ಮಸ್ಜಿದ್-ಎ-ಫುರ್‍ಖಾನ್ ನಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಪ್ರಾರ್ಥನೆ

Source: sonews | By Staff Correspondent | Published on 1st August 2020, 5:32 PM | Coastal News |

ಕಾರವಾರ: ಕೋಡಿಬಾಗದ ಅಬಕಾರಿ ಕಚೇರಿ ಹತ್ತಿರವಿರುವ ಮಸ್ಜಿದ್-ಎ-ಫುರ್‍ಖಾನ್ ದಲ್ಲಿ ಈದ್-ಉಲ್-ಅಝಾ(ಬಕ್ರೀದ ಹಬ್ಬದ) ನಿಮಿತ್ತ ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಎರಡು ಹಂತವಾಗಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. 

ಮೌಲಾನಾ  ವಾಜಿದ್ ಶೇಖ್‍ರವರು ನಮಾಝನ್ನು ನೆರವೇರಿಸಿಕೊಟ್ಟರು. ಈ ಸಂದರ್ಭದಲ್ಲಿ ಪ್ರವಚನ ನೀಡಿದ ಅವರು ಈದ್-ಉಲ್-ಅಝಾ ಹಬ್ಬವನ್ನು ಇಂದು ನಾವು ಸರಳವಾಗಿ ಆಚರಿಸುತ್ತಾ ಇದ್ದೇವೆ. ನಮಗೆಲ್ಲರಿಗೂ ತಿಳಿದಿರುವ ಹಾಗೆ ಹಲವು ತಿಂಗಳುಗಳಿಂದ ಇಡೀ ಜಗತ್ತಿನಲ್ಲಿ ಕರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಭಯದ ವಾತಾವರಣದಲ್ಲಿ ನಾವು ಜೀವನವನ್ನು ನಡೆಸುತ್ತಿದ್ದೇವೆ. ನಾವೆಲ್ಲರೂ ಸೇರಿ ಸರಕಾರದ ಆದೇಶವನ್ನು ಪಾಲಿಸುವುದರ ಮೂಲಕ ಪ್ರತಿ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕಂಡು, ಮಾಸ್ಕ್‍ನ್ನು ಧರಿಸುವುದರ ಮೂಲಕ ರೊಗ ಹರಡುವುದನ್ನು ತಡೆಯೋಣ ಎಂದು ಹೇಳಿದರು. ಜತೆಗೆ ಈ ರೊಗ ಬೇಗ ನಿರ್ಮೂಲನವಾಗಲಿ ಎಂದು ದೇವರಲ್ಲಿ  ಎಲ್ಲರೂ ಶುದ್ಧ ಮನಸ್ಸಿನಿಂದ ಪ್ರಾರ್ಥಿಸೋಣ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ  ಮಸ್ಜಿದ್-ಎ-ಫುರ್‍ಖಾನನ ಶೌಕತ್ ಶೇಖ್, ಮಾಜಿ ಅಧ್ಯಕ್ಷ ಮೊಹ್ಮಮದ್ ರಫೀಕ್ ಮಿರ್‍ಜಾನ್‍ಕರ್, ರಾಷ್ಟ್ರಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತರೂ ಆದ ನಜೀರ್ ಅಹಮದ್ ಯು.ಶೇಖ್, ವಕೀಲರಾದ ಎಸ್.ಎ.ಖಾಜಿ, ಡಾ|| ನಯೀಮ್ ಮುಕಾದಮ್,  ಆದಮ್ ಇದ್ರೂಸ್ ಖಾನ್, ಫೈಸಲ್ ಮುಕಾದಮ್, ರಿಯಾಜ್ ಮಿರ್ಜಾನ್‍ಕರ್, ಅಬ್ದುಲ್ ರೆಹಮಾನ್, ರಾಷ್ಟ್ರಯುವ ಪ್ರಶಸ್ತಿ ವಿಜೇತರಾದ ಮೊಹಮ್ಮದ್ ಹಸನ್ ಶೇಖ್, ಮೊಹಮ್ಮದ್ ಫೌಜಿ ಮಿರ್ಜಾನ್‍ಕರ್ ಮತ್ತು ಆಝಾದ್ ಯುಥ್ ಕ್ಲಬ್‍ನ ಕಾರ್ಯದರ್ಶಿ ಮೊಹಮ್ಮದ್ ಉಸ್ಮಾನ್ ಶೇಖ್  ಮತ್ತಿತರರು ಉಪಸ್ಥಿತರಿದ್ದರು.
 

Read These Next

ಸೌದಿ ಅರೇಬಿಯಾದ ತಾಯಿಫ್‌ನಲ್ಲಿ ಕಾರು ಅಪಘಾತ ಉಡುಪಿ ಜಿಲ್ಲೆಯ ಯುವಕನ ಸಾವು ಮತ್ತೊಬ್ಬ  ಗಂಭೀರ

ಭಟ್ಕಳ:  ಸೌದಿ ಅರೇಬಿಯಾದ ತಾಯಿಫ್‌ ಎಂಬಲ್ಲಿ ಬುಧವಾರ ನಡೆದ ರಸ್ತೆ ಅಪಘಾತದಲ್ಲಿ  ಉಡುಪಿ ಜಿಲ್ಲೆಯ ಗಂಗೋಳಿ ನಿವಾಸಿಗಳಾದ ಮುಹಮ್ಮದ್ ...