ಬಾಣಂತಿ ಸಾವು ಪ್ರಕರಣ- ಕಂದಮ್ಮನ ಎತ್ತಿ ಆಡಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ

Source: SO News | By Laxmi Tanaya | Published on 9th September 2020, 4:33 PM | Coastal News | Don't Miss |

ಕಾರವಾರ : ಇಲ್ಲಿನ ಸರ್ವೋದಯ ನಗರದ ಬಾಣಂತಿ ಸಾವು ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಬುಧವಾರ ಗೀತಾ ಶಿವನಾಥ ಬಾನಾವಳಿಕರ ಅವರ ಮನೆಗೆ  ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ ಭೇಟಿ ನೀಡಿದರು.

ಮೃತ ಗೀತಾ ಪತಿ ಶಿವನಾಥ ಮತ್ತು ಅವರ ಕುಟುಂಬದರೊಂದಿಗೆ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಕುಟುಂಬದವರಿಗೆ ಸಾಂತ್ವಾನ ಹೇಳಿದರು. ಈ ವೇಳೆ 10 ದಿನದ ಕಂದಮ್ಮನನ್ನ ಏತ್ತಿ ಆಡಿಸಿದರು. ಗೀತಾ ಸಾವಿನಲ್ಲಿ ಜಿಲ್ಲಾಸ್ಪತ್ರೆ ಸರ್ಜನ್ ಡಾ ಶಿವಾನಂದ ಕುಡ್ತಲಕರ್ ಅವರೇ ನೇರ ಕಾರಣರಾಗಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸ್ಥಳೀಯರು ಮನವಿ ಸಲ್ಲಿಸಿದರು.

ಜಿಲ್ಲಾ ಪಂಚಾಯತ್ ಆರೋಗ್ಯ, ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಚೈತ್ರಾ ಕೋಠಾರಕರ, ಜಿ.ಪಂ ಸದಸ್ಯ ಕೃಷ್ಣ ಮೆಹತಾ, ಮೀನುಗಾರ ಮುಖಂಡ ರಾಜು ತಾಂಡೇಲ, ನಗರಸಬವಾ ಸದಸ್ಯೆ ರೇಷ್ಮಾ ಮಾಳ್ಸೆಕರ್ ಶಿಲ್ಪಾ ನಾಯ್ಕ, ವಿನಾಯಕ ಹರಿಕಂತ್ರ ಮೊದಲಾದವರು ಇದ್ದರು.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...