ವಿಧಾನಪರಿಷತ್ ಚುನಾವಣೆ ಹಿನ್ನಲೆ. ಹೊನ್ನಾವರಕ್ಕೆ ಅಕ್ಟೋಬರ್ 24 ರಂದು ಎಚ್ ಕೆ ಪಾಟೀಲ್.

Source: SO News | By Laxmi Tanaya | Published on 23rd October 2020, 6:21 PM | Coastal News |

ಹೊನ್ನಾವರ : :  ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಜಿ ಸಚಿವ ಎಚ್.ಕೆ.ಪಾಟೀಲ್ ಶನಿವಾರ ಹೊನ್ನಾವರಕ್ಕೆ ಆಗಮಿಸಲಿದ್ದಾರೆ. 

ಮಧ್ಯಾಹ್ನ 4-30 ಗಂಟೆಗೆ ಮಂಕಿ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆಯುವ ಮಂಕಿ ಮತ್ತು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಜಂಟಿಯಾಗಿ ಏರ್ಪಡಿಸಿದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಕ್ಟೋಬರ್ ೨೮ ರಂದು ನಡೆಯುವ ಕರ್ನಾಟಕ ರಾಜ್ಯ ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ಅಭ್ಯರ್ಥಿ ಡಾ.ಕುಬೇರಪ್ಪಾ ಪರವಾಗಿ  ಚುನಾವಣಾ ಪ್ರಚಾರಾರ್ಥ ಭಾಷಣ ಮಾಡಲಿದ್ದಾರೆ. 

ಸಭೆಯಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯ, ಮಾಜಿ ಶಾಸಕಿ  ಶಾರದಾ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣಾ ನಾಯ್ಕ, ಜಿಲ್ಲಾ ಮತ್ತು ತಾಲೂಕು ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ರಾಜ್ಯ, ಜಿಲ್ಲಾ, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ವಿವಿಧ ಸೆಲ್ ಪದಾಧಿಕಾರಿಗಳು ಅಧ್ಯಕ್ಷರು, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಲಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ‌   ಮಂಕಿ ಬ್ಲಾಕ್ ಕಾಂಗ್ರೆಸ್ ಸಮಿತಿ, ಅಧಕ್ಷರಾದ ಗೋವಿಂದ ನಾಯ್ಕ, ,ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಜಗದೀಪ ಎನ್. ತೆಂಗೇರಿ ವಿನಂತಿಸಿದ್ದಾರೆ.

Read These Next

ಭಟ್ಕಳ ಹೆಬಳೆಯಲ್ಲಿ ಕಸ, ತ್ಯಾಜ್ಯ ಸಂಗ್ರಹಕ್ಕೆ ತಡೆ; ಊರೆಲ್ಲ ದುರ್ವಾಸನೆ; ಜಾಗ, ಹಣವಿದ್ದರೂ ಯೋಜನೆ ಇಲ್ಲ !

ತಾಲೂಕಿನ ಹೆಬಳೆ ಪಂಚಾಯತ ಪ್ರದೇಶದಲ್ಲಿ ಮನೆ ಮನೆಯ ಕಸ, ತ್ಯಾಜ್ಯಗಳನ್ನು ಎತ್ತಿಕೊಂಡು ಊರ ನಡುವಿನ ಖಾಲಿ ಪ್ರದೇಶದಲ್ಲಿ ಸಂಗ್ರಹಿಸಿ ...

ಉ.ಕ.ಜಿಲ್ಲೆಯ 47,708 ಎಕರೆ ಅರಣ್ಯ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸುವಂತೆ ಅರಣ್ಯ ಹಕ್ಕು ಹೋರಾಟಗಾರ ಆಗ್ರಹ

ಶಿರಸಿ : ರಾಜ್ಯ ಸರ್ಕಾರದ ಅಧಿಸೂಚನೆ ನಿರ್ಲಕ್ಷಿಸಿ ಅರಣ್ಯ ವಾಸಿಗಳು ಸಾಗುವಳಿ ಮಾಡುತ್ತಿರುವ ಜಿಲ್ಲೆಯ 47,708 ಎಕರೆ ಅರಣ್ಯ ಭೂಮಿ ಪ್ರದೇಶ ...