ಬೆಂಗಳೂರು: ಮದ್ಯದ ಪಾರ್ಟಿ ವೇಳೆ ಕಬಾಬ್ ವಿಚಾರಕ್ಕೆ ಸ್ನೇಹಿತರ ನಡುವೆ ಜಗಳ, ಓರ್ವನನ್ನು ಕೊಚ್ಚಿ ಭೀಕರ ಕೊಲೆ

Source: UNI | Published on 9th August 2020, 7:00 PM | State News | Don't Miss |

ಬೆಂಗಳೂರು: ಮದ್ಯದ ಪಾರ್ಟಿ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಿನ್ನೆ ತಡರಾತ್ರಿ ಪರಪ್ಪನ ಅಗ್ರಹಾರದಲ್ಲಿ ನಡೆದಿದೆ.
ಸಿಂಗಸಂದ್ರದ ಯೋಗೇಶ್(28) ಕೊಲೆಯಾದ ಯುವಕ ಕೊಲೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ.
ಪರಪ್ಪನ ಅಗ್ರಹಾರದ ಜೆಎಸ್‍ಎಸ್ ಲೇಔಟ್‍ನ ಬಯಲು ಪ್ರದೇಶದಲ್ಲಿ ನಿನ್ನೆ ರಾತ್ರಿ 8.30ರ ಸಮಯದಲ್ಲಿ ಯೋಗೇಶ್ ಮತ್ತು ಸ್ನೇಹಿತರು ಮದ್ಯದ ಪಾರ್ಟಿ ಮಾಡಿದ್ದಾರೆ. 
ಪಾರ್ಟಿ ಸಂದರ್ಭದಲ್ಲಿ ಮದ್ಯ ಸಾಕಾಗದ ಕಾರಣ ಯೋಗೇಶನೇ ಸ್ನೇಹಿತನಿಗೆ ಮದ್ಯ ತರುವಂತೆ ಹಣ ಕೊಟ್ಟು ಕಳುಹಿಸಿದ್ದಾನೆ. ಈ ವೇಳೆ ಸ್ನೇಹಿತ ಮದ್ಯದ ಜತೆಗೆ ಕಬಾಬ್ ಹಾಗೂ ಮಚ್ಚನ್ನು ತಂದಿದ್ದಾನೆ. ಮದ್ಯದ ಅಮಲು ಹೆಚ್ಚಾಗುತ್ತಿದ್ದಂತೆ ಕ್ಷುಲಕ ಕಾರಣಕ್ಕೆ ಜಗಳ ಉಂಟಾಗಿ ಆಕ್ರೋಶ ಗೊಂಡ ಸ್ನೇಹಿತರು ಯೋಗೇಶನನ್ನು ಮನ ಬಂದಂತೆ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

 

Read These Next

ನೂತನ ರಾಷ್ಟ್ರೀಯ ಶಿಕ್ಷಣ ನೀತಿ -2020ನ್ನು ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗೆ ಒಳಪಡಿಸುವಂತೆ  ಎಸ್.ಐ.ಓ ರಾಜ್ಯಾಧ್ಯಕ್ಷ ನಿಹಾಲ್ ಕಿದಿಯೂರು ಸರ್ಕಾರಕ್ಕೆ ಆಗ್ರಹ

ಭಟ್ಕಳ:  ಒಕ್ಕೂಟ ವ್ಯವಸ್ಥೆಯ ಅಡಿಯಲ್ಲಿ ರಚಿತವಾಗಿರುವ ಪ್ರಜಾಪ್ರಭುತ್ವ ಭಾರತ ದೇಶದಲ್ಲಿ ಸರ್ಕಾರವು ಯಾವುದೇ ರೀತಿಯ ಕಾನೂನು ಅಥವಾ ...

ಉಡುಪಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಎನ್‌ಡಿಆರ್‌ಎಫ್ ಬಳಕೆ-ಗೃಹ ಸಚಿವ ಬೊಮ್ಮಾಯಿ

ಉಡುಪಿ: ಕಳೆದ ಎರಡು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಕೆಲವು ...

ಶಿವಮೊಗ್ಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ, ಹೊಸ ರೈಲು ಸಂಪರ್ಕ ಮತ್ತು ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿಗಳು ...

ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ಗಂಗಾಧರ ಹಿರೇಗುತ್ತಿ ಆಯ್ಕೆ

ಕೋಟ : ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಪ್ರತಿ ವರ್ಷ ಮುಂಗಾರು ಪತ್ರಿಕೆಯ ಸಂಪಾದಕ ದಿ| ವಡ್ಡರ್ಸೆ ರಘುರಾಮ ಶೆಟ್ಟಿ ...