ಜೀವನದ ನಿಜವಾದ ಸುಖ ಇರುವುದು ತ್ಯಾಗದ ತುತ್ತತುದಿಯಲ್ಲಿ:ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

Source: so news | By MV Bhatkal | Published on 4th March 2021, 11:47 PM | Coastal News | Don't Miss |

ಭಟ್ಕಳ:ಜನರು ಇಂದು ಬಾಹ್ಯವಾದ ಪಂಚೇಂದ್ರಿಯ ಸುಖಕ್ಕೆ ಬಲಿಯಾಗಿ ತಮ್ಮತನವನ್ನು ಕಳೆದುಕೊಳ್ಳುತ್ತಿದ್ದಾರೆ. ಜೀವನ ನಿಜವಾದ ಸುಖ ಇರುವುದು ತ್ಯಾಗದ ತುತ್ತತುದಿಯಲ್ಲಿ. ಕರ್ಮಬಂಧನದಿಂದ ಕರ್ಮಯೋಗಕ್ಕೆ ಹೋದಾಗ ಮಾತ್ರ ನಿಜವಾದ ಸುಖದ ಅನುಭವ ಆಗುತ್ತದೆ ಎಂದು ಉಜಿರೆಯ ಶೀರಾಮ ಕ್ಷೇತ್ರ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಅವರು ಗುರುವಾರ ತಾಲೂಕಿನ ಕರಿಕಲನಲ್ಲಿರುವ ಉಜಿರೆಯ ಶ್ರೀರಾಮ ಕ್ಷೇತ್ರದ ಶಾಖಾ ಮಠದ ವಧ್ರ್ಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದರು. ಶ್ರೀ ಮಠ ಹಿಂದುಳಿದ ವರ್ಗಗಳ ಬಲ ತುಂಬುವ ಕೆಲಸ ಮಾಡುತ್ತಿದ್ದೆ. ಹಿಂದುಳಿದ ವರ್ಗಗಳ ಜನರು ಎಲ್ಲಾ ಕ್ಷೇತ್ರದಲ್ಲಿ ಮುಂದುವರೆದಿದ್ದಾರೆ. ಆದರೆ ಸಂಸ್ಕಾರದಲ್ಲಿ ಹಿಂದುಳಿದಿದ್ದಾರೆ. ಸಂಸ್ಕಾರ ಜೀವನದಲ್ಲಿ ಅಳವಡಿಸಿಕೊಂಡರೆ ಯಾರಿಗೂ ಭಯಪಡುವ ಅಗತ್ಯವಿಲ್ಲ ಎಂದರು. ಇಂದಿನ ಸಮಾಜ ಮೌಲ್ಯಾಧರಿತ, ಆಧ್ಯಾತ್ಮಿಕ ಹಾಗೂ ಸಂಸ್ಕಾರಯುತ ಶಿಕ್ಷಣದ ಕೊರತೆಯಿಂದ ಹಳಿ ತಪ್ಪುತ್ತಿದೆ. ಮನುಷ್ಯ ತನ್ನ ಜೀವನದಲ್ಲಿ ಗುರುತಿಸಿಕೊಳ್ಳಬೇಕಾದರೆ ಎಲ್ಲರನ್ನು ಪ್ರೀತಿಸುವ ಸಾತ್ವಿಕ ಗುಣ ಹೊಂದಿರಬೇಕು. ಪಂಚೇಂದ್ರಿಯಗಳ ಸುಖಕ್ಕಾಗಿ ಮನುಷ್ಯ ಪಾಪದ ಕೂಪದಲ್ಲಿ ಬಿದ್ದು ಭಗವಧಾನಂದ ಸುಖವನ್ನು ಮರೆತಿದ್ದಾನೆ. ಸಮರ್ಪಣಾ ಬಾವ,  ಸಂಸ್ಕಾರಯುತ ಜೀವನದಿಂದ ಭಗವದಾನಂದ ಸುಖ ಪಡೆಯಲು ಸಾಧ್ಯವಾಗುತ್ತದೆ ಎಂದರು. ಮಾಜಿ ಶಾಸಕರಾದ ಮಂಕಾಳ ವೈದ್ಯ, ಜೆ.ಡಿ.ನಾಯ್ಕ, ಶ್ರೀರಾಮ ಕ್ಷೇತ್ರದ ಟ್ರಸ್ಟಿಗಳಾದ ಚಿತ್ತರಂಜನ್ ಕಂಕನಾಡಿ, ಎಂ.ಪಿ.ದಿನೇಶ, ಶ್ರೀರಾಮ ಸೇವಾ ಸಮಿತಿಯ ಸದಸ್ಯರಾದ ಎಮ.ಜಿ.ನಾಯ್ಕ, ಶ್ರೀಧರ ನಾಯ್ಕ, ಗೋವಿಂದ ನಾಯ್ಕ, ವಾಮನ ನಾಯ್ಕ, ಡಿ.ಬಿ.ನಾಯ್ಕ, ಕೆ.ಆರ.ನಾಯ್ಕ, ಎಸ್.ಎಂ.ನಾಯ್ಕ, ಗೇರುಸೊಪ್ಪದ ಮಂಜುನಾಥ ನಾಯ್ಕ, ಹೊಗೆವಡ್ಡಿ ಕ್ಷೇತ್ರದ ಅನಂತ ನಾಯ್ಕ, ಶಾರದಹೊಳೆ ನಾಮಧಾರಿ ಸಮಾಜದ ಮೊಕ್ತೆಸರ ಜಟ್ಟ ನಾಯ್ಕ, ಜೆಜೆನಾಯ್ಕ, ಭಟ್ಕಳ ನಾಮಧಾರಿ ಸಮಾಜ ಉಪಾಧ್ಯಕಷ ಭವಾನಿಶಂಕರ ನಾಯ್ಕ, ಕಾರ್ಯದರ್ಶಿ ಮಾಸ್ತಿ ನಾಯ್ಕ ಇತರರು ಇದ್ದರು. 
ವಧ್ರ್ಯಂತ್ಯೊತ್ಸವದ ಅಂಗವಾಗಿ ಶ್ರೀ ರಾಮ ಕ್ಷೇತ್ರದಲ್ಲಿ ಶ್ರಿ ರಾಮ ತಾರಕ ಮಂತ್ರ ಮಹಾಯಜ್ಞ ನಡೆಯಿತು. ಮಹಾಪೂಜೆ ನಂತರ ನಡೆದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಅಧಿಕ ಭಕ್ತರು ಪ್ರಸಾದ ಸ್ವೀಕರಿಸಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...