ಬಾಬರಿ ಮಸಿದಿ ಐತಿಹಾಸಿಕ ತೀರ್ಪಿಗೆ ಕ್ಷಣಗಣನೆ ಆರಂಭ; ಶನಿವಾರ ಬೆಳಿಗ್ಗೆ ೧೦:೩೦ಕ್ಕೆ ಮಹಾತೀರ್ಪು ಪ್ರಕಟ

Source: sonews | By Staff Correspondent | Published on 8th November 2019, 10:55 PM | National News | Don't Miss |

ಹೊಸದಿಲ್ಲಿ: ದೇಶದಲ್ಲಿ ಅಸಹನೆ, ಕೋಮುಗಲಭೆ, ಅಶಾಂತಿಗೆ ಕಾರಣವಾಗಿದ್ದ ಭೂ ಒಡೆತನಕ್ಕೆ ಸೇರಿದ ೧೩೪ ವರ್ಷಗಳ ಅತ್ಯಂತ ಹಳೆಯ ಹಾಗೂ ವಿವಾದಿತ ಬಾಬರಿ ಮಸೀದಿ- ರಾಮಜನ್ಮಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ.೯ ಶನಿವಾರ ಬೆಳಿಗ್ಗೆ ದೇಶದ ಸವೋಚ್ಛ ನ್ಯಾಯಾಲಯ ತೀರ್ಪ ನೀಡಲಿದೆ.
 

ಸತತ ೪೦ದಿನಗಳ ವಿಚಾರಣೆಯ ಬಳಿಕ ಐವರು ನ್ಯಾಯಾಧೀಶರ ಪೀಠ ತೀರ್ಪನ್ನು ಕಾಯ್ದಿರಿಸಿತ್ತು. ನಾಳೆ (ಶನಿವಾರ) ಈ ಐವರು ಮಹಾನ್ಯಾಯಾಧೀಶರು ತೀರ್ಪನ್ನು ನೀಡಲಿದ್ದು  ಮಹಾತೀರ್ಪು ಪ್ರಕಟಣೆಗೆ ಈಗಾಗಲೆ ಕ್ಷಣಗಣನೆ ಆರಂಭಗೊಂಡಿದೆ. ದೇಶದ ಹಿತ ಈ ತೀರ್ಪಿನಲ್ಲಿ ಅಡಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 
 

ಐತಿಹಾಸಿಕ ತೀರ್ಪು ಪ್ರಕಟಗೊಳ್ಳುವ ಹಿನ್ನೆಲೆಯಲ್ಲಿ ಸಿಜೆಐ ರಂಜನ್ ಗೊಗೊಯಿ ಅವರು ಇಂದು ಉತ್ತರ ಪ್ರದೇಶಕ್ಕೆ ಭೇಟಿ ನೀಡಿ ಅಧಿಕಾರಿಗೊಳೊಂದಿಗೆ ಮಾತುಕತೆ ನಡಸಿ ಶಾಂತಿ ಸುವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದರು.

Read These Next