್ಚು ಬಳಸುವಂತೆ ಮಾಡಲು ಈ ವಿನೂತನ ಆಫರಿಂಗ್ ನೀಡುತ್ತಿದ್ದು ಈ ಅಭಿಯಾನದ ಅವಧಿಯಲ್ಲಿ ಶ್ರೇಷ್ಠ ನೀಡಿದೆ. ಸಾವಯವ ಆಹಾರ ಸಾಂಪ್ರದಾಯಿಕ ಆಹಾರಕ್ಕಿಂತ ಹೆಚ್ಚು ದುಬಾರಿ ಎಂದು ನಂಬಲಾಗಿದೆ. ಆದ್ದರಿಂದ ಶೇ.30ರಷ್ಟು ರಿಯಾಯಿತಿಯಿಂದ 24 ಮಂತ್ರ ಉತ್ಪನ್ನ ಶ್ರೇಣ ಯನ್ನು ಪ್ರಯತ್ನಿಸುವ ಮತ್ತು ಭಿನ್ನತೆಯನ್ನು ಅನುಭವಿಸುವ ಹಾಗೂ ಆರೋಗ್ಯಕರ ಜೀವನ ಆನಂದಿಸುವ ಅವಕಾಶ ಕಲ್ಪಿಸುತ್ತದೆ. 

`ನಮ್ಮ ಸಮಾಜವನ್ನು ಕೀಟನಾಶಕ ಮುಕ್ತವಾಗಿಸುವ ಈ ಸಾಮಾಜಿಕ ಅರಿವಿನ ಭಾಗವಾಗಲು ನನಗೆ ಬಹಳ ಸಂತೋಷವಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಆಹಾರದಲ್ಲಿ ಕಲಬೆರಕೆ ತಪ್ಪಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ಬಹಳ ಇತ್ತೀಚೆಗೆ ನಾವು ಕಲಬೆರಕೆ ಹಾಲು ಪೂರೈಕೆ ನಿರ್ಬಂಧಿಸಲು ಶಾಸನ ತಂದಿದ್ದೇವೆ. ಅಲ್ಲದೆ ಇತ್ತೀಚೆಗೆ ರಾಜ್ಯ ಆಹಾರ ಸುರಕ್ಷತೆ ಇಲಾಖೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯೊಂದಿಗೆ ಕಾರ್ಯ ನಿರ್ವಹಿಸಿ ಪ್ಲಾಸ್ಟಿಕ್ ಕಲಬೆರಕೆಯ ಸಕ್ಕರೆ ಮತ್ತು ಅಕ್ಕಿಯನ್ನು ಕಂಡುಕೊಳ್ಳಲು ತನಿಖೆಗೆ ಆದೇಶಿಸಿತು. ಕಲಬೆರಕೆ ಕುರಿತು ನಾಗರಿಕರು ಎಚ್ಚರದಿಂದ ಇರಬೇಕು ಮತ್ತು ಕಲಬೆರಕೆ ಕಂಡುಬಂದಾಗ ಕೂಡಲೇ ಹತ್ತಿರದ ಸಂಬಂಧಪಟ್ಟ ಅಧಿಕಾರಗಳಿಗೆ ದೂರು ನೀಡಿದರೆ ಕೂಡಲೇ ಕ್ರಮ ಕೈಗೊಳ್ಳಲು ಸಾಧ್ಯ. ಇಂದು ಈ ಎಲ್ಲ ಸಾಮಾಜಿಕ ಜಾಗೃತರು ಒಗ್ಗೂಡಿ ನಮ್ಮ ನಗರ ಬೆಂಗಳೂರನ್ನು ಕೀಟನಾಶಕ ಮುಕ್ತವಾಗಿಸಲು ಪ್ರತಿಜ್ಞೆ ಮಾಡೋಣ. ಈ ಉಪಕ್ರಮಕ್ಕೆ ಸಂಘಟಕರನ್ನು ಅಭಿನಂದಿಸುತ್ತೇನೆ' ಎಂದು ಬೆಂಗಳೂರಿನ ಗೌರವಾನ್ವಿತ ಮೇಯರ್ ಶ್ರೀಮತಿ ಜಿ.ಪದ್ಮಾವತಿ ಈ ಅಭಿಯಾನಕ್ಕೆ ಚಾಲನೆ ನೀಡಿ ಹೇಳಿದರು. 

`ಆಹಾರದ ಕಲಬೆರಕೆ ಭಾರತದಲ್ಲಿ ಗಂಭೀರ ಸಮಸ್ಯೆಯಾಗಿದ್ದು ಇದನ್ನು ಚಿಕ್ಕದಿರುವಾಗಲೇ ತಡೆಯಬೇಕು ಮತ್ತು ಕೀಟನಾಶಕಗಳು ಮತ್ತು ಆ್ಯಂಟಿ ಬಯೋಟಿಕ್ಸ್ ಬಳಕೆ ಆಹಾರದ ಸುರಕ್ಷತೆಯೊಂದಿಗೆ ರಾಜಿ ಮಾಡಿಕೊಳ್ಳುತ್ತದೆ. ಭಾರತದಲ್ಲಿ ಕೀಟನಾಶಕಗಳ ನಿಯಂತ್ರಣವಿಲ್ಲದ ಬಳಕೆ ಮತ್ತು ನಿರ್ವಹಣೆ ಆಹಾರ ಕಲಬೆರಕೆಗೆ ಪ್ರಮುಖ ಕಾರಣವಾಗಿದ್ದು ದೀರ್ಘಾವಧಿ ಆರೋಗ್ಯದ ಪರಿಣಾಮಗಳಾದ ಎಂಡೋಕ್ರೈನ್ ಸಮಸ್ಯೆ, ಬುದ್ಧಿಮಾಂದ್ಯತೆ, ಜನನ ದೋಷಗಳು ಮತ್ತು ಕ್ಯಾನ್ಸರ್ ಉಂಟು ಮಾಡುತ್ತದೆ' ಎಂದು ಖ್ಯಾತ ಚಿತ್ರನಟ ಮತ್ತು ಪರಿಸರವಾದಿ ಶ್ರೀ ಸುರೇಶ್ ಹೆಬ್ಳೀಕರ್ ಹೇಳಿದರು. 

ಪ್ರಚಾರಾಂದೋಲನ ಮತ್ತು ರಿಯಾಯಿತಿ ಮಾರಾಟ ಕೊಡುಗೆ ಪ್ರಕಟಿಸಿ ಮಾತನಾಡಿದ ಶ್ರೇಷ್ಠ ನ್ಯಾಚುರಲ್ ಬಯೋಪ್ರಾಡಕ್ಟ್ಸ್ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕ ರಾಜಶೇಖರ್ ರೆಡ್ಡಿ, ಸಾವಯವ ಎಂಬುದು ಕೇವಲ ಒಂದು ಆಕರ್ಷಣೆಯ ಪಟ್ಟಿಯಲ್ಲ. ಅದಕ್ಕಿಂತಲೂ ಮಿಗಿಲಾದುದು. ಅದೊಂದು ಜೀವನಶೈಲಿ. ಆಹಾರ ಪದಾರ್ಥಗಳ ಉತ್ಪಾದನೆಯ ಮೊದಲ ಕೃಷಿ ಚಟುವಟಿಕೆಯ ಕ್ಷಣದಿಂದಲೇ ಈ ಸಾವಯವ ಅಂಶ ಒಡಮೂಡುತ್ತದೆ. ಶ್ರೇಷ್ಠ ಕಂಪೆನಿ, ದೇಶೀಯವಾಗಿ ಬೆಳೆದ ಸಾವಯವ ಹಾಗೂ ಪೌಷ್ಠಿಕಾಂಶಭರಿತ ರುಚಿಕರ ಆಹಾರ ಪದಾರ್ಥಗಳನ್ನು ಒದಗಿಸುವ ಮೂಲಕ ಜನರ ಜೀವನವನ್ನು ಇನ್ನಷ್ಟು ಆರೋಗ್ಯದಾಯಕವಾಗಿಸುವ ಉದ್ದೇಶವನ್ನು ಹೊಂದಿದೆ. ಅದೇ ವೇಳೆ ಸಾವಯವ ಕೃಷಿ ಪದ್ಧತಿ ಅನುಸರಿಸುತ್ತಿರುವ ರೈತರಿಗೂ ನೆರವಾಗುವ, ಪ್ರೋತ್ಸಾಹ ನೀಡುವ ಚಿಂತನೆಯೂ ಇಲ್ಲಿದೆ. ಹಾಗಾಗಿಯೇ 'ಕ್ರಿಮಿನಾಶಕ ಮುಕ್ತ ಆಹಾರ' ಪ್ರಚಾರಾಂದೋಲನ ಹಮ್ಮಿಕೊಳ್ಳಲಾಗಿದೆ, ರಿಯಾಯಿತಿ ಕೊಡುಗೆಯನ್ನೂ ಪ್ರಕಟಿಸಲಾಗಿದೆ. ಎಲ್ಲ ಜನರೂ ಈ ಸಂದರ್ಭದ ಸದುಪಯೋಗ ಪಡೆದುಕೊಳ್ಳುವರು ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
'ಕ್ರಿಮಿನಾಶಕ ಮುಕ್ತ ಆಹಾರ' ಪ್ರಚಾರಾಂದೋಲನ ಕುರಿತು ವಿವರಿಸಿದ ಶ್ರೇಷ್ಠ ನ್ಯಾಚುರಲ್ ಬಯೋಪ್ರಾಡಕ್ಟ್ಸ್ ಪ್ರೈ.ಲಿ.ನ 'ಸಿಇಒ' ಎನ್.ಬಾಲಸುಬ್ರಹ್ಮಣ್ಯನ್, ನಮ್ಮದೇ ಆದ ಸಂಪ್ರದಾಯ ಮತ್ತು ಗುಣಮಟ್ಟದೆಡೆಗಿನ ಬದ್ಧತೆಯನ್ನು ಗಮನದಲ್ಲಿಟ್ಟುಕೊಂಡೇ ನೀರು, ಭೂಮಿ, ಆಹಾರ ಮತ್ತು ಗ್ರಾಹಕರ ಹಿತ ಸೇರಿದಂತೆ ಇಡೀ ಪರಿಸರದ ಹಿತವನ್ನು ಒಳಗೊಂಡಿರುವ ಈ ಸಾವಯವ ಆಹಾರ ಪ್ರಚಾರಾಂದೋಲನಕ್ಕೆ ಒತ್ತು ನೀಡಲಾಗಿದೆ ಎಂದರು.
ಭಾರತ ಸದಾಕಾಲವೂ ಪರಿಪೂರ್ಣತೆ ಮತ್ತು ಪರಿಶುದ್ಧತೆಗೆ ಮಾನ್ಯತೆ ನೀಡುತ್ತದೆ. ಈ ಅಂಶಗಳು ಸಾವಯವದಲ್ಲೂ ಇವೆ. ಆದರೆ, ಪರಿಶುದ್ಧ ಆಹಾರ ಸೇವನೆ ವಿಚಾರಕ್ಕೆ ಬಂದಾಗ ನಾವು ಈವರೆಗೂ ಅನಿವಾರ್ಯವಾಗಿ ರಾಜಿ ಮಾಡಿಕೊಳ್ಳುತ್ತಲೇ ಬಂದಿದ್ದೇವೆ. ಇನ್ನೊಂದೆಡೆ ಕ್ರಿಮಿನಾಶಕ ಒಳಗೊಂಡಿರುವುದು, ಕಲಬೆರಕೆ, ಜೈವಿಕ ತಳಿ ಬದಲಾವಣೆ ಮತ್ತು ಅನಾರೋಗ್ಯಕಾರಿ ಶೈಲಿಯಲ್ಲಿ ಧಾನ್ಯಗಳ ಸಂಗ್ರಹ ಮೊದಲಾದ ಜೀವಹಾನಿಕಾರಕ ಕ್ರಮಗಳನ್ನೂ ನೋಡುತ್ತಲೇ ಇದ್ದೂ ಅಂಧರಂತೆ ಆಗಿಬಿಟ್ಟಿದ್ದೇವೆ. ಈ ಎಲ್ಲ ನಕಾರಾತ್ಮಕ ಅಂಶಗಳೂ ನಮ್ಮ ದೇಹದಾರೋಗ್ಯವನ್ನು ಹಾಳು ಮಾಡುವಂತಹವು, ಆಹಾರದ ಗುಣಮಟ್ಟ ಮತ್ತು ಸ್ವಾಧವನ್ನು ಕಡಿಮೆ ಮಾಡುವಂತಹವೇ ಆಗಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಹಾಗಾಗಿಯೇ ಜನರ ನಿತ್ಯದ ಆಹಾರ ಸೇವನೆ ಕ್ರಮದಲ್ಲಿ ಸುರಕ್ಷಿತವಾದ ಹಾಗೂ ಅತ್ಯುತ್ತಮವಾದ ಸಾವಯವ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಉತ್ತಮ ಎಂಬುದನ್ನು ಒತ್ತಿ ಹೇಳಲು ಇಚ್ಛಿಸಿದ್ದೇವೆ. ಅದೇ ದಿಕ್ಕಿನಲ್ಲಿ ಈ ಪ್ರಚಾರಾಂದೋಲನ ನಡೆಯುತ್ತಿದೆ ಎಂದರು.
ಸದ್ಯ ದೇಶದ ವಿವಿಧೆಡೆ 45 ಸಾವಿರ ರೈತರು 225 ಸಾವಿರ ಎಕರೆವರೆಗೂ ಸಾವಯವ ಕೃಷಿ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಸಾವಯವ ಕೃಷಿಯ ಭೂಮಿಯ ವಿಸ್ತಾರವನ್ನು ಎರಡು ಪಟ್ಟು ಹಿಗ್ಗಿಸಲಿದ್ದೇವೆ. ಅಲ್ಲದೆ, ಹೊಸದಾದ ಆರೋಗ್ಯಕಾರಿ ಆಹಾರ ಉತ್ಪನ್ನಗಳನ್ನೂ ಪರಿಚಯಿಸಲಿದ್ದೇವೆ. ಸಾವಯವ ಆಹಾರದ ಬಗ್ಗೆ ತಿಳಿಯಲು ಆಸಕ್ತಿ ಇರುವ ಪ್ರತಿಯೊಬ್ಬರೂ ನಮ್ಮ 24 ಮಂತ್ರ ಸಾವಯವ ಆಹಾರ ಉತ್ಪಾದನೆ ಕೇಂದ್ರಗಳಿಗೆ ಆಗಮಿಸಿ ನೇರವಾದ ಅನುಭವ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.
ಪ್ರಸ್ತುತ '24 ಮಂತ್ರ' ಬ್ರ್ಯಾಂಡ್‍ನಡಿ 200ಕ್ಕೂ ಅಧಿಕ ಬಗೆಯ ಆರೋಗ್ಯಕಾರಿ ಆಹಾರ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದ್ದು ಬಹುಬಗೆ ಧಾನ್ಯ, ಒಣಹಣ್ಣು ಮತ್ತು ಸಂಸ್ಕರಿತ ಆಹಾರ, ಹಣ ್ಣನ ರಸಗಳು ಭಿನ್ನ ಆಯ್ಕೆಯಲ್ಲಿ ಲಭ್ಯವಿವೆ. ದೇಶದ 46 ನಗರಗಳಲ್ಲಿನ ಸ್ಪೆನ್ಸರ್ಸ್, ಹೈಪರ್ ಸಿಟಿ, ಸ್ಟಾರ್ ಬಜಾರ್, ಫುಡ್ ಬಜಾರ್, ಮೋರ್, ಆಚನ್, ಮೆಟ್ರೊ, ಭಾರ್ತಿ ವಾಲ್‍ಮಾರ್ಟ್ ಈಸಿ ಡೆ, ರಿಲಯನ್ಸ್, ಎಬಿಆರ್‍ಎಲ್ ಮತ್ತು ಟಾಟಾ ಟೆಸ್ಕೊ ಮೊದಲಾದ ಬೃಹತ್ ಮಾರಾಟ ಕೇಂದ್ರಗಳಲ್ಲಿಯೂ '24 ಮಂತ್ರ ಆಗ್ರ್ಯಾನಿಕ್' ಬ್ರಾಂಡ್‍ನ ಎಲ್ಲ ಉತ್ಪನ್ನಗಳೂ ಲಭ್ಯವಿವೆ.
ಶ್ರೇಷ್ಠ ಕಂಪೆನಿ, ಆಂಧ್ರಪ್ರದೇಶ್, ಒಡಿಶಾ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗುಜರಾತ್, ರಾಜಸ್ತಾನ, ಉತ್ತರಾಖಂಡ್, ಉತ್ತರ ಪ್ರದೇಶ್, ಈಶಾನ್ಯ ರಾಜ್ಯಗಳು ಸೇರಿದಂತೆ ಸದ್ಯ ದೇಶದ 15 ರಾಜ್ಯಗಳಲ್ಲಿ ಸಾವಯವ ಕೃಷಿಯನ್ನು ಪ್ರೋತ್ಸಾಹಿಸುತ್ತಿದೆ. 25000 ದಶಲಕ್ಷ ಟನ್ ಆಹಾರ ಪದಾರ್ಥಗಳನ್ನು ದೇಶದ 150 ನಗರಗಳಲ್ಲಿ ಮಾರಾಟ ಮಾಡುತ್ತಿದೆ. ಅಲ್ಲದೇ ಯೂರೋಪ್, ಅಮೆರಿಕ ಮತ್ತು ಮಧ್ಯಪ್ರಾಚ್ಯ ದೇಶಗಳಿಗೂ ರಫ್ತು ಮಾಡುತ್ತಿದೆ.  
ಹೆಚ್ಚಿನ ಸಂಪಾದಕೀಯ ಮಾಹಿತಿಗೆ: 
ವಿಜಯ್ ಕುಮಾರ್, 
ಮೊ: +91 99802 14950,[email protected] 

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...