ಈದುಲ್ ಫೀತ್ರ್ ಶಾಂತಿಯುತವಾಗಿ ಆಚರಿಸುವಂತೆ ಸಹಾಯಕ ಆಯುಕ್ತ ಕರೆ

Source: sonews | By Staff Correspondent | Published on 23rd May 2020, 5:56 PM | Coastal News | Don't Miss |

ಭಟ್ಕಳ: ಈದುಲ್ ಫಿತ್ರ್ ಹಬ್ಬದ ನಿಮಿತ್ತ ಶನಿವಾರ ಸಂಜೆ ಇಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ಹಿಂದು ಮುಸ್ಲಿಮ್ ಮುಖಂಡರೊಂದಿ ಶಾಂತಿ ಸಭೆ ನಡೆಯಿತು.  

ಅಧ್ಯಕ್ಷತೆ ವಹಿಸಿದ್ದ ಸಹಾಯಕ ಆಯುಕ್ತ ಭರತ್ ಎಸ್. ಅವರು ಮಾತನಾಡಿ ಹಬ್ಬವನ್ನು ಅತ್ಯಂತ ಶಾಂತಿ ಸುವ್ಯವಸ್ಥೆಯಿಂದ ಆಚರಿಸುವಂತೆ ಕರೆ ನೀಡಿದರು.  ಕೋವಿಡ್-19 ಸಂದರ್ಭದಲ್ಲಿ ಇಲಾಖೆಯೊಂದಿಗೆ ಸಹಕರಿಸಿದ ಎಲ್ಲರಿಗೂ ಅವರು ಧನ್ಯವಾದ ಹೇಳಿದರು. 

ಎ.ಎಸ್.ಪಿ. ನಿಖಿಲ್ ಬಿ., ಅವರು ಮಾತನಾಡಿ ಭಟ್ಕಳದಲ್ಲಿ ಭಟ್ಕಳದಲ್ಲಿ ಸದಾ ಶಾಂತಿ ಇದೆ.  ಎಲ್ಲರೂ ಕೂಡಾ ಹಬ್ಬದಂದು ಶಾಂತಿಯಿಂದ ಆಚರಿಸಬೇಕು. ಈ ಬಾರಿ ಕೋವಿಡ್-19 ಇರುವುದರಿಂದ ತಮ್ಮ ತಮ್ಮ ಮನೆಗಳಲ್ಲಿಯೇ ಹಬ್ಬವನ್ನು ಆಚರಿಸಿಕೊಳ್ಳುವಂತೆ ಕೋರಿದರು. 

ಸಭೆಯಲ್ಲಿ ಮಾತನಾಡಿದ ತಂಜೀಂ ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಹಬ್ಬದ ದಿನದಂದು ಪ್ರತಿಯೋರ್ವರೂ ಕೂಡಾ ಹಂಚಿ ತಿನ್ನುವುದು ನಮ್ಮ ಪದ್ಧತಿಯಾಗಿತ್ತು. ಆದರೆ ಈ ಬಾರಿ ಲಾಕ್‍ಡೌನ್ ಇರುವುದರಿಂದ ಕನಿಷ್ಟ ಅಕ್ಕಪಕ್ಕದ ಮನೆಗೆ ಹಂಚಿ ತಿನ್ನಲಿಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದರು. 

ಶಾಂತಾರಾಮ ಭಟ್ಕಳ ಮಾತನಾಡಿ ಕೋವಿಡ್-19 ಆರಂಭದಿಂದಲೂ ಸರಕಾರದ ಬುಲೆಟಿನ್‍ನಲ್ಲಿ ಭಟ್ಕಳ ಎಂದು ಬರುತ್ತಿತ್ತು. ಆದರೆ ಇತ್ತೀಚೆಗೆ ಉತ್ತರ ಕನ್ನಡದ ಎಲ್ಲಾ ತಾಲೂಕುಗಳಲ್ಲಿ ಕೋವಿಡ್-19 ಪ್ರಕರಣ ಪತ್ತೆಯಾಗಲು ಆರಂಭವಾದ ನಂತರ ಉತ್ತರ ಕನ್ನಡ ಎಂತಾ ಬರುತ್ತಿದೆ.  ಹಿಂದೆ ಕೇವಲ ಭಟ್ಕಳದ ಹೆಸರು ಮತ್ತಷ್ಟು ಪ್ರಚಾರಕ್ಕೆ ಬರಲಿ ಎಂದು ಭಟ್ಕಳ ಎಂತಾ ಹಾಕಲಾಗುತ್ತಿತ್ತೆ. ಈಗಲೂ ಆಯಾಯ ತಾಲೂಕಿನ ಹೆಸರು ಹಾಕಬೇಕು ಎಂದು ಆಗ್ರಹಿಸಿದರು. ಅಲ್ಲದೇ ಎರಡು ತಿಂಗಳಿನಿಂದ ಲಾಕ್‍ಡೌನ್ ಎಂತಾ ಎಲ್ಲರೂ ಮನೆಯಲ್ಲಿಯೇ ಕುಳಿತು ತೀವ್ರ ತೊಂದರೆಯಾಗಿದೆ. ಕನಿಷ್ಟ ಕಂಟೈನ್‍ಮೆಂಟ್ ಝೋನ್ ಬಿಟ್ಟು ಉಳಿದೆಡೆಯಲ್ಲಿ ಅಂಗಡಿಗಳನ್ನು ಬಾಗಿಲು ತೆಗೆಯಲು, ಜನರ ಓಡಾಟಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು. 

ಅಟೋ ರಿಕ್ಷಾ ಚಾಲಕರ ಸಂಘದ ಮಾಜಿ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ ಈ ಬಾರಿಯ ಹಬ್ಬವನ್ನು ಮನೆಯಲ್ಲಿಯೇ ಆಚರಿಸಬೇಕಾಗಿ ಬಂದಿದ್ದರಿಂದ ನಮಗೆಲ್ಲರಿಗೂ ತುಂಬಾ ಬೇಸರವಿದೆ. ಆದರೆ ಪರಿಸ್ಥಿತಿ ಎಲ್ಲರಿಗೂ ಒಂದೇ ಆಗಿದ್ದು ಮುಂದಿನ ದಿನಗಳಲ್ಲಿ ಹಬ್ಬಗಳನ್ನು ಅತ್ಯಂತ ಉತ್ತಮವಾಗಿ ಆಚರಿಸುವ ಎಂದು ಕರೆ ನೀಡಿದರು. 

ತಂಜೀಂ ಅಧ್ಯಕ್ಷ ಎಸ್. ಎಂ. ಪರ್ವೇಜ್, ನಾಮಧಾರಿ ಸಂಘದ ಅಧ್ಯಕ್ಷ ಎಂ. ಆರ್. ನಾಯ್ಕ, ತಂಝೀಂ ಪ್ರಧಾನ ಕಾರ್ಯದರ್ಶಿ ಅಬ್ದುರ್ ರಕೀಬ್, ಪುರಸಭಾ ಮಾಜಿ ಅಧ್ಯಕ್ಷ ಪರ್ವೆಜ್ ಕಾಶಿಮಜಿ, ಶ್ರೀಧರ ನಾಯ್ಕ ಆಸರಕೇರಿ, ಸುರೇಂದ್ರ ಭಟ್ಕಳ ಮುಂತಾದವರು ಉಪಸ್ಥಿತರಿದ್ದರು


ತಂಝೀಮ್ ಗೈರಾದ ಹಿನ್ನೆಲೆ ಮುಂದೂಡಲ್ಪಟ್ಟ ಸಭೆ: ಶನಿವಾರ ಬೆಳಗ್ಗೆ ನಡೆಯಬೇಕಾಗಿದ್ದ ಶಾಂತಿ ಸಭೆ ಸಂಜೆ 6ಗಂಟೆಗೆ ನಡೆದಿದ್ದು ಇದಕ್ಕೆ ತಂಝೀಮ್ ಸಂಸ್ಥೆಯ ಮುಖಂಡರು ಗೈರಾದುದು ಕಾರಣ ಎನ್ನಲಾಗಿದೆ. ಈ ಕುರಿತಂತೆ ಸಂಸ್ಥೆಯ ಪದಾಧಿಕಾರಿಯೊಬ್ಬರು ಮಾಧ್ಯಮದವರೊಂದಿಗೆ ಮಾತನಾಡಿದ್ದು ನಾವು ಇಲಾಖೆಯೊಂದಿಗೆ ಯಾವತ್ತು ಸಹಕರಿಸುತ್ತ ಬಂದಿದ್ದೇವೆ. ಈ ಕೋರೊನಾ ಸಂಕಷ್ಟದ ಸಮಯದಲ್ಲೋ ಅತಿ ಹೆಚ್ಚು ಸಹಕಾರ ನೀಡುತ್ತಿರುವುದು ಮತ್ತು ಎಲ್ಲ ರೀತಿಯ ವ್ಯವಸ್ತೆಯನ್ನು ಮಾಡುತ್ತಿರುವುದು ತಂಝೀಮ್ ಸಂಸ್ಥೆಯೇ ಅಗಿದೆ. ಇದರ ಪದಾಧಿಕಾರಿಗಳು ಹಗಲಿರುಳು ಕೊರೋನಾ ನಿಯಂತ್ರಣಕ್ಕಾಗಿ ದುಡಿಯುತ್ತಿದ್ದಾರೆ ಅವರೊಂದಿಗೆ ಬೆರೆಯುತ್ತಿದ್ದಾರೆ. 

ಈ ನಿಟ್ಟಿನಲ್ಲಿ ಕೆಲ ಪದಾಧಿಕಾರಿಗಳು ಸ್ವಯಂ ಪ್ರೇರಿತರಾಗಿ ಜನರಲ್ಲಿ ಕೊರೋನಾ ಭಯ ದೂರ ಮಾಡಲಿಕ್ಕಾಗಿ ಗಂಟಲು ದ್ರವ ಪರೀಕ್ಷೆಗೆ ಒಳಗಾಗಿದ್ದರು. ಇದನ್ನೇ ಮುಂದಿಟ್ಟುಕೊಂಡು ಇಲಾಖೆಯವರು ನಮ್ಮನ್ನು ಶಾಂತಿ ಸಭೆಯಿಂದ ದೂರ ಉಳಿಯುವಂತೆ ಸೂಚಿಸಿದ ಹಿನ್ನೆಯಲ್ಲಿ ಬೆಳಗಿನ ಶಾಂತಿ ಸಭೆಗೆ ಇಡೀ ತಂಝಿಮ್ ಗೈರಾಗಿ ಬೈಕಾಟ್ ಮಾಡಿತ್ತು ನಂತರ ಮಾತುಕತೆಗಳ ಮೂಲಕ ವಿವಾದ ಬಗೆ ಹರಿದಿದ್ದು ಸಂಜೆಯ ಸಭೆಗೆ ಹಾಜರಾಗಿದ್ದೇವೆ ಎಂದು ತಿಳಿಸಿದ್ದಾರೆ.  

ಭಟ್ಕಳದಲ್ಲಿ ಕೊರೊನಾ ಸೋಂಕು ಪತ್ತೆಯಾದಾಗಿನಿಂದ ತಂಝೀಂ ಸಂಸ್ಥೆ ಜಿಲ್ಲಾಡಳಿತ, ತಾಲೂಕಾ ಆಡಳಿತ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಇದ್ದು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಲ್ಲದೇ ಸೋಂಕಿತರನ್ನು ಮನೆಯಿಂದ ಕರೆತರುವುದಕ್ಕೆ, ಅವರನ್ನು ನಿಗದಿತ ಆಸ್ಪತ್ರೆಗೆ ಕಳುಹಿಸುವುದಕ್ಕೆ ಎಲ್ಲಾ ರೀತಿಯ ಸಹಕಾರ ನೀಡಿತ್ತು. ಅನೇಕ ಸಂಶಯಿತರನ್ನು ಕ್ವಾರಂಟೈನ್ ಮಾಡಲಿಕ್ಕೂ ಕೂಡಾ ಇಲ್ಲಿನ ಅಂಜುಮಾನ್ ಕಾಲೇಜಿನ ಹಾಸ್ಟೇಲಿನಲ್ಲಿ ವ್ಯವಸ್ಥೆ ಮಾಡಲಾಗಿದ್ದು ಅಲ್ಲಿಯೂ ಕೂಡಾ ಎಲ್ಲಾ ರೀತಿಯ ಸಹಕಾರ ನೀಡಿರುವುದು ಎಲ್ಲರಿಗೂ ಕೂಡಾ ತಿಳಿದ ವಿಷಯ. ಅದೇ ರೀತಿಯಾಗಿ ತಾಲೂಕಾಡಳಿತದೊಂದಿಗೆ ನಾಗರೀಕರ ಸಂಪರ್ಕ ಸಾಧಿಸಲೂ ಸಹ ಸಹಕರಿಸಿತ್ತು. 

ಪತ್ರಕರ್ತರು ಹೊರಕ್ಕೆ: ಭಟ್ಕಳದಲ್ಲಿ ಯಾವತ್ತೂ ಶಾಂತಿ ಸಮಿತಿ ಸಭೆಯಲ್ಲಿ ಪತ್ರಕರ್ತರನ್ನು ಕರೆಯದಿರುವುದೇ ಇಲ್ಲ. ಪ್ರತಿ ಬಾರಿಯೂ ಪೊಲೀಸ್ ಇಲಾಖೆಯ ಶಾಂತಿ ಸಮಿತಿ ಸಭೆಯನ್ನು ವ್ಯವಸ್ಥೆಗೊಳಿಸುವುದಾದ್ದರಿಂದ ಪತ್ರಕರ್ತರಿಗೆ ಮೊದಲೇ ತಿಳಿಸಲಾಗುತ್ತಿತ್ತು. ಆದರೆ ಇಂದು ಸಭೆಗೆ ಕೆಲವರು ಬಹಿಷ್ಕಾರ ಹಾಕುವ ಸುಳಿವು ಸಿಕ್ಕಿದ್ದರಿಂದಲೇ ಪತ್ರಕರ್ತರನ್ನು ಹೊರಗಿಡಲಾಯಿತೇ ಎನ್ನುವ ಪ್ರಶ್ನೆಗೆ ಸಂಬಂಧ ಪಟ್ಟವರು ಉತ್ತರಿಸಬೇಕಾಗಿದೆ. ಕಳೆದ 1993ರಲ್ಲಿ ನಡೆದ ಸುಧೀರ್ಘ ಗಲಭೆಯ ಸಮಯದಲ್ಲಿ ಕೂಡಾ ಪೊಲೀಸರು ಶಾಂತಿ ಸಮಿತಿ ಸಭೆಗೆ ಪತ್ರಕರ್ತರನ್ನು ತಮ್ಮ ಇಲಾಖಾ ಜೀಪಿನಲ್ಲಿ ಕರೆ ತರುತ್ತಿದ್ದ ಉದಾಹರಣೆ ಇರುವಾಗ ಇಂದಿನ ಸಭೆಗೆ ಪತ್ರಕರ್ತರನ್ನು ದೂರ ಇಟ್ಟಿರುವುದರ ಮರ್ಮ ಏನು ಎನ್ನುವುದು ತಿಳಿಬೇಕಾಗಿದೆ. 


 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...