ತಿತ್ಲಿ ಚಂಡಮಾರುತಕ್ಕೆ ಸಿಲುಕಿ 57 ಮಂದಿ ಸಾವು, 10ಕ್ಕೂ ಹೆಚ್ಚು ಜನ ನಾಪತ್ತೆ

Source: S.O. News Service | By Manju Naik | Published on 19th October 2018, 3:37 PM | National News |

ಭುವನೇಶ್ವರ:  ತಿತ್ಲಿ ಚಂಡಮಾರುತದಿಂದ ತತ್ತರಿಸಿರುವ ಒಡಿಶಾದಲ್ಲಿ ಚಂಡಮಾರುತದಿಂದಾಗಿ ಸತ್ತವರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಇದುವರೆಗೂ 57 ಮಂದಿ ಮೃತಪಟ್ಟಿದ್ದರೆ, ಭಾರೀ ಮಳೆಯಿಂದಾಗಿ ಪ್ರವಾಹ, ಹಲವೆಡೆ ಭೂಕುಸಿತ, ಗೋಡೆಗಳ ಕುಸಿತದಿಂದಾಗಿ ಹಲವಾರು ಜನ ನಾಪತ್ತೆಯಾಗಿದ್ದಾರೆ.
ಒಡಿಶಾದ 17 ಜಿಲ್ಲೆಗಳಲ್ಲಿ 2,73,425 ಎಕರೆಯಲ್ಲಿದ್ದ ಬೆಳೆ ನಾಶವಾಗಿದ್ದು, ರೂ. 2,765 ನಷ್ಟವಾಗಿದೆ ಎಂದು ಒಡಿಶಾ ಸರ್ಕಾರ ಹೇಳಿಕೊಂಡಿದೆ. 8125 ಗ್ರಾಮಗಳ 60,11,000 ಜನರು ಸಂಕಷ್ಟಕ್ಕೆ ಸಿಲುಕಿದ್ದು, 57,131 ಮನೆಗಳಿಗೆ ಹಾನಿಯಾಗಿದೆ ಎಂದು ವಿಶೇಷ ಪರಿಹಾರ ಆಯೋಗ ತಿಳಿಸಿದೆ.
ರಾಯಗಢ ಜಿಲ್ಲೆಯ ಗಂಜಾಮ್‌, ಗಜಪತಿ ಮತ್ತು ಗುನುಪುರ್‌ ಉಪವಿಭಾಗದ ಎಲ್ಲ ಪ್ರವಾಹ ಪೀಡಿತ ಕುಟುಂಬಗಳಿಗೆ 15 ದಿನಗಳವರೆಗೆ ದಿನಕ್ಕೆ ವಯಸ್ಕರಿಗೆ 60 ರೂ. ಮತ್ತು ಮಕ್ಕಳಿಗೆ 45 ರೂ.ಗಳಂತೆ ಪರಿಹಾರ ನೀಡುವ ಕುರಿತು ಸರ್ಕಾರ ಘೋಷಿಸಿದ್ದು, ಈ ಸಂಬಂಧ ಮುಂಗಡವಾಗಿ 1.02 ಶತಕೋಟಿ ಹಣವನ್ನು ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದೆ. ಇದರಲ್ಲಿ ಗಜಪತಿಗೆ 1100 ಲಕ್ಷ, ಗಂಜಮ್‌ಗೆ 8960 ಲಕ್ಷ ಮತ್ತು ರಾಯಗಢಕ್ಕೆ 140 ಮಿಲಿಯನ್‌ ಹಣವನ್ನು ಬಿಡುಗಡೆ ಮಾಡಿದೆ.
ಇದಲ್ಲದೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಕುಡಿಯುವ ನೀರು, ಆರೋಗ್ಯ ಮತ್ತು ಪಶುವೈದ್ಯಕೀಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಭೀಕರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮೊರೆ ಹೋಗಿರುವ ಒಡಿಶಾ ಸರ್ಕಾರ, ಈಗಾಗಲೇ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, ಮಧ್ಯಂತರ ಪರಿಹಾರವಾಗಿ 1000 ಕೋಟಿ ಹಣವನ್ನು ಪರಿಹಾರ ಮತ್ತು ಪುನಃಸ್ಥಾಪನೆಗಾಗಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಕೋರಿದ್ದಾರೆ

Read These Next

ಬ್ಯಾಂಕುಗಳ ವಿಲೀನ ಉನ್ಮಾದ

ವಾಸ್ತವಗಳು ಬ್ಯಾಂಕುಗಳ ಗಾತ್ರ ಮತ್ತು ದಕ್ಷತೆಯ ನಡುವಿನ ಸಂಬಂಧಗಳ ಒದಗಿಸುವ ತಿಳವಳಿಕೆಗಳಿಗೆ ಪೂರಕವಾಗಿಯೇನೂ ಇಲ್ಲ. ಉದಾಹರಣೆಗೆ ...