ವಿಚಾರಣೆ ನೆಪದಲ್ಲಿ ಪೊಲೀಸರು ಮೊಬೈಲ್ ಕಿತ್ತುಕೊಳ್ಳುವಂತಿಲ್ಲ; ಕಮಲ್ ಪಂಥ್

ಬೆಂಗಳೂರು: ಅನುಮತಿ ಇಲ್ಲದ ಹೊರತು ಯಾವ ಪೊಲೀಸ್ ಅಧಿಕಾರಿ: ಕೂಡ ಸಾರ್ವಜನಿಕರ ಮೊಬೈಲ್ ಪರಿಶೀಲನೆ ಮಾಡ ಕೂಡದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ಒಂದು ವೇಳೆ ಅನಮತಿ ಇಲ್ಲದೇ ಪರಿಶೀಲನೆ ನಡೆಸಿದ ಆದಲ್ಲಿ, ಗಮನಕ್ಕೆ ತನ್ನಿ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಯಾವುದೇ ನೆಪದಲ್ಲಿ ಸಾರ್ವಜನಿಕರ ಮೊಬೈಲನ್ನು ಕಿತ್ತು ಕೊಳ್ಳುವುದದನ್ನು ಒಪ್ಪಲು ಸಾಧ್ಯವಿಲ್ಲ. ಅಂತಹ ಯಾವುದೇ ಕೃತ್ಯ ನಡೆದರೂ ನಾವು ಅದನ್ನು ಬಲವಾಗಿ ಖಂಡಿಸುತ್ತೇವೆ ಎಂದು ಪೊಲೀಸ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.
ಅಲ್ಲದೆ ಯಾರಾದರೂ ಪೊಲೀಸರು ಮೊಬೈಲ್ ಕಿತ್ತು ಕೊಂಡು ದೌರ್ಜನ್ಯ ಎಸಗಿದ್ದೇ ಆದಲ್ಲಿ, ತಕ್ಷಣವೇ ಸಹಾಯವಾಣಿ ಸಂಖ್ಯೆ 112 ಕ್ಕೆ ಅಥವಾ ಪೊಲೀಸ್ ಆಯುಕ್ತರ ಕಚೇರಿ ಸಂಖ್ಯೆ 080 22942215 ಗೆ ಮಾಹಿತಿ ನೀಡಿ. ನಿಮ್ಮ ಗುರುತನ್ನು ಗೌಪ್ಯವಾಗಿಡಲಾಗುವುದು' ಎಂದು ಹೇಳಿದ್ದಾರೆ. ಅಲ್ಲದೇ ನಿಮ್ಮ ಲೊಕೇಶನ್ ಕೂಡ ಹಂಚಿಕೊಳ್ಳಬಹುದು. ನಾವು ನಿಮ್ಮ ಸಹಾಯಕ್ಕೆ ಇದ್ದೇವೆ ಎಂದು ಕಮಲ್ ಪಂತ್ ಅವರು ಟೀಟ್ ಮಾಡಿದ್ದಾರೆ.
ಅಲ್ಲದೇ ದೌರ್ಜನ್ಯ ಎಸಗುವ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದೂ ಅವರು ಆಶ್ವಾಸನೆ ನೀಡಿದ್ದಾರೆ. ಪೊಲೀಸರು ತನಿಖೆಯ ನೆಪದಲ್ಲಿ ಮೊಬೈಲ್ ಕಿತ್ತುಕೊಳ್ಳುತ್ತಾರೆ, ವಾಟ್ಸಾಪ್ ತೆರೆದು ವೈಯಕ್ತಿಕ ಸಂಭಾಷಣೆಗಳನ್ನು ನೋಡುತ್ತಾರೆ. ವಿನಾ ಕಾರಣ ಕಿರುಕುಳ ನೀಡುತ್ತಾರೆ. ರಾತ್ರಿ ವೇಳೆಯಲ್ಲಂತೂ ಭಾರೀ ಉಪಟಳ ನೀಡುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ದೂರುಗ ಸರಮಾಲೆಯೇ ದಾಖಲಾಗಿದ್ದವು. ಇದರ ಬೆನ್ನಲ್ಲೇ, ನಗರ ಪೊಲೀಸ್ ಆಯುಕ್ತರಿಂದ ಇಂತಹದ್ದೊಂದು ಆದೇಶ ಹೊರ ಬಿದ್ದಿದೆ.