ಬಾಳೆಹೊನ್ನೂರು: ಸದ್ಗುಣ ಸತ್ಕಾರ್ಯಗಳಿಂದ ಬದುಕು ಸಮೃದ್ಧ : ಶ್ರೀ ರಂಭಾಪುರಿ ಜಗದ್ಗುರುಗಳು 

Source: balanagoudra | By Arshad Koppa | Published on 25th July 2017, 8:37 AM | State News | Guest Editorial |

ರಂಭಾಪುರಿ ಪೀಠ(ಬಾಳೆಹೊನ್ನೂರು) ಜುಲೈ 24.
    ಪ್ರಪಂಚ ಮತ್ತು ಪರಮಾತ್ಮ ಎರಡೂ ಅಮೂಲ್ಯ. ಪಾರಮಾರ್ಥ ಮರೆತು ಪ್ರಪಂಚದತ್ತ ಮನುಷ್ಯನ ಮನಸ್ಸು ಜಾರುತ್ತದೆ. ಬಂಧನ-ಮೋಕ್ಷ ಸುಖ ದು:ಖಕ್ಕೆ ಮನಸ್ಸು ಕಾರಣ. ಸದ್ಗುಣ ಮತ್ತು ಸತ್ಕಾರ್ಯಗಳಿಂದ ಮನುಷ್ಯ ಬದುಕನ್ನು ಸಮೃದ್ಧಗೊಳಿಸಿಕೊಳ್ಳುವ ಅಗತ್ಯವಿದೆ ಎಂದು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ|| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
    ಅವರು ಶ್ರೀ ರಂಭಾಪುರಿ ಪೀಠದಲ್ಲಿ ಶ್ರಾವಣ ಮಾಸದ 26ನೇ ವರ್ಷದ ಶಿವಪೂಜಾ ತಪೋನುಷ್ಠಾನ ಹಾಗೂ ಶ್ರಾವಣ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
    ಬದುಕು ಒಂದು ದೀಪ. ಬೆಳಕಿನ ಬದುಕಿಗೆ ಬೆಲೆ ಕಟ್ಟಲಾಗದು. ಕತ್ತಲಲ್ಲಿ ಬೆಳಕಿನ ಮಹತ್ವ ಗೊತ್ತಾಗುವುದು. ವಿಜ್ಞಾನ ತಂತ್ರಜ್ಞಾನ, ಕೈಗಾರೀಕರಣ, ನಗರೀಕರಣಗಳಿಂದಾಗಿ ಮನುಷ್ಯನ ಬದುಕು ಒತ್ತಡದಲ್ಲಿ ಸಿಕ್ಕು ಒದ್ದಾಡುತ್ತಿದ್ದಾನೆ. ಮನುಷ್ಯನ ಭಾವನೆ ಸತ್ಯದತ್ತ ಹರಿಯುತ್ತಿದ್ದರೆ ಮಾತ್ರ ಆಂತರಿಕವಾಗಿ ಶಾಂತಿ ಸೌಖ್ಯ ಕಾಣಲು ಸಾಧ್ಯ. ಹೊನ್ನು ಹೆಣ್ಣು ಮಣ ್ಣಗಾಗಿ ಸದಾ ಪರಿತಪಿಸುತ್ತಿರುವ ಮನುಷ್ಯನಿಗೆ ಒಂದಿಷ್ಟು ಜ್ಞಾನದ ಬೆಳಕು ಬೇಕಾಗುತ್ತದೆ. ಹಣ ಬೆಳ್ಳಿ ಬಂಗಾರ ಮತ್ತು ವಸ್ತು ಒಡೆವೆಗಳಿಂದ ಬದುಕು ಶ್ರೀಮಂತಗೊಳ್ಳದು. ಅದರೊಂದಿಗೆ ಸದ್ಗುಣ ಸತ್ಕಾರ್ಯಗಳನ್ನು ಮೈಗೂಡಿಸಿಕೊಂಡು ಬಂದರೆ ಜೀವನ ಉಜ್ವಲಗೊಳ್ಳುವುದು. ವಿಶ್ವಬಂಧುತ್ವ ಸಾರಿದ ಮತ್ತು ಜೀವನ ಮೌಲ್ಯ ಬೋಧಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರ ಪಾವನ ಚಾರಿತ್ರ್ಯ ಅರಿಯುವುದು ಬಲು ಮುಖ್ಯವೆಂದರು.
    ಬೇರುಗಂಡಿ ಬೃಹನ್ಮಠದ ರೇಣುಕ ಮಹಂತ ಶಿವಾಚಾರ್ಯ ಸ್ವಾಮಿಗಳು “ಶ್ರೀ ಜಗದ್ಗುರು ರೇಣುಕ ವಿಜಯ” ಪುರಾಣ ಪ್ರವಚನ ಪ್ರಾರಂಭಿಸಿ ಮಾತನಾಡುತ್ತ ಬ್ರಹ್ಮಾಂಡ ಬೆಳಗಲು ಸೂರ್ಯ ಬೇಕು. ಪಿಂಡಾಂಡ ಬೆಳಗಿ ಪರಿಶುದ್ಧಗೊಳಿಸಲು ಗುರು ಕಾರುಣ್ಯ ಕಿರಣ ಅವಶ್ಯಕ. ಚರಿತ್ರೆಗಿಂತ ಚಾರಿತ್ರ್ಯ ದೊಡ್ಡದು. ಪವಿತ್ರ ಶ್ರಾವಣ ಮಾಸದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಅದ್ಭುತವಾದ ಲೀಲೆ ಪವಾಡಗಳನ್ನು ಕೇಳಿ ನಾವೆಲ್ಲರೂ ಪುನೀತರಾಗೋಣ ಎಂದರು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
    ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಗುರು ದಾರುಕಾಚಾರ್ಯರಿಂದ ಭಕ್ತಿ ಗೀತೆ, ಶಿಕ್ಷಕ ವೀರೇಶ ಕುಲಕಣ ್ ಇವರಿಂದ ನಿರೂಪಣೆ ನಡೆಯಿತು.
ಶ್ರಾವಣ ನಿಮಿತ್ಯ ವಿಶೇಷ ಇಷ್ಟಲಿಂಗ ಮಹಾಪೂಜಾ: 
     ಶ್ರೀ ಜಗದ್ಗುರು ರಂಭಾಪುರಿ ಪೀಠದ ರೇಣುಕಾಚಾರ್ಯರಿಗೆ-ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಗೆ, ಶ್ರೀ ಸೋಮೇಶ್ವರ ಲಿಂಗಕ್ಕೆ, ಲಿಂಗೈಕ್ಯ ಶ್ರೀ ರಂಭಾಪುರಿ ಜಗದ್ಗುರುಗಳವರ ಗದ್ದುಗೆಗಳಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ದೀಪಾರಾಧನೆ ಮಹಾಮಂಗಲ ಜರುಗಿದವು. ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ|| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಸಕಲ ಸದ್ಭಕ್ತರಿಗೆ ಶುಭ ಹಾರೈಸಿದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...