ಬೆಂಗಳೂರು:16 ವರ್ಷಗಳ ಬಳಿಕ ಒಂದಾದ ಅನಂತ್ ನಾಗ್-ಲಕ್ಷ್ಮಿ ಜೋಡಿ ! ಭರದಿಂದ ಸಾಗುತ್ತಿದೆ "ಮಾರ್ಚ್ 22" ಸಿನೆಮಾದ ಚಿತ್ರೀಕರಣ

Source: iqbal uchchila | By Arshad Koppa | Published on 23rd December 2016, 1:12 PM | Interview |

ಬೆಂಗಳೂರು: ಆಕ್ಮೆ ಮೂವೀಸ್ ಇಂಟರ್‌ನ್ಯಾಶನಲ್ ಲಾಂಛಾನದಲ್ಲಿ ಖ್ಯಾತ ನಿರ್ದೇಶಕ ಕೂಡ್ಲು ರಾಮಕೃಷ್ಣರವರ ನಿರ್ದೇಶನದಲ್ಲಿ ದುಬೈಯ ಖ್ಯಾತ ಉದ್ಯಮಿ ಹಾಗೂ ಪ್ರಸಿದ್ದ ಗಾಯಕ ಶ್ರೀ ಹರೀಶ್ ಶೇರಿಗಾರ್ ಅವರ ನಿರ್ಮಾಣದ ಚೊಚ್ಚಲ ಕಾಣಿಕೆ "ಮಾರ್ಚ್ 22" ಕನ್ನಡ ಚಲನ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ರವಿವಾರ ಬೆಂಗಳೂರಿನಲ್ಲಿ ಸಿನೆಮಾದ ಕುರಿತು ಸುದ್ದಿಗೋಷ್ಠಿ ಆಯೋಜಿಲಾಲಾಗಿತ್ತು.

 

ಹಲವಾರು ಖ್ಯಾತ, ಪ್ರತಿಭಾವಂತ ನಟಿ-ನಟಿಯರು ನಟಿಸುತ್ತಿರುವ "ಮಾರ್ಚ್ 22" ಸಿನೆಮಾವು ಭಾವನಾತ್ಮಕ ವಿಷಯವನ್ನು ಆಧರಿಸಿದ ಕತೆಯಾಗಿದ್ದು, 16 ವರ್ಷಗಳ ಬಳಿಕ ಖ್ಯಾತ ನಟ ಅನಂತ್ ನಾಗ್-ಲಕ್ಷ್ಮಿ ಜೋಡಿ ಮಾತೆ ಈ ಸಿನೆಮಾ ಮೂಲಕ ಒಂದಾಗುತ್ತಿದ್ದಾರೆ.

 

ನವೆಂಬರ್ 7ರ ಸೋಮವಾರದಂದು ಬೆಳಿಗ್ಗೆ ಬೆಳಗಾವಿಯ ಹೊರವಲಯದ ನೇಸರ್ಗಿ ಸಮೀಪದ ಚಚಡಿ ಎಂಬಲ್ಲಿ ಸುಮಾರು 800 ವರ್ಷಗಳ ಇತಿಹಾಸವಿರುವ ರಟ್ ರಾಜರ ವಂಶದ ವಾಡೆ ಎಂಬ ಹೆಸರಿನ ಪುರಾತನ ಮನೆಯೊಂದರಲ್ಲಿ ಸಿನೆಮಾದ ಮುಹೂರ್ತ ನಡೆದಿದ್ದು, ಸಿನೆಮಾ ಚಿತ್ರೀಕರಣ ಭರದಿಂದ ಸಾಗುತ್ತ ಬಂದಿದೆ. ಸಿನೆಮಾ ಬೆಳಗಾವಿಯಲ್ಲಿ ಚಿತ್ರೀಕರಣ ನಡೆಯುತ್ತಿರುದರಿಂದ ಮಾಧ್ಯಮದವರೊಂದಿಗೆ ಸಿನೆಮಾದ ಕುರಿತು ಮಾತನಾಡುದಕ್ಕಾಗಿ ಬೆಂಗಳೂರಿನ ಸಿಟಾಡೆಲ್ ಹೋಟೆಲ್ನಲ್ಲಿ ಸುದ್ದಿಗೋಷ್ಠಿಯನ್ನು ಆಯೋಜಿಸಲಾಗಿತ್ತು.

ಸುದ್ದಿಗೋಷ್ಠಿಯಲ್ಲಿ ನಟರಾದ ಅನಂತ್ ನಾಗ್-ವಿನಯ ಪ್ರಸಾದ್, ನಿರ್ದೇಶಕ ಕೂಡ್ಲು ರಾಮಕೃಷ್ಣ, ನಿರ್ಮಾಪಕ ಹರೀಶ್ ಶೇರಿಗಾರ್ ಸಿನೆಮಾದ ಕುರಿತು ವಿಸ್ತಾರವಾಗಿ ಮಾತನಾಡಿದರು. ಈ ವೇಳೆ ಹರೀಶ್ ಶೇರಿಗಾರ್ ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ಸೇರಿದಂತೆ ಇಡೀ ಚಿತ್ರ ತಂಡವೇ ಭಾಗವಹಿಸಿತ್ತು.

 

'ಮಾರ್ಚ್ 22' ಇಡೀ ಜಗತ್ತಿಗೆ ಒಂದು ರೀತಿಯಲ್ಲಿ ವಿಶೇಷ ದಿನ. ಯಾಕೆಂದರ ಅದು ಜಲ ದಿನ. ಈ ದಿನವನ್ನೇ ಚಿತ್ರದ ಟೈಟಲ್ ಆಗಿ ಬಳಸಿಕೊಂಡಿರೋದರ ಹಿಂದೆಯೂ ನಿಖರವಾದ ಕಾರಣಗಳಿವೆ. ನೀರಲ್ಲೂ ಜಾತಿ-ಧರ್ಮ ನೋಡುವವರೂ ಇರಬಹುದು. ಆದರೆ ನೀರಿಗೆ ಅಂಥದ್ಯಾವ ಕಟ್ಟು ಪಾಡುಗಳೂ ಇಲ್ಲ. ಅದು ಇಡೀ ಜೀವ ಸಂಕುಲದ ಜೀವಧಾತು. ಅದು ಜಾತಿ, ಧರ್ಮ, ಪಂಥಗಳನ್ನು ಮೀರಿದ್ದು. ಇಂಥದ್ದೇ ಜೀವಪರ ಆಶಯವುಳ್ಳ ಕಥೆಯನ್ನು ಈ ಚಿತ್ರ ಹೊಂದಿದೆ. ನೀರಿನ ಮಹತ್ವ ಏನೆಂಬುದನ್ನು ಹಾಗು ಜಾತಿ-ಧರ್ಮಗಳಿಗಿಂತಲೂ ಬದುಕು ಮುಖ ಎಂಬುದು ಈ ಸಿನೆಮಾದ ತಿರುಳಾಗಿದೆ ಎಂದು ನಟ ಅನಂತ್ ನಾಗ್ ಸಿನೆಮಾದ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು. 

 

ಚಿತ್ರದಲ್ಲಿ ನೀರಿನ ಸದ್ಭಳಕೆಯ ಬಗ್ಗೆ ಅರಿವು ಮೂಡಿಸುವ ವಿಚಾರವೂ ಇದೆ. ಕೂಡ್ಲು ಪ್ರಕಾರ, ಇದು ಹೊಸ ಬಗೆಯ ಸಿನಿಮಾವಾಗಲಿದೆ.  ಈ ಚಿತ್ರದದಲ್ಲಿ ಅನಂತ್ ನಾಗ್-ಲಕ್ಷ್ಮಿ ಜೋಡಿ ಜೊತೆ ಆರ್ಯವರ್ಧನ್, ಕಿರಣ್ ರಾಜ್, ಮೇಘಶ್ರೀ, ದೀಪಾ ಶೆಟ್ಟಿ, ಶರತ್‌ ಲೋಹಿತಾಶ್ವ, ಆಶಿಶ್ ವಿದ್ಯಾರ್ಥಿ, ರವಿಕಾಳೆ, ಜೈಜಗದೀಶ್‌, ವಿನಯಾ ಪ್ರಸಾದ್‌, ಪದ್ಮಜಾ ರಾವ್‌, ಪವಿತ್ರ ಲೋಕೇಶ್‌, ಸಾಧುಕೋಕಿಲ ಮತ್ತು ಯುವ ಕಲಾವಿದಾರಾದ ಸೃಜನ್ ರೈ, ಯುವ ಕಿಶೋರ್, ದುಬೈಯ ಕಲಾವಿದರಾದ ಚಿದಾನಂದ್ ಪೂಜಾರಿ, ಸುವರ್ಣ ಸತೀಶ್ ಹಾಗೂ ಮಂಗಳೂರಿನ ಕಲಾವಿದೆ ಪ್ರಶೋಭಿತಾ ಪ್ರಭಾಕರ್ ಮುಂತಾದವರು ನಟಿಸುತ್ತಿದ್ದಾರೆ.

 

ಇನ್ನುಳಿದಂತೆ ಚಿತ್ರಕ್ಕೆ ಮಣಿಕಾಂತ್ ಕದ್ರಿ ಹಾಗು ಎನ್.ಜೆ.ರವಿಶೇಖರ್ ಸಂಗೀತಾ ನೀಡಿದ್ದಾರೆ, ಮೋಹನ್ ಎಂ ಅವರ ಛಾಯಾ ಗ್ರಾಹಣವಿದೆ, ಬಸವರಾಜ್ ಆರಸ್ ಸಂಕಲನ, ಸುಭಾಶ್ ಕಡಕೋಲ್ ಕಲೆ, ಮದನ್ ಹರಿಣಿ ನೃತ್ಯ ನಿರ್ದೇಶನವಿರಲಿದೆ. ಯಶಸ್ವಿ ಸ್ಟಂಟ್ ಮಾಸ್ಟರ್ ಕುಂಗ್‌ಫು ಚಂದ್ರು ಅವರ ಸಾಹಸ ನಿರ್ದೇಶನವಿದೆ. ಸಹ ನಿರ್ದೇಶನ ಕೆ.ಜಗದೀಶ್ ರೆಡ್ಡಿ, ಶರಣ್ಯ.ಬಿ., ನಾಗರಾಜ್ ಹಸನ್ ಹಾಗೂ ಅಚ್ಯುತ ರಾವ್ ಅವರು ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕಾರ್ಯನಿರ್ವಾಹಿಸುತ್ತಿದ್ದಾರೆ.

Read These Next

ರಾಜ್ಯ ವಿಧಾನಸಭಾ ಚುನಾವಣೆ: ಮತದಾರರ ಪಟ್ಟಿಯಿಂದ ಶೇ.20ರಷ್ಟು ಮುಸ್ಲಿಮರ ಹೆಸರು ನಾಪತ್ತೆ!

ಅಬುಸಲೇಹ್ ಶರೀಫ್ ಭಾರತದಲ್ಲಿ ಮುಸ್ಲಿಂ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆಸಲು 2005ರಲ್ಲಿ ...

ಕೈಗೆ ರಕ್ತದ ಕಲೆಯೂ ಆಗಿಲ್ಲ, ಕತ್ತಿ ರಕ್ತದಿಂದ ತೊಯ್ದೂ ಇಲ್ಲ… ಈ ಅಪಾಯಕಾರಿ ರಾಜಕಾರಣದ ಕುತಂತ್ರವನ್ನು ಅರಿತು ಮತದಾರರು ಮತ ಚಲಾಯಿಸಬೇಕು..

ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಮುಹಮ್ಮದ್ ಅತ್ಹರುಲ್ಲಾ ಶರೀಫ್ ಅವರೊಂದಿಗೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ...

ವಿವೇಕಾನಂದರ ಹಿಂದೂ ಧರ್ಮಕ್ಕೂ, ಗೋಡ್ಸೆ ಹಿಂದೂ ಧರ್ಮಕ್ಕೂ ಅಜಗಜಾಂತರ ವ್ಯತ್ಯಾಸ -ಡಾ.ರಾಮ್ ಪುನಿಯಾನಿ

ಓದು, ತಲೆ ಬುಡ ಯಾವುದೂ ಇಲ್ಲದೇ ಅಂಗಡಿ ಮುಂಗಟ್ಟಿನಲ್ಲಿ ನಿಂತು ಇತರರನ್ನು ಹೀಯಾಳಿಸಿ ಸುಖ ಪಡುವ, ಕನಸುಗಳಲ್ಲಿಯೇ ತೇಲಾಡಿ ...