ಬಾಳೆಹೊನ್ನೂರು:ಧರ್ಮಾಚರಣೆಯಲ್ಲಿ ನಂಬಿಕೆಯಿದ್ದರೆ ಸತ್ಫಲ ಪ್ರಾಪ್ತಿ : ಶ್ರೀ ರಂಭಾಪುರಿ ಜಗದ್ಗುರುಗಳು 

Source: balanagoudra | By Arshad Koppa | Published on 29th July 2017, 4:46 PM | State News | Guest Editorial |

ರಂಭಾಪುರಿ ಪೀಠ(ಬಾಳೆಹೊನ್ನೂರು) ಜುಲೈ 28.
    ಮಾನವನ ಒಳಿತಿಗಾಗಿ ವಿಧಿ ವಿಧಾನ ಸಂಪ್ರದಾಯ ಮತ್ತು ಪವಿತ್ರ ಆಚರಣೆಗಳು ಬೆಳೆದು ಬಂದಿವೆ. ದೇವರು ಮತ್ತು ಧರ್ಮಾಚರಣೆಯಲ್ಲಿ ನಂಬಿಗೆ ವಿಶ್ವಾಸಗಳಿದ್ದರೆ ಸತ್ಫಲ ಪಡೆಯಲು ಸಾಧÀ್ಯವಾಗುವುದೆಂದು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ|| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
    ಅವರು ಶ್ರೀ ರಂಭಾಪುರಿ ಪೀಠದಲ್ಲಿ ನಾಗಪಂಚಮಿ ನಿಮಿತ್ಯ ನಾಗರಕಟ್ಟೆಗೆ ಹಾಲೆರೆದು ಪೂಜಿಸಿ ಆಶೀರ್ವಚನ ನೀಡುತ್ತಿದ್ದರು.
    ranಮನುಷ್ಯ ಇಂದು ಧರ್ಮ ಧ್ಯಾನ ಹಾಗೂ ಪರಮಾತ್ಮನ ಚಿಂತನೆಯಿಂದ ದೂರವಾದ ಕಾರಣ ತೊಂದರೆಯಾಗುತ್ತಿದೆ. ಬಾಲ್ಯದಲ್ಲಿ ಜ್ಞಾನ ಯೌವನದಲ್ಲಿ ಸಂಪತ್ತು ವೃದ್ಧಾಪ್ಯದಲ್ಲಿ ಪುಣ್ಯ ಕಾರ್ಯಗಳನ್ನು ಮಾಡಿ ಜೀವನ ಸಾರ್ಥಕಪಡಿಸಿಕೊಳ್ಳಬೇಕಾಗಿದೆ. ದೋಣ ಗೆ ಬಳಸಿದ ಮರ ಚೂರು ಚೂರಾಗಿ ಬಿಟ್ಟರೆ ಅದು ನೀರಿನಲ್ಲಿ ತೇಲಬಹುದು. ಆದರೆ ಜನರನ್ನು ಸುರಕ್ಷಿತವಾಗಿ ದಡ ತಲುಪಿಸಲಾಗದು. ಬಿಡಿ ಹೂಗಳು ಸುಂದರವಾಗಿ ಕಾಣಬಹುದು. ಆದರೆ ಅದು ಮಾಲೆಯಾದಾಗ ಪರಮಾತ್ಮನ ಕೊರಳನ್ನು ಅಲಂಕರಿಸುತ್ತದೆ. ಯಾವುದೇ ಸಮಾಜ ಸೂತ್ರವೊಂದರಲ್ಲಿ ಬಂಧಿಯಾದಾಗ ಆ ಬಂಧನವೇ ಅದಕ್ಕೆ ರಕ್ಷಾ ಕವಚವಾಗುತ್ತದೆ. ವೈಚಾರಿಕತೆ ಮತ್ತು ಸುಧಾರಣೆಯ ಹೆಸರಿನಲ್ಲಿ ಮೂಲ ನಂಬಿಕೆ ಸಂಪ್ರದಾಯಗಳನ್ನು ನಿರ್ಲಕ್ಷಿಸುವುದು ಒಳ್ಳೆಯದಲ್ಲ. ಸಮಾಜದಲ್ಲಿ ಬೆಳೆದು ಬಂದಿರುವ ಆಚರಣೆ ಸಂಪ್ರದಾಯಗಳು ಮಾನವನ ಶ್ರೇಯಸ್ಸಿಗಾಗಿ ಹೊರತು ಅವನತಿಗಲ್ಲವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣ  ಧರ್ಮ ಗ್ರಂಥದಲ್ಲಿ ಬೋಧಿಸಿದ್ದಾರೆ ಎಂದರು.
    ಬೇರುಗಂಡಿ ಬೃಹನ್ಮಠದ ರೇಣುಕ ಮಹಂತ ಶಿವಾಚಾರ್ಯರು, ಮಹಾರಾಷ್ಟ್ರದ ಬಾಳಾಪುರ ಜಂಗಮಮಠದ ಡಾ|| ವಿರೂಪಾಕ್ಷ ಶಿವಾಚಾರ್ಯರು ಹಾಗೂ ಅಪಾರ ಭಕ್ತರು ನಾಗರಕಟ್ಟೆಗೆ ಹಾಲೆರೆದು ಪೂಜಿಸುವ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
    ಶಿಕ್ಷಕ ವೀರೇಶ ಕುಲಕರ್ಣಿ ಸರ್ವರನ್ನೂ ಸ್ವಾಗತಿಸಿ ನಿರೂಪಿಸಿದರು.     

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...