ಕಾರವಾರ:ಆಂಬುಲೆನ್ಸ್‌ಗೆ ಬ್ಯಾಂಡೇಜ್ ಸುತ್ತಿ ಪ್ರತಿಭಟನೆ

Source: so news | By MV Bhatkal | Published on 19th June 2019, 7:38 PM | Coastal News | Don't Miss |

ಕಾರವಾರ: ತುರ್ತು ಸಂದರ್ಭಗಳಲ್ಲಿ ಲಭ್ಯವಿಲ್ಲದ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಒಂದು ಹಾಗೂ ಆರೋಗ್ಯ ಕವಚ 108 ಆಂಬುಲೆನ್ಸ್‌ಗಳಿಗೆ ವಿವಿಧ ಸಂಘಟನೆಗಳ ಮುಖಂಡರು ಬುಧವಾರ ಬ್ಯಾಂಡೇಜ್ ಸುತ್ತಿ ಪ್ರತಿಭಟನೆ ನಡೆಸಿದರು.
ಸರ್ಕಾರಿ ಮೆಡಿಕಲ್ ಕಾಲೇಜ್‌ಗೆ ಸೇರಿದ ಜಿಲ್ಲಾ ಆಸ್ಪತ್ರೆಯಲ್ಲಿ 3 ಆಂಬುಲೆನ್ಸ್‌ಗಳಿವೆ. ಒಂದು ಹಳೆಯದಾಗಿ ಓಡಾಡುವ ಸ್ಥೀತಿಯಲ್ಲಿಲ್ಲ. ಇನ್ನೊಂದು ರಿಪೇರಿಗಾಗಿ ಹುಬ್ಬಳ್ಳಿಗೆ ಹೋಗಿದೆ. ಗರ್ಭಿಣಿ, ಬಾಣಂತಿ, ನವಜಾತ ಶಿಶುಗಳನ್ನು ಸಾಗಿಸುವ ಸಲುವಾಗಿ ಇರುವ ನಗು, ಮಗು ಆಂಬುಲೆನ್ಸ್‌ನಲ್ಲೇ ಎಲ್ಲ ರೋಗಿಗಳನ್ನೂ ಸಾಗಿಸುವ ಪರಿಸ್ಥಿತಿ ಎದುರಾಗಿದೆ. ಆರೋಗ್ಯ ಕವಚ 108 ಆಂಬುಲೆನ್ಸ್ ನಲ್ಲಿ ಸಿಬ್ಬಂದಿ ಕೊರತೆ ಇದ್ದು, ತುರ್ತು ಸಂದರ್ಭಕ್ಕೆ ಸಿಗುತ್ತಿಲ್ಲ.
ಮಂಗಳವಾರ ಅಪಘಾತಕ್ಕೆ ಒಳಗಾದ ಗಾಯಾಳುವೊಬ್ಬರನ್ನು ತುರ್ತಾಗಿ ಮಂಗಳೂರಿಗೆ ಸಾಗಿಸಲು ಆಂಬುಲೆನ್ಸ್ ಇಲ್ಲದೇ ತೊಂದರೆ ಅನುಭವಿಸಬೇಕಾಯಿತು. ಮತ್ತೆ, ಮತ್ತೆ ಇದೇ ಪರಿಸ್ಥಿತಿ ಉಂಟಾಗುತ್ತಿದ್ದು, ಸಾರ್ವಜನಿಕರ ಜೀವಕ್ಕೆ ಎರವಾಗುತ್ತಿದೆ ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯ್ಕ ದೂರಿದರು.
ಈ ಸಂಬಂಧ ಪ್ರತಿಕ್ರಿಯಿಸಿದ ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಲಕರ್, ‘ಜಿಲ್ಲಾ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಕೊರತೆ ಇರುವುದು ನಿಜ. ನಮಗೆ ಆಂಬುಲೆನ್ಸ್ ಗಾಗಿ ಯಾವುದೇ ಅನುದಾನವಿಲ್ಲ. ಹೊಸ ಆಂಬುಲೆನ್ಸ್‌ಗೆ ಪ್ರಸ್ತಾವನೆಯನ್ನು ಮೆಡಿಕಲ್ ಕಾಲೇಜ್ ಗೆ ಕಳಿಸಿದ್ದೇವೆ. ಸದ್ಯ ಈಗಿರುವ ನಗು ಮಗು ಆಂಬುಲೆನ್ಸ್ ನಲ್ಲೇ ಎಲ್ಲ ಸೇವೆ ನಿಭಾಯಿಸಲಾಗುತ್ತಿದೆ’ಎಂದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...