ಬೆಂಗಳೂರು: ಉದ್ಯಮಿಪುತ್ರನನ್ನು ಅಪಹರಿಸಿ ಬಳಿಕ ದಾರಿಪಾಲು ಮಾಡಿದ ಐವರ ಬಂಧನ

Source: so english | By Arshad Koppa | Published on 31st August 2016, 8:17 AM | State News | Incidents |

ಬೆಂಗಳೂರು, ಆ ೩೧: ಕೊಂಚ ಕಾಲ ಕಿರುತೆರೆಯಲ್ಲಿಯೂ ಕೆಲಸ ಮಾಡಿದ ನಟನ ಸಹಿತ ಐವರು ವ್ಯಕ್ತಿಗಳನ್ನು ಪೋಲೀಸರು ಅಪಹರಣ ಪ್ರಕರಣವೊಂದರಲ್ಲಿ ಬಂಧಿಸಿದ್ದಾರೆ. ಕಳೆದ ವಾರ ಖ್ಯಾತ ಉದ್ಯಮಿ ವಿಜಯ್ ಕಿರ್ಲೋಸ್ಕರ್ ರವರ ಹದಿಹರೆಯದ ಪುತ್ರ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿ-ಇಶಾನ್ ಬಾಪಟ್ ನನ್ನು ಹಣಕ್ಕಾಗಿ ಅಪಹರಿಸಿ ಬಳಿಕ ದಾರಿಪಾಲು ಮಾಡಿಬಿಟ್ಟ ಆರೋಪ ಹೊರಿಸಿ ಈ ಐವರನ್ನು ಬಂಧಿಸಲಾಗಿದೆ ಎಂದು ಪೋಲೀಸ್ ಕಮೀಶನರ್ ಎನ್.ಎಸ್ ಮೇಘಾರಿಕ್ ರವರು ತಿಳಿಸಿದ್ದಾರೆ. 

ಈ ಐವರನ್ನು ಮುನಿಯಪ್ಪ, ೨೯, ಹಸನ್ ಡೋಂಗ್ರಿ ೨೬, ಜಗದೀಶ್, ೩೨, ಜಗನ್ನಾಥ ೧೯, ಮತ್ತು ಮನೋಜ್ ೧೯ ಎಂದು ಗುರುತಿಸಲಾಗಿದೆ. ಐವರನ್ನೂ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಬಳಿಕ ವಿಚಾರಣೆಗಾಗಿ ಪೋಲೀಸ್ ಠಾಣೆಯಲ್ಲಿ ಬಂಧನದಲ್ಲಿರಿಸಲಾಗಿದೆ. 

ಬಾಪಟ್ ರನ್ನು ಈ ತಂಡ ಆಗಸ್ಟ್ ೨೩ ರಂದು ಆಹಾರ ಮಳಿಗೆಯೊಂದರ ಬಳಿ ಅಪಹರಿಸಿದ್ದರು. ಮರುದಿನ ಪೋಲೀಸರು ಕಾಣೆಯಾದ ಯುವಕನ ಹುಡುಕಾಟವನ್ನು ತೀವ್ರಗೊಳಿಸಿದ್ದರ ಪರಿಣಾಮವಾಗಿ ಹೆದರಿ ಬಂಧನದಿಂದ ಬಿಟ್ಟುಬಿಟ್ಟಿದ್ದರು. ಆದರೆ ಈ ವಿಷಯ ಅರಿಯದ ಅವರ ಸ್ನೇಹಿತೆಯ ಬಳಿ ಬಿಡುಗಡೆಯ ಹಣ ನೀಡುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ. ಆದರೆ ಯಾವುದೇ ಬಿಡುಗಡೆಯ ಹಣ ನೀಡಲಿಲ್ಲ ಎಂದು ತಿಳಿದುಬಂದಿದೆ. 

ಈ ಐವರಲ್ಲಿ ಮುನಿಯಪ್ಪ ಕನ್ನಡ ಚಿತ್ರ ನಟನಾಗಿದ್ದು ಚಾಲೆಂಜರ್ ಚಿತ್ರದ ಚಿತ್ರೀಕರಣದ ವೇಳೆ ಹಸನ್ ಡೋಂಗ್ರಿಯವರ ಪರಿಚಯವಾಗಿತ್ತು. ಈತನಿಗೆ ಚಿತ್ರ ನಿರ್ಮಿಸಲು ಹಣ ಬೇಕಾಗಿದ್ದು ಅಪಹರಣ ಮೂಲಕ ಈ ಹಣ ಹೊಂದಿಸಲು ಹಂಚಿಕೆ ಹೂಡಲಾಗಿತ್ತು. 

Read These Next

ಎನ್ ಡಿಆರ್ ಎಫ್ ತಂಡದಿಂದ ಅಣಕು ಪ್ರದರ್ಶನ. ಸಾರ್ವಜನಿಕರಲ್ಲಿ ರಕ್ಷಣಾ ಕಾರ್ಯದ ರೀತಿ ಮತ್ತು ಮಹತ್ವದ ಅರಿವು ಮೂಡಬೇಕು: ಜಿಲ್ಲಾಧಿಕಾರಿ ನಿತೇಶ ಪಾಟೀಲ

ಧಾರವಾಡ : ಆಕಸ್ಮಿಕವಾಗಿ ಸಂಭವಿಸುವ ಘಟನೆಗಳಲ್ಲಿ ನೆರೆಹೊರೆಯವರು ಸೇರಿದಂತೆ ಸಾರ್ವಜನಿಕರು ತತಕ್ಷಣ ಸ್ಪಂಧಿಸುವುದರಿಂದ ಮತ್ತು ...

ಮತ ಚಲಾಯಿಸಿದ ಕೋವಿಡ್ ಸೋಂಕಿತರು

ಧಾರವಾಡ : ಬುಧವಾರ ನಡೆದ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಕೊನೆಯ ಒಂದು ತಾಸು ಮತದಾನ ಅವಧಿಯನ್ನು ಕೋವಿಡ್ ಸೋಂಕಿತರು ತಮ್ಮ ಹಕ್ಕು ...

ಹಳೆಯ ವೈಷಮ್ಯ; ವ್ಯಕ್ತಿಯ ಕೊಲೆ  

ಭಟ್ಕಳ : ಹಳೆಯ ವೈಷಮ್ಯ ಹಾಗೂ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಕೊಲೆಗೀಡಾಗಿರುವ ಘಟನೆ ತಾಲೂಕಿನ ಬೆಣಂದೂರು ...