ಪವರ್ ಟಿವಿ ಮೇಲಿನ ದಾಳಿ ಪ್ರಜಾಪ್ರಭುತ್ವಕ್ಕೆ ಮಾರಕ : ಐವಾನ್ ಡಿಸೋಜಾ

Source: SO News | By Laxmi Tanaya | Published on 29th September 2020, 8:43 PM | Coastal News | Don't Miss |

ಮಂಗಳೂರು  : ಪವರ್ ಟಿವಿ ಮೇಲಿನ ದಾಳಿ ಪ್ರಜಾಪ್ರಭುತ್ವಕ್ಕೆ ಮಾರಕ. 
ಕರ್ನಾಟಕ ಇತಿಹಾಸದಲ್ಲೇ ಇಂತಹ ಘಟನೆ ನಡೆದಿಲ್ಲ. ಸಿಎಂ ಯಡಿಯೂರಪ್ಪ  ಸರಕಾರದಿಂದ ಪವರ್ ಟಿವಿ ಸ್ಥಗಿತಕ್ಕೆ  ಮಂಗಳೂರಿನಲ್ಲಿ  ಕೆಪಿಸಿಸಿ ವಕ್ತಾರ ಐವಾನ್   ಡಿಸೋಜಾ ವಾಗ್ದಾಳಿ ನಡೆಸಿದ್ದಾರೆ.

ಲಂಚ ತಿಂದವರು ಬಾಯಿ ಮುಚ್ಚಿಸುವ ಕೆಲಸ ಮಾಡಿದ್ದಾರೆ.‌ ಭ್ರಷ್ಟಾಚಾರ ವರದಿ ಮಾಡಿದ್ದಕ್ಕಾಗಿ ಕಚೇರಿಗೆ ನುಗ್ಗಿ ಬಂದ್ ಮಾಡಲಾಗಿದೆ.‌ ಭ್ರಷ್ಟಾಚಾರ ತನಿಖೆ ಮಾಡಲು ಸರಕಾರದ ಹಿಂದೇಟು ಯಾಕೆ ಎಂದು ಪ್ರಶ್ನಿಸಿದ ಅವರು,  ತನಿಖಾ ವರದಿ ಮಾಡಿದ್ದಕ್ಕಾಗಿ ಬಂದ್ ಮಾಡಿಸಿದ್ದೀರಿ. ಸತ್ಯ ಮುಚ್ಚಿ ಹಾಕಲು ಚಾನೆಲ್ ಬಂದ್ ಮಾಡಿಸಿದ್ದೀರಾ. ಆದರೆ ರಾಜ್ಯದ ಜನತೆ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದು ಕಿಡಿ ಕಾರಿದ ಅವರು ,ರಾಜ್ಯದ ಜನತೆ ಚಾನೆಲ್ ಬಂದ್ ಗೆ ಪ್ರಶ್ನಿಸುತ್ತಾರೆ. ರಾಜ್ಯದಲ್ಲಿ ಜಿಎಸ್ಡಿ, ವಿಎಸ್ಟಿ ಅನ್ನೋ ಎರಡು ತೆರಿಗೆ ವಿಧಾನವಿದೆ ಎಂದು ಪ್ರಸ್ತಾಪಿಸಿದ ಅವರು VST ಅಂದ್ರೆ ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್ ಎಂದು ಟೀಕಿಸಿದರು.

 ಪ್ರತಿ ಕಾಮಗಾರಿಗೂ ವಿಜಯೇಂದ್ರ ಕಮೀಷನ್ ಪಡೆಯುತ್ತಿದ್ದಾರೆ. ಗುತ್ತಿಗೆದಾರರು ಅವರಿಗೆ ಕಮೀಷನ್ ಕೊಡಲೇಬೇಕಿದೆ ಎಂದು ಗಂಭೀರ ಆರೋಪ ಮಾಡಿದರು. ಇಂತಹ ಸರಕಾರವನ್ನ ನಾವು ಸಹಿಸಲಾರೆವು.
ಬಂಗಾರು ಲಕ್ಷ್ಮಣರನ್ನ ಭ್ರಷ್ಟಾಚಾರ ಆರೋಪ ಬಂದಾಗ ರಾಜೀನಾಮೆ ಪಡೆಯಲಾಯಿತು.

ಎಲ್ ಕೆ  ಅಡ್ವಾಣಿ  ಮೇಲೆ ಹವಾಲಾ ಆರೋಪ ಬಂದಾಗಲೂ ರಾಜೀನಾಮೆ ಪಡೆಯಲಾಗಿದೆ. ಆದರೆ BSY ಪುತ್ರ ವಿಚಾರದಲ್ಲಿ ಬಿಜೆಪಿಯ ನಿಲುವೇನು? ಎಂದು ಪ್ರಶ್ನಿಸಿದ ಐವಾನ್,  ಈ ಪ್ರಕರಣವನ್ನ ರಾಜ್ಯದ ಮೂಲೆ ಮೂಲೆಗೂ ಕಾಂಗ್ರೆಸ್ ತಲುಪಿಸಲಿದೆ. ಇದು ಸಂವಿಧಾನ ವಿರೋಧಿ ಸರಕಾರ. ತಕ್ಷಣವೇ ರಾಜ್ಯಪಾಲರು ಮಧ್ಯಪ್ರವೇಶಿಸಿ ಸಿಎಂ ಅವರ ರಾಜೀನಾಮೆ ಪಡೆಯಬೇಕು ಎಂದು 
ಸುದ್ದಿಗೋಷ್ಟಿಯಲ್ಲಿ  ಐವನ್ ಡಿಸೋಜಾ ಹೇಳಿದರು.

Read These Next

ಕಾರವಾರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ. ಬಿಜೆಪಿಗೆ ಜೆಡಿಎಸ್ ಬೆಂಬಲ ಘೋಷಣೆ : ಆನಂದ ಅಸ್ನೋಟಿಕರ್.

ಕಾರವಾರ : ನವೆಂಬರ್ ಒಂದರಂದು ಕಾರವಾರ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ. ಜೆ.ಡಿ.ಎಸ್.ನ ನಾಲ್ಕು ಮತ್ತು ...

ಎನ್ ಡಿಆರ್ ಎಫ್ ತಂಡದಿಂದ ಅಣಕು ಪ್ರದರ್ಶನ. ಸಾರ್ವಜನಿಕರಲ್ಲಿ ರಕ್ಷಣಾ ಕಾರ್ಯದ ರೀತಿ ಮತ್ತು ಮಹತ್ವದ ಅರಿವು ಮೂಡಬೇಕು: ಜಿಲ್ಲಾಧಿಕಾರಿ ನಿತೇಶ ಪಾಟೀಲ

ಧಾರವಾಡ : ಆಕಸ್ಮಿಕವಾಗಿ ಸಂಭವಿಸುವ ಘಟನೆಗಳಲ್ಲಿ ನೆರೆಹೊರೆಯವರು ಸೇರಿದಂತೆ ಸಾರ್ವಜನಿಕರು ತತಕ್ಷಣ ಸ್ಪಂಧಿಸುವುದರಿಂದ ಮತ್ತು ...

ಮತ ಚಲಾಯಿಸಿದ ಕೋವಿಡ್ ಸೋಂಕಿತರು

ಧಾರವಾಡ : ಬುಧವಾರ ನಡೆದ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಕೊನೆಯ ಒಂದು ತಾಸು ಮತದಾನ ಅವಧಿಯನ್ನು ಕೋವಿಡ್ ಸೋಂಕಿತರು ತಮ್ಮ ಹಕ್ಕು ...