ಕೊರೋನಾ ಸೋಂಕಿತೆ ಮೇಲೆ ಅತ್ಯಾಚಾರ; ವೈದ್ಯನ ವಿರುದ್ಧ ಪ್ರಕರಣ ದಾಖಲು

Source: sonews | By Staff Correspondent | Published on 3rd August 2020, 5:51 PM | State News | Don't Miss |

ಬೆಂಗಳೂರು:  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೋನ ಪೀಡಿತ ಯುವತಿಯನ್ನು ಅತ್ಯಾಚಾರ ಮಾಡಲು ಯತ್ನಿಸಿದ ಆರೋಪದಲ್ಲಿ  ಬೆಂಗಳುರಿನ ವಿಕ್ಟೋರಿಯ ಆಸ್ಪತ್ರೆಯ ವೈದ್ಯರ ವಿರುದ್ಧ  ಕೇಸು ದಾಖಲಾಗಿದೆ.

ಜುಲೈ 25ಕ್ಕೆ ಘಟನೆ ನಡೆದಿದೆ ಎನ್ನಲಾಗಿದೆ. ಟ್ರಾಮ ಕೇರ್ ಸೆಂಟರ್ ಡ್ಯೂಟಿಯಲ್ಲಿರುವ ವೈದ್ಯರು ರಾತ್ರೆ ಆರೋಗ್ಯ ತಪಾಸಣೆಗೆಂದು ಕೊರೋನ ವಾರ್ಡಿನಲ್ಲಿಯೇ ಉಳಿದಿದ್ದರು. ಯುವತಿಗೆ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದಾಗ ಯುವತಿ ಬೊಬ್ಬೆ ಹೊಡೆದಿದ್ದು, ವೈದ್ಯ ತಪ್ಪಿಸಿಕೊಂಡಿದ್ದಾನೆ.

ವೈದ್ಯ ಗೌನ್ ಮತ್ತು ಮಾಸ್ಕ್ ಧರಿಸಿದ್ದರಿಂದ ಯುವತಿಗೆ ಗುರುತಿಸಲು ಸಾಧ್ಯವಾಗಿಲ್ಲ. ಯುವತಿ ಟ್ರಾಮ ಕೇರ್ ಸೆಂಟರ್ ನೋಡಲ್ ಅಧಿಕಾರಿಗೆ ದೂರು ನೀಡಿದ್ದಾಳೆ. ಆದರೆ, ಆಸ್ಪತ್ರೆಯು ಅಧಿಕೃತ ವೈದ್ಯರ ವಿವರಗಳನ್ನು ಕೊಡಲು ತಯಾರಾಗಿಲ್ಲ. ನಂತರ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ವೈದ್ಯರ ವಿರುದ್ಧ ಲೈಂಗಿಕ ಕಿರುಕುಳ ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಕುರಿತು ತನಿಖೆಗೆ ಸಮಿತಿಯನ್ನು ನೇಮಿಸಲಾಗಿದೆ ಎಂದು ವಿಕ್ಟೋರಿಯ ಆಸ್ಪತ್ರೆಯ ಸೂಪರಿಡೆಂಟ್ ಡಾ. ರಮೇಶ್ ಕೃಷ್ಣ.ಕೆ ತಿಳಿಸಿದ್ದಾರೆ.

Read These Next

ಕೋಲಾರ: ರಸ್ತೆಯಲ್ಲಿ ಹರಿಯುವ ನೀರಿಗೆ ಬಾಗಿನ ಅರ್ಪಿಸಿ ರೈತ ಸಂಘದಿಂದ ’ಜನಪ್ರತಿನಿಧಿಗಳ ಅಣಕು ಪ್ರದರ್ಶ”

ಕೋಲಾರ: ನಗರಾದ್ಯಂತ ಹದಗೆಟ್ಟಿರುವ ರಸ್ತೆಗಳನ್ನು ಸರಿಪಡಿಸುವ ಜತೆಗೆ ಜನಪ್ರತಿಧಿನಿಗಳು ಅಧಿಕಾರಿಗಳ ಹಗ್ಗಜಗ್ಗಾಟ ಬಿಟ್ಟು, ಜಿಲ್ಲೆಯ ...

ನೂತನ ರಾಷ್ಟ್ರೀಯ ಶಿಕ್ಷಣ ನೀತಿ -2020ನ್ನು ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗೆ ಒಳಪಡಿಸುವಂತೆ  ಎಸ್.ಐ.ಓ ರಾಜ್ಯಾಧ್ಯಕ್ಷ ನಿಹಾಲ್ ಕಿದಿಯೂರು ಸರ್ಕಾರಕ್ಕೆ ಆಗ್ರಹ

ಭಟ್ಕಳ:  ಒಕ್ಕೂಟ ವ್ಯವಸ್ಥೆಯ ಅಡಿಯಲ್ಲಿ ರಚಿತವಾಗಿರುವ ಪ್ರಜಾಪ್ರಭುತ್ವ ಭಾರತ ದೇಶದಲ್ಲಿ ಸರ್ಕಾರವು ಯಾವುದೇ ರೀತಿಯ ಕಾನೂನು ಅಥವಾ ...

ಉಡುಪಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಎನ್‌ಡಿಆರ್‌ಎಫ್ ಬಳಕೆ-ಗೃಹ ಸಚಿವ ಬೊಮ್ಮಾಯಿ

ಉಡುಪಿ: ಕಳೆದ ಎರಡು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಕೆಲವು ...

ಶಿರಸಿ: ‘ರಾಜ್ಯ ಮಟ್ಟದ ಜನ ಸಂಘಟನೆಗಳ ಪರ್ಯಾಯ ಜನತಾ ಅಧಿವೇಶನ’ದಲ್ಲಿ ಶಿರಸಿ ರವೀಂದ್ರ ನಾಯ್ಕ ರಿಂದ ವಿಷಯ ಮಂಡನೆ

ಶಿರಸಿ: ರಾಜ್ಯದ ಹಲವಾರು ಜನಪರ ಸಂಘಟನೆಗಳ ಒಕ್ಕೂಟ ಆಶ್ರಯದಲ್ಲಿ ಬೆಂಗಳೂರಿನ ಪ್ರೀಡಂಪಾರ್ಕ ಆವರಣದಲ್ಲಿ ಜರಗುತ್ತಿರುವ 2 ನೇ ದಿನದ ...