ಬಾಳೆಹೊನ್ನೂರು:ವೀರಶೈವ ಧರ್ಮ ಸಂಸ್ಕೃತಿ ಉಳಿಸಿ ಬೆಳೆಸಿರಿ : ಶ್ರೀ ರಂಭಾಪುರಿ ಜಗದ್ಗುರುಗಳು 

Source: balanagoudra | By Arshad Koppa | Published on 13th August 2017, 11:13 AM | State News | Guest Editorial |

ರಂಭಾಪುರಿ ಪೀಠ (ಬಾಳೆಹೊನ್ನೂರು) ಆಗಸ್ಟ್-12. ವಿಶ್ವ ಬಂಧುತ್ವ ಸಾರಿದ ವೀರಶೈವ ಧರ್ಮ ಸಕಲರ ಹಿತವನ್ನು ಸದಾ ಬಯಸುತ್ತಾ ಬಂದಿದೆ. ವೀರಶೈವ ಧರ್ಮದಿಂದ ಲಿಂಗಾಯತ ಸ್ವತಂತ್ರ್ಯ ಧರ್ಮವಾಗಬೇಕೆಂದು ಕೆಲವರು ಗೊಂದಲ ಮೂಡಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಮೂಲ ವೀರಶೈವ ಧರ್ಮ ಸಂಸ್ಕøತಿ ಉಳಿಸಿ ಬೆಳೆಸುವ ಸತ್ಯ ಸಂಕಲ್ಪ ಎಲ್ಲರೂ ಕೈಗೊಳ್ಳಬೇಕಾಗಿದೆ ಎಂದು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ|| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
    ಅವರು ಶ್ರೀ ರಂಭಾಪುರಿ ಪೀಠದಲ್ಲಿ ಜರುಗಿದ ವೀರಶೈವ-ಲಿಂಗಾಯತ ಸಮನ್ವಯ ಸಂಘಟನಾ ಸಮಾಲೋಚನಾ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
     ವೀರಶೈವ ಲಿಂಗಾಯತ ಇವು ಬೇರೆಯಲ್ಲ. ಇವೆರಡು ಒಂದೇ. ಒಂದು ಆಚಾರ ಪ್ರಧಾನವಾದರೆ ಇನ್ನೊಂದು ವಿಚಾರ ಪ್ರಧಾನವಾಗಿದೆ. ಇವೆರಡೂ ಮನುಷ್ಯನಿಗೆ ಅವಶ್ಯಕ ಸಾಮಾಜಿಕ ಸಂವೇದನಾ ಶೀಲ ಸೂತ್ರ ಅಳವಡಿಸಿಕೊಂಡ ವೀರಶೈವ ಲಿಂಗಾಯತ ಧರ್ಮ ಅಚಾರ್ಯರ ಮತ್ತು ಶರಣರ ಚಿಂತನಗಳಿಂದ ಸಮೃದ್ಧಗೊಂಡಿದೆ. ವೀರಶೈವ ಲಿಂಗಾಯತ ಸಮನ್ವಯ ಸಂಘಟನೆಯನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳುವ ನಿರ್ಣಯ ಕೈಗೊಳ್ಳಲಾಯಿತು. ಆಗಸ್ಟ್ 23ನೆ ತಾರೀಖಿಗೆ ಗುರು ವಿರಕ್ತ ಮಠಾಧೀಶರು ಸೇರಿ ಮುಖ್ಯ ಮಂತ್ರಿಗಳಿಗೆ ಮತ್ತು ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಲಾಗುವುದೆಂದು ಜಗದ್ಗುರುಗಳು ತಿಳಿಸಿದರು. ವಿವಿಧೆಡೆಯಿಂದ ಆಗಮಿಸಿದ ಮಠಾಧೀಶರು ಒಮ್ಮತದ ನಿರ್ಧಾರ ಕೈಗೊಂಡರು. ಎಮ್ಮಿಗನೂರಿನ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಪ್ಪೂರು ಗದ್ದಿಗೆಮಠದ ಡಾ|| ಯತೀಶ್ವರ ಶಿವಾಚಾರ್ಯ ಸ್ವಾಮಿಗಳು ನಿರ್ಣಯಗಳನ್ನು ಸಭಿಕರಿಗೆ ತಿಳಿಸಿದರು. ಎಡೆಯೂರು, ಎಸಳೂರು, ಬೇರುಗಂಡಿ, ಚಿಕ್ಕಮಗಳೂರು, ಬಿಳಕಿ, ಮಳಲಿ, ಬಂಕಾಪುರ, ತಡವಲಗಾ, ಕನ್ನೂರು, ಗಿರಗಾಂವ, ಸಿಂಧನೂರು, ಬೀರೂರು, ಮಾದಿಹಳ್ಳಿ, ಮಸ್ಕಿ, ಸಿದ್ಧರಬೆಟ್ಟ, ಹರಗಿನಡೋಣ  ಇನ್ನೂ ಮೊದಲಾದ ಶ್ರೀಗಳು ಪಾಲ್ಗೊಂಡಿದ್ದರು. ನೇತೃತ್ವವನ್ನು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷರಾದ ಮುಕ್ತಿಮಂದಿರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ವಹಿಸಿದ್ದರು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತ ಸಮೂಹ ಸಭೆಯಲ್ಲಿ ಪಾಲ್ಗೊಂಡಿದ್ದರು.
    ಬೀರೂರು ಶಿವಸ್ವಾಮಿ ಸ್ವಾಗತಿಸಿದರು. ಹೆಚ್.ಎಂ. ಲೋಕೇಶ್ ವಂದನಾರ್ಪಣೆ ಸಲ್ಲಿಸಿದರು. 

   

ವೀರಶೈವ-ಲಿಂಗಾಯತ ಸಮನ್ವಯ ಸಂಘಟನಾ ಸಮಾಲೋಚನಾ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು
2017 ಆಗಸ್ಟ್-23 ರಂದು ದಾವಣಗೆರೆ ನಗರದಲ್ಲಿ ನಡೆಸಬೇಕೆಂದಿರುವ ವೀರಶೈವ-ಲಿಂಗಾಯತ ಸಮನ್ವಯ ಸಂಘಟನಾ ಸಮಾಲೋಚನಾ ಸಭೆಯು ದಾವಣಗೆರೆ ಬದಲಾಗಿ ಅಂದೇ ಬೆಂಗಳೂರಿನಲ್ಲಿ ಸಮಾವೇಶಗೊಂಡು ಮುಖ್ಯ ಮಂತ್ರಿಗಳಿಗೆ ಮತ್ತು ರಾಜ್ಯಪಾಲರಿಗೆ ಅರ್ಜಿ ಸಲ್ಲಿಸುವುದು.
ಬೆಂಗಳೂರಿನ ಸಮಾವೇಶದಲ್ಲಿ ದಾವಣಗೆರೆ ಕಲಬುರ್ಗಿ ಮತ್ತು ಮಹಾರಾಷ್ಟ್ರದ ಸೋಲ್ಲಾಪುರದಲ್ಲಿ ವೀರಶೈವ ಲಿಂಗಾಯತ ಸಮನ್ವಯ ಸಂಘಟನಾ ಬೃಹತ್ ಸಮಾವೇಶ ನಡೆಸಲು ದಿನಾಂಕಗಳನ್ನು ಗೊತ್ತು ಪಡಿಸುವುದು.
ಈ ಸಮಾವೇಶಕ್ಕೆ ಪಂಚ ಪೀಠದ ಜಗದ್ಗುರುಗಳ ಜೊತೆಗೆ ಗುರು ವಿರಕ್ತ ಮಠಾಧೀಶರಿಗೆ ಸಮಾನ ವೇದಿಕೆಗೆ ಆಹ್ವಾನ ಕೊಡುವುದು.
ರಾಷ್ಟ್ರೀಯ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ರಾಜ್ಯ ಘಟಕದ ಪ್ರಮುಖರಿಗೆ ಸಮಾರಂಭಕ್ಕೆ ಆಹ್ವಾನ ಕೊಡುವುದು.
ಈ ಬೃಹತ್ ಸಮಾರಂಭದಲ್ಲಿ ಸಮಸ್ತ ವೀರಶೈವ-ಲಿಂಗಾಯತ ಧರ್ಮ ಬಾಂಧವರು ಸಕ್ರೀಯವಾಗಿ ಪಾಲ್ಗೊಂಡು ಸಮಾಜ ಶಕ್ತಿಯನ್ನು ಪ್ರದರ್ಶಿಸುವುದು.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...