ಜಲ ಸಂರಕ್ಷಣೆ ಅರಿವು ಮೂಡಿಸುವ ಕಾರ್ಯಕ್ರಮ

Source: Shabbir Ahmed | By JD Bhatkali | Published on 5th March 2021, 8:19 PM | State News |

ಶ್ರೀನಿವಾಸಪುರ: ಹೆಚ್ಚು ವಿದ್ಯುತ್ ದಕ್ಷತೆಯ ಬಿಇಇ ಸ್ಟಾರ್ ರೇಟೆಡ್‍ವುಳ್ಳ ಪಂಪ್ ಸೆಟ್‍ಗಳ ಬಳಕೆಯ ಪ್ರಯೋಜನ ಮತ್ತು ಜಲ ಸಂರಕ್ಷಣೆಯ ಮಹತ್ವ ಕುರಿತಾಗಿ ಅರಿವು ಮೂಡಿಸುವ ಕಾರ್ಯಕ್ರಮ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕೋಲಾರ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ಬೆಂಗಳೂರು ಹಾಗೂ ಧಾನ್ ಫೌಂಡೇಶನ್, ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ “ಕೃಷಿ ಹಾಗೂ ಗೃಹ ಬಳಕೆಯಲ್ಲಿ ಹೆಚ್ಚು ಇಂಧನ ದಕ್ಷತೆಯ ಬಿ.ಇ.ಇ. ಸ್ಟಾರ್ ರೇಟೆಡ್ ಪಂಪಸೆಟ್‍ಗಳ ಮಹತ್ವ ಮತ್ತು ಜಲ ಸಂರಕ್ಷಣೆಯ ಮಹತ್ವ” ದ ಕುರಿತು ಕೃಷಿ ವಿಜ್ಞಾನ ಕೇಂದ್ರ, ಕೋಲಾರದಲ್ಲಿ ದಿನಾಂಕ: 04.03.2021 ರಂದು ಹಮ್ಮಿಕೊಳ್ಳಲಾಗಿತ್ತು.

ಕೆ. ತುಳಸಿರಾಮ್, ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು, ಕೆವಿಕೆ, ಕೋಲಾರ ತಮ್ಮ ಸ್ವಾಗತ ಮತ್ತು ಪ್ರಾಸ್ತವಿಕ ನುಡಿಯಲ್ಲಿ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯ ಪ್ರಮಾಣವನ್ನು ತಗ್ಗಿಸಲು ವಹಿಸಬೇಕಾದ ಕ್ರಮಗಳ ಮತ್ತು ಬರಿದಾಗುತ್ತಿರುವ ಪ್ರಾಕೃತಿಕ ಇಂಧನ ಸಂಪನ್ಮೂಲಗಳನ್ನು ಸಂರಕ್ಷಿಸುವ ಅವಶ್ಯಕತೆ ಹಾಗೂ ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳ ಬಳಕೆಯಿಂದ ಹಸಿರುಮನೆ ಅನಿಲಗಳನ್ನು (ಉಡಿeeಟಿ ಊouse ಉಚಿses) ನಿಯಂತ್ರಿಸುವ ಹಿನ್ನಲೆಯಲ್ಲಿ ಬಿಇಇ ಸ್ಟಾರ್‍ರೇಟೆಡ್ ಪಂಪ್ ಸೆಟ್‍ಗಳು ಮತ್ತು ಉಪಕರಣಗಳ ಬಳಕೆಯಿಂದ ವಿದ್ಯುತ್ ಬೇಡಿಕೆಯ ಪ್ರಮಾಣ ಹಾಗೂ ವಿದ್ಯುತ್ ಶುಲ್ಕವನ್ನು ಕಡಿಮೆ ಮಾಡಲು ಸಾಧ್ಯವಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಪ್ರಕಾಶ್ ಬಿ.ಜಿ. ಡೀನ್, ತೋಟಗಾರಿಕೆ ಮಹಾವಿದ್ಯಾಲಯ, ಕೋಲಾರರವರು ಮಾತನಾಡುತ್ತ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು, ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಯನ್ನು ಉತ್ತೇಜಿಸುವ ಮತ್ತು ಇಂಧನ ಸಂರಕ್ಷಣಾ ಕಾಯ್ದೆ-2001 ರ ಅನುಸಾರ ಇಂಧನ ಸಂರಕ್ಷಣೆ ಮತ್ತು ಇಂಧನ ದಕ್ಷತೆಯ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುವುದು. ಹೆಚ್ಚು ವಿದ್ಯುತ್À ದಕ್ಷತೆಯ ಬಿಇಇ ಸ್ಟಾರ್ ರೇಟೆಡ್‍ವುಳ್ಳ ಪಂಪ್ ಸೆಟ್‍ಗಳ ಬಳಕೆಯಿಂದ ಸುಮಾರು ಶೇ.25-30 ರಷ್ಟು ವಿದ್ಯುತ್ ಉಳಿತಾಯವಾಗುವುದರಿಂದ, ಅವುಗಳ ಬಳಕೆ ಬಗ್ಗೆ ನೀವೆಲ್ಲರೂ ಮಾಹಿತಿ ಪಡೆದು, ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕ ರಾಜ್ಯವನ್ನು ವಿದ್ಯುತ್ ಸ್ವಾವಲಂಭಿಯನ್ನಾಗಿ ಮಾಡುವುದು. ಜೊತೆಗೆ ಇತರೆ ಕಾರ್ಯಚಟುವಟಿಕೆಗಳೊಂದಿಗೆ ಇಂಧನ ಸಂರಕ್ಷಣೆ ಮತ್ತು ಇಂಧನ ದಕ್ಷತೆಯ ಕುರಿತು ಸಾರ್ವಜನಿಕರಿಗೆ, ರೈತರಿಗೆ ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮಗಳು ಸಹಾಯಕವಾಗಲಿವೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ಬಸವರಾಜು ಟಿ.ಬಿ. ಸಹ ವಿಸ್ತರಣಾ ನಿರ್ದೇಶಕರು(ದಕ್ಷಿಣ), ತೋ.ವಿ.ವಿ. ಬಾಗಲಕೋಟರವರು ಮಾತನಾಡುತ್ತ ವಿದ್ಯುತ್ ತಯಾರಿಸಲು ಬಳಸುವ ಪಳಿಯುಳಿಕೆ/ಮುಗಿದು ಹೋಗಬಹುದಾದ ಇಂಧನಗಳಾದ ಕಲ್ಲಿದ್ದಲು, ಪೆಟ್ರೋಲಿಯಮ್ ಉತ್ಪನ್ನಗಳು ಮತ್ತು ನೈಸರ್ಗಿಕ ಅನಿಲಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಿಸುವುದರ ಜೊತೆಗೆ ಹಸಿರುಮನೆ ಪರಿಣಾಮದಂತಹ ವಾತಾವರಣಕ್ಕೆ ಹಾನಿಯುಂಟು ಮಾಡುವ ವಿಷಾನೀಲಗಳ ಉತ್ಪತ್ತಿಯನ್ನು ತಡೆಗಟ್ಟಿ, ಜಾಗತಿಕ ತಾಪಮಾನವನ್ನು ನಿಯಂತ್ರಿಸುವುದು ನಮ್ಮೆಲ್ಲರ ಹೊಣೆಯಾಗಿದೆ. ಆದುದರಿಂದ ಈ ಬಗ್ಗೆ ಸಾರ್ವಜನಿಕರಲ್ಲಿ / ರೈತರಲ್ಲಿ ಜಾಗೃತಿ ಮೂಡಿಸಿ ಅವರುಗಳನ್ನು ವಿದ್ಯುತ್À ಅಥವಾ ಇಂಧನ ಉಳಿತಾಯ ಮಾಡಲು ಪ್ರೇರೇಪಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ. ಅಶ್ವಥ್ ರೆಡ್ಡಿ. ಎನ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತ, ದೇಶದಲ್ಲಿ ನವೀಕರಿಸಬಹುದಾದ ಇಂಧನ ಹಾಗೂ ಇಂಧನ ಉಳಿತಾಯ ಮತ್ತು ಇಂಧನ ಸಂರಕ್ಷಣಾ ಕ್ಷೇತ್ರವು ಬಹಳ ತ್ವರಿತವಾಗಿ ಅಭಿವೃದ್ದಿ ಹೊಂದುತ್ತಿದ್ದು, ಈ ಕ್ಷೇತ್ರಗಳಲ್ಲಿ ಹಲವಾರು ತಾಂತ್ರಿಕ ಆವಿಷ್ಕಾರಗಳು/ವಿಧಾನಗಳು ಪ್ರವರ್ಧನೆಗೆ ಬರುತ್ತಿರುತ್ತವೆ ಹಾಗೂ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಇಳುವರಿ ಪಡೆಯಲೂ ಸಹ ಸಾಧ್ಯವಾಗುತ್ತಿದೆÉ. ಇದರಿಂದ ರೈತರಲ್ಲಿ ಪಂಪ್‍ಸೆಟ್ಟುಗಳ ಬಳಕೆಯ ವಿಧಾನ, ಜಲ ಸಂರಕ್ಷಣೆ ಮತ್ತು ವಿದ್ಯುತ್ ಸಂರಕ್ಷಣೆ ಉಪಯೋಗ ಹಾಗೂ ಅವುಗಳ ಪ್ರಾಮುಖ್ಯದ ಅರಿವು ಮತ್ತು ಪರಿಸರ ಸಂರಕ್ಷಣೆ, ಹಣದ ಮೌಲ್ಯ, ಹೀಗೆ ಮುಂತಾದ ನೈತಿಕ ಹಾಗೂ ವಾಸ್ತವಿಕ ವಿಚಾರಗಳ ಮೇಲೆ ಬೆಳಕು ಚೆಲ್ಲಿದಂತಾಗುತ್ತದೆ. ಈ ನಿಟ್ಟಿನಲ್ಲಿ ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿ, (ಬಿ.ಇ.ಇ) ಇಂಧನ ಮಂತ್ರಾಲಯ, ಭಾರತ ಸರ್ಕಾರರವರ ಅನುದಾನದಡಿ ಕೃಷಿ ವಿಜ್ಞಾನ ಕೇಂದ್ರ (ಕೆ.ವಿ.ಕೆ) ಗಳಲ್ಲಿ ರೈತರಿಗೆ ಇಂಧನ ಸಂರಕ್ಷಣೆ ಮತ್ತು ಇಂಧನ ದಕ್ಷತೆಯ ಬಗ್ಗೆ ಜಾಗೃತಿ ಮೂಡಿಸಿ, ಹೆಚ್ಚು ಇಂಧನÀ ಬಳಕೆಯಿಂದಾಗುವ ಪರಿಣಾಮಗಳು ಮತ್ತು ಇಂಧನ ಸಂರಕ್ಷಣೆಗಾಗಿ ರೂಡಿಸಿಕೊಳ್ಳಬಹುದಾದ ಮಾರ್ಗೋಪಾಯಗಳು ಹಾಗೂ ಹೆಚ್ಚು ವಿದ್ಯುತ್À ದಕ್ಷತೆಯ ಪಂಪ್ ಸೆಟ್‍ಗಳ ಬಳಕೆಯ ಪ್ರಯೋಜನ ಮತ್ತು ಜಲ ಸಂರಕ್ಷಣೆಯ ಮಹತ್ವ ಕುರಿತಾಗಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ. ಗಿರೀಶ್, ಸಹಾಯಕ ಅಭಿಯಂತರರು, ತೋಟಗಾರಿಕೆ ಮಹಾವಿದ್ಯಾಲಯ ಬೆಂಗಳೂರುದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಸಮರ್ಪಕ ವಿದ್ಯುತ್ ಬಳಕೆ ಮತ್ತು ಮನೆಗಳಲ್ಲಿ, ವಿದ್ಯುತ್ ವ್ಯರ್ಥವಾಗುವುದನ್ನು ತಪ್ಪಿಸುವುದವರ ಬಗ್ಗೆ ತಿಳಿಸಿದರು. ಡಾ. ಅನಿಲಕುಮಾರ್ ಎಸ್. ವಿಜ್ಞಾನಿ (ಮಣ್ಣು ವಿಜ್ಞಾನ)

ಇವರು ಮಣ್ಣು ಮತ್ತು ನೀರಿನ ಸಂರಕ್ಷಣೆಯ ಪ್ರಾಮುಖ್ಯತೆ ಮತ್ತು ವಿಧಾನಗಳ ಕುರಿತು ಸವಿಸ್ತಾರವಾಗಿ ವಿವರಿಸಿದರು.

ಸದರಿ ಕಾರ್ಯಕ್ರಮದಲ್ಲಿ ಧಾನ್ ಫೌಂಡೆಶನ್, ಜಿಲ್ಲಾ ಸಮನ್ವಯ ಅಧಿಕಾರಿಗಳಾದ ರಮೇಶರವರು ಭಾಗವಹಿಸಿದ್ದರು. ಡಾ. ಅಂಬಿಕಾ ಡಿ.ಎಸ್, ನಿರೂಪಣೆ ಮಾಡಿದರು. ಡಾ. ಶಶಿಧರ್ ಕೆ.ಆರ್ ವಂದನಾರ್ಪಣೆಯನ್ನು ಸಲ್ಲಿಸಿದರು. ಸುಮಾರು 70 ರೈತರು ಭಾಗವಹಿಸಿ ಮಾಹಿತಿ ಪಡೆದು ಸಂದೇಹಗಳಿಗೆ ಪರಿಹಾರ ಪಡೆದುಕೊಂಡರು.

Read These Next

ಕೋವಿಡ್ 2ನೇ ಅಲೆ ಸಮರ್ಥವಾಗಿ ಎದುರಿಸಲು ಸಾಂಘಿಕ ಹೋರಾಟ ಅಗತ್ಯ: ವಿವಿಧ ಸಮಿತಿಗಳ ಸಭೆಯಲ್ಲಿ ಡಿ.ಸಿ. ವಿ.ವಿ.ಜ್ಯೋತ್ಸ್ನಾ ಕರೆ

ಕಲಬುರಗಿ : ತೀವ್ರಗತಿಯಲ್ಲಿ ಹರಡುತ್ತಿರುವ ಕೋವಿಡ್-19 ಎರಡನೇ ಅಲೆ ಸೋಂಕು ನಿಯಂತ್ರಣಕ್ಕೆ ಸಾಂಘಿಕ ಹೋರಾಟದ ಅಗತ್ಯವಿದ್ದು, ಎಲ್ಲಾ ...

ಕೋವಿಡ್ 2ನೇ ಅಲೆ:ನಿರ್ಲಕ್ಷ್ಯವಹಿಸದೇ ಬಿಗಿಯಾದ ಕ್ರಮಗಳು ಕೈಗೊಳ್ಳಲು ಸಚಿವ ಸಿಂಗ್ ಖಡಕ್ ಸೂಚನೆ

ಬಳ್ಳಾರಿ : ಕೋವಿಡ್ 2ನೇ ಅಲೆಯ ಸೊಂಕು ಅತ್ಯಂತ ತೀವ್ರಗತಿಯಲ್ಲಿ ಹರಡುತ್ತಿದ್ದು, ಸೊಂಕಿಗೆ ಒಳಗಾಗಿ ಹೋಂ ಐಸೋಲೇಶನ್ ನಲ್ಲಿದ್ದುಕೊಂಡು ...

ಮಹಾನಗರ ಪಾಲಿಕೆ ಚುನಾವಣೆ ಹಿನ್ನಲೆ. ಧಾರ್ಮಿಕ ಕಟ್ಟಡ, ಧಾರ್ಮಿಕ ಚಿಹ್ನೆಗಳನ್ನು ಚುನಾವಣಾ ಪ್ರಚಾರಕ್ಕಾಗಿ ಉಪಯೋಗಿಸುವಂತಿಲ್ಲ: ಆಯುಕ್ತೆ ಪ್ರೀತಿ ಗೆಹ್ಲೋಟ್

ಬಳ್ಳಾರಿ : ಧಾರ್ಮಿಕ ಕಟ್ಟಡಗಳನ್ನು ಮತ್ತು ಧಾರ್ಮಿಕ ಚಿಹ್ನೆಗಳನ್ನು ಚುನಾವಣಾ ಪ್ರಚಾರಕ್ಕಾಗಿ ಉಪಯೋಗಿಸುವಂತಿಲ್ಲ ಎಂದು ಮಹಾನಗರ ...