ಬಾಳೆಹೊನ್ನೂರು:ವೀರಶೈವ ಮಹಾಸಭೆಯ ನಿರ್ಧಾರವನ್ನು ಸ್ವಾಗತಿಸಿದ ಶ್ರೀ ರಂಭಾಪುರಿ ಜಗದ್ಗುರುಗಳು 

Source: balanagoudra | By Arshad Koppa | Published on 1st August 2017, 8:14 AM | State News | Guest Editorial |

ರಂಭಾಪುರಿ ಪೀಠ(ಬಾಳೆಹೊನ್ನೂರು) ಜುಲೈ 30.
    ವೀರಶೈವ ಧರ್ಮದಿಂದ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಕೆಲವರು ಹೋರಾಟ ಮಾಡುತ್ತಿರುವುದು ದುರ್ದೈವದ ಸಂಗತಿ. ಅಖಿಲ ಭಾರತ ವೀರಶೈವ ಮಹಾಸಭಾ “ವೀರಶೈವ-ಲಿಂಗಾಯತ” ಧರ್ಮ ಸ್ವತಂತ್ರಗೊಳಿಸಬೇಕೆಂದು ಒತ್ತಾಯಿಸುವ ನಿರ್ಣಯ ಕೈಗೊಂಡಿದ್ದನ್ನು ವೀರಶೈವ ಪಂಚ ಪೀಠಗಳ ಪರವಾಗಿ ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ|| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಸ್ವಾಗತಿಸಿದ್ದಾರೆ.
    ಶಾಸ್ತ್ರ ಸಂಸಿದ್ಧವಾದ ವೀರಶೈವ ಧರ್ಮವಾಚಕವಾಗಿದ್ದು ಲಿಂಗಾಯತ ಎನ್ನುವುದು ಸಂಸ್ಕಾರದಿಂದ ಬಂದುದಾಗಿದೆ. ವೀರಶೈವ ಸಂಸ್ಕøತಿಯಲ್ಲಿರುವ ತತ್ವತ್ರಯಗಳನ್ನು ಬಿಟ್ಟು ಬೇರೊಂದು ಏನೂ ಇಲ್ಲ. ವೇದ ಆಗಮ ಉಪನಿಷತ್ ಪ್ರತಿಪಾದಿತವಾದ ಈ ಧರ್ಮ ಆದರ್ಶ ಮೌಲ್ಯಗಳನ್ನು ಬೆಳೆಸಿಕೊಂಡು ಬಂದಿದೆ. ಯುಗಪುರುಷರಾದ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ವೀರಶೈವ ಧರ್ಮವನ್ನು ಸ್ಥಾಪಿಸಿದರೆ ಶತಮಾನ ಪುರುಷರಾದ ಶ್ರೀ ಬಸವಾದಿ ಶಿವಶರಣರು ಇನ್ನಷ್ಟು ಮತ್ತಷ್ಟು ಬೆಳೆಸಿದರು. ಆಗಮೋಕ್ತ ಕಾಲದಲ್ಲಿ ಮತ್ತು ಬಸವ ಪೂರ್ವದಲ್ಲಿ ವೀರಶೈವ ಇತ್ತು ಎನ್ನುವುದಕ್ಕೆ ಸಾಕಷ್ಟು ಸಾಕ್ಷಾಧಾರಗಳು ಲಭ್ಯವಿವೆ. ಸ್ವತಂತ್ರ ಭಾರತದಲ್ಲಿ ಇಲ್ಲಿಯವರೆಗೆ ಯಾವುದೇ ಧರ್ಮಕ್ಕೆ ಮಾನ್ಯತೆ ಕೊಡದೇ ಇರುವಾಗ ಹಿಂದೂ ಸಂಸ್ಕøತಿಯ ಆದರ್ಶಗಳನ್ನು ಮೈಗೂಡಿಸಿಕೊಂಡ ವೀರಶೈವ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ಕೊಡುವುದು ಅಷ್ಟು ಸುಲಭದ ಕೆಲಸವಲ್ಲ. ಈಗಾಗಲೇ ಕಾನೂನು ತಜ್ಞರು ಸ್ವತಂತ್ರ ಧರ್ಮ ಮಾಡುವುದು ಬಹಳ ಕಷ್ಟದ ಕೆಲಸವೆಂದಿದ್ದಾರೆ. 
     ಆಯಾ ಕಾಲ ಘಟ್ಟಗಳಲ್ಲಿ ಬಂದ ಆಚಾರ್ಯರಾಗಲಿ ಶರಣರಾಗಲಿ ಮತ್ತು ಸಜ್ಜನರಾಗಲಿ ವೀರಶೈವ ಧರ್ಮ ಸಂಸ್ಕøತಿ ಬಿತ್ತಿ ಬೆಳೆಯುವ ಪ್ರಾಮಾಣ ಕ ಪ್ರಯತ್ನ ಮಾಡಿದ್ದನ್ನು ಮರೆಯಲಾಗದು. ಜಾತಿ ಜನಗಣತಿ, ಒಳ ಮೀಸಲಾತಿ ಮತ್ತು ಪ್ರತ್ಯೇಕ ಪ್ರಕ್ರಿಯೆ ರಾಜಕೀಯ ಲೆಕ್ಕಾಚಾರದಲ್ಲಿ ನಡೆಯುತ್ತಿರುವುದು ನೋವಿನ ಸಂಗತಿ. ರಾಜಕಾರಣ ಗಳು ಯಾವುದೇ ಧರ್ಮದಲ್ಲಿ ಕೈಹಾಕದೇ ಧಾರ್ಮಿಕ ಮೌಲ್ಯಗಳನ್ನು ಬೆಳೆಸಿಕೊಂಡು ಬರಲು ಮುಂದಾಗಬೇಕಾಗಿದೆ. ವೀರಶೈವ ಧರ್ಮದ ಎಲ್ಲ ಒಳಪಂಗಡಗಳು ಸಾಮರಸ್ಯ ಸದ್ಭಾವನೆಯಿಂದ ಬಾಳಿ ಅಭಿವೃದ್ಧಿ ಪಡೆಯುವಂತಾಗಲಿ. ಆಗಸ್ಟ್ ಕೊನೆ ವಾರದಲ್ಲಿ ಸಮಾನ ಪೀಠಗಳಾದ ಉಜ್ಜಯಿನಿ, ಕೇದಾರ, ಶ್ರೀಶೈಲ ಮತ್ತು ಕಾಶಿ ಜಗದ್ಗುರುಗಳವರ ಜೊತೆ ಸಮಾಲೋಚನೆ ಮಾಡಿ ದಾವಣಗೆರೆ ಮಹಾನಗರದಲ್ಲಿ “ವೀರಶೈವ-ಲಿಂಗಾಯತ” ಬೃಹತ್ ಧರ್ಮ ಸಮ್ಮೇಳನ ನಡೆಸಲು ತೀರ್ಮಾನಿಸಿದ್ದೇವೆ. ಈ ಅಪೂರ್ವ ಸಮಾರಂಭಕ್ಕೆ ಎಲ್ಲೆಡೆಯಿಂದ ಭಕ್ತ ಸಂಕುಲ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕರೆಯಿತ್ತರು. 

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...