ಬಾಳೆಹೊನ್ನೂರು: ನಡೆ ನುಡಿ ಸಂಗಮ ಜೀವನ ಉತ್ಕರ್ಷತೆಗೆ ಅಡಿಪಾಯ: ಶ್ರೀ ರಂಭಾಪುರಿ ಜಗದ್ಗುರುಗಳು 

Source: balanagoudra | By Arshad Koppa | Published on 5th August 2017, 2:22 PM | State News | Guest Editorial |

ರಂಭಾಪುರಿ ಪೀಠ(ಬಾಳೆಹೊನ್ನೂರು) ಆಗಸ್ಟ್-3 .
    ಜೀವನ ಸಮೃದ್ಧಿಗೆ ತಾತ್ವಿಕ ಸತ್ಯದ ಜ್ಞಾನದ ಬೆಳಕು ಬೇಕು. ಬೆಳಕಿಲ್ಲದ ಬಾಳು ಉಜ್ವಲಗೊಳ್ಳದು. ನಡೆ ನುಡಿ ಮನಸ್ಸು ಒಂದಾಗಿ ಬಾಳಿದರೆ ಜೀವನ ಉತ್ಕರ್ಷತೆಗೊಳ್ಳಲು ಸಾಧ್ಯವಾಗುವುದೆಂದು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ|| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
    ಅವರು ಶ್ರೀ ರಂಭಾಪುರಿ ಪೀಠದಲ್ಲಿ ಶ್ರಾವಣ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
    ಮನೆ ಸ್ವಚ್ಛವಾಗಿಡಲು ಪೊರಕೆ, ಕತ್ತಲೆ ಕಳೆಯಲು ಹಣತೆ, ಸುಗಂಧ ಹರಡಲು ಹೂವು ಬೇಕು. ಬದುಕು ಸಮೃದ್ಧ ಸುಂದರಗೊಳ್ಳಲು ಅಧ್ಯಾತ್ಮದ ಅರಿವು ಬಲು ಮುಖ್ಯ. ಸದ್ಗುಣ ಮತ್ತು ಅಧ್ಯಾತ್ಮ ಅರಿವಿನಿಂದ ಜೀವಾತ್ಮ ಶಾಂತಿಯಿಂದ ಬದುಕಲು ಸಾಧ್ಯವಾಗುತ್ತದೆ. ಮನಸ್ಸು ಪರಿಶುದ್ಧಗೊಂಡು ಪ್ರಶಾಂತವಾಗಿಡಲು ಶ್ರೀ ಗುರುವಿನ ಜ್ಞಾನದ ಹೊಂಗಿರಣ ಅವಶ್ಯಕ. ಅರಿವು ಆಚಾರಗಳ ಮೂಲಕ ಬದುಕಿನಲ್ಲಿ ನೆಮ್ಮದಿ ಶಾಂತಿ ಕಾಣಲು ಸಾಧ್ಯವಾಗುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸ್ಪಷ್ಟವಾಗಿ ಬೋಧಿಸಿದ್ದಾರೆ ಎಂದರು.
    ‘ರೇಣುಕ ವಿಜಯ’ ಪುರಾಣ ಪ್ರವಚನ ಮಾಡಿದ ಬೇರುಗಂಡಿ ಬೃಹನ್ಮಠದ ರೇಣುಕ ಮಹಂತ ಶಿವಾಚಾರ್ಯರು ಮಾತನಾಡಿ ಹಂಚಿ ಉಣ್ಣುವುದು ಭಾರತೀಯ ಸಂಸ್ಕøತಿ. ಒಂದುಗೂಡಿಸುವುದು ಧರ್ಮದ ಕೆಲಸವೆಂದರು. ಇದೇ ಸಂದರ್ಭದಲ್ಲಿ ‘ಅಮೃತ ಸಂದೇಶ ಬಿಂದುಗಳು’ ಕೃತಿಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆ ಮಾಡಿದರು.
    ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಗುರು ದಾರುಕಾಚಾರ್ಯ ಶಾಸ್ತ್ರಿಗಳಿಂದ ಭಕ್ತಿ ಗೀತೆ, ಶಿಕ್ಷಕ ವೀರೇಶ ಕುಲಕಣ ್ ಇವರಿಂದ ನಿರೂಪಣೆ,  ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಮನೋರಂಜನೆ ಕಾರ್ಯಕ್ರಮಗಳು ಜರುಗಿದವು.
    ಬೆಳಗಿನ ಕಾಲದಲ್ಲಿ ಲೋಕಕಲ್ಯಾಣ-ಶಾಂತಿ ಬದುಕಿಗಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಭಕ್ತ ಸಮುದಾಯಕ್ಕೆ ಶುಭ ಹಾರೈಸಿದರು.

Read These Next

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...