ಕೋವಿಡ್ ಲಸಿಕೆಗೆ ನೆರವು. ಖಾಸಗಿ ಸಹಭಾಗಿತ್ವಕ್ಕೆ ಜಿಲ್ಲಾಧಿಕಾರಿ ಎಸ್.ಅಶ್ವತಿ ಕರೆ

Source: SO News | By Laxmi Tanaya | Published on 3rd August 2021, 10:42 PM | State News | Don't Miss |

ಮಂಡ್ಯ - ಮೊದಲನೇ ಹಾಗೂ ಎರಡನೇ ಕೋವಿಡ್ ಅಲೆಯಲ್ಲಿ ಖಾಸಗಿ ಸಂಘ ಸಂಸ್ಥೆಗಳು ಜಿಲ್ಲೆಯ ನೆರವಿಗೆ ಸ್ಪಂದಿಸಿದ್ದು, ಮುಂಬರುವ ಮೂರನೇ ಅಲೆಯನ್ನು ಎದುರಿಸಲು ಲಸಿಕೆ ಅವಶ್ಯಕವಿದ್ದು ಈ ಲಸಿಕಾಕರಣಕ್ಕೆ ಖಾಸಗಿಯವರು ಕೈಜೋಡಿಸಿ ಎಂದು ಜಿಲ್ಲಾಧಿಕಾರಿ ಎಸ್ ಅಶ್ವತಿ ಕರೆ ನೀಡಿದರು.

ಮಂಗಳವಾರ ನಗರದ ಕಲಾಮಂದಿರದಲ್ಲಿ ಲಸಿಕಾಕರಣದ ನೆರವಿಗೆ ಸಂಬಂಧಿಸಿದಂತೆ ಖಾಸಗಿ ಸಂಘ ಸಂಸ್ಥೆಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಎರಡು ವರ್ಷಗಳಿಂದ ಲಾಕ್‍ಡೌನ್‍ನಿಂದಾಗಿ ಖಾಸಗಿ ಕಂಪನಿಗಳಿಗೂ ನಷ್ಟವಾಗಿದ್ದರೂ ಕೋವಿಡ್ ಮೊದಲನೇ ಅಲೆ ಹಾಗೂ ಎರಡನೆ ಅಲೆಗಳನ್ನು ಎದುರಿಸಲು ಈ ಎರಡು ವರ್ಷಗಳಲ್ಲಿ ಪೆಟ್ರೋಲ್ ಬಂಕ್ ಅಸೋಸಿಯೇಷನ್, ರೆಡ್‍ಕ್ರಾಸ್, ಮದ್ಯಮಾರಾಟಗಾರರ ಅಸೋಸಿಯೇಷನ್, ಸಕ್ಕರೆ ಕಾರ್ಖಾನೆ ಹಾಗೂ ಇತರೆ ಸಂಘಸಂಸ್ಥೆಗಳು ತುಂಬಾ ಸಹಕಾರ ನೀಡುತ್ತಿದ್ದು, ಜಿಲ್ಲೆಯ 5 ತಾಲ್ಲೂಕುಗಳಲ್ಲಿ ಆಕ್ಸಿಜನ್ ಜನರೇಟರ್ ಪ್ಲಾಂಟ್ಸ್ ಗಳನ್ನು ಜಿಲ್ಲೆಯ ಸಿಎಸ್‍ಆರ್ ಚಟುವಟಿಕೆಗಳಡಿಯಲ್ಲಿ ಕೈಗಾರಿಕೋದ್ಯಮಿಗಳ ಸಹಾಯದೊಂದಿಗೆ ಯೋಜಿಸಲಾಗಿದೆ ಎಂದರು.

ಕಳೆದ ಒಂದು ವಾರಗಳಿಂದ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದೆ. ಮೂರನೆ ಅಲೆಯು ಈ ತಿಂಗಳಿನಲ್ಲಿ ಬರಬಹುದೆಂಬ ವರದಿಯಿದೆ ಹಾಗಾಗಿ ನಾವು ನಮ್ಮ ಜಿಲ್ಲಾ ಹಂತದಲ್ಲಿ ಜಿಲ್ಲೆಯನ್ನು ರಕ್ಷಿಸುವಲ್ಲಿ ಸತತ ಪ್ರಯತ್ನ ಮಾಡುತ್ತಿದ್ದು ಲಸಿಕೆ ಅದರ ಒಂದು ಭಾಗವಾಗಿದೆ ಎಂದರು.

ನಮ್ಮಲ್ಲಿ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ನಮಗೆ ಲಭ್ಯವಾಗುತ್ತಿರುವ ಲಸಿಕೆಯನ್ನು ಶೇ.100 ರಷ್ಟು ಸಂಪೂರ್ಣವಾಗಿ ನೀಡಿದ್ದೇವೆ. ಜಿಲ್ಲೆಯಲ್ಲಿ 18 ಲಕ್ಷ ಜನಸಂಖ್ಯೆಯಿದ್ದು 8.5ಲಕ್ಷ ಜನಸಂಖ್ಯೆಗೆ ಮಾತ್ರ ಲಸಿಕೆ ನೀಡಲಾಗಿದ್ದು ದಿನಕ್ಕೆ 3000-4000 ಲಸಿಕೆ ನೀಡುತ್ತಿದ್ದರೆ ಮೂರನೆ ಅಲೆ ಆರಂಭವಾಗುತ್ತದೆ. ಹಾಗಾಗಿ ದಿನದಲ್ಲಿ ನೀಡುತ್ತಿರುವ ಲಸಿಕೆಯನ್ನು ಹೆಚ್ಚಿಸುವುದು ಅಗತ್ಯವಿದೆ ಎಂದರು.

ಈ ಹಿನ್ನೆಲೆಯಲ್ಲಿ ಖಾಸಗಿ ಸಂಸ್ಥೆಗಳ ಸಹಕಾರಕ್ಕಾಗಿ ಕರೆ ನೀಡುತ್ತಿದ್ದೇವೆ. 18-45 ವರ್ಷದವರಿಗೆ ಸರ್ಕಾರದಿಂದ ದೊರೆಯುತ್ತಿರುವ ಲಸಿಕೆಯನ್ನು ನೀಡುತ್ತಿದ್ದು, ಖಾಸಗಿ ಸಂಸ್ಥೆಗಳ ಸಹಕಾರದೊಂದಿಗೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಬಹುದು ಎಂದರು.
 ನಿಮಗೆ ಸಹಕಾರವಾಗುವ ಹಂತದಲ್ಲಿ ಸಾರ್ವಜನಿಕರಿಗೆ ಲಸಿಕೆ ನೀಡಬಹುದಾಗಿದ್ದು ನಿಮ್ಮ ಸಂಸ್ಥೆಗಳಲ್ಲಿ ಚರ್ಚೆ ಮಾಡಿ ಜಿಲ್ಲಾಡಳಿತಕ್ಕೆ ತಿಳಿಸಿ ಹಾಗೂ ನಿಮ್ಮಿಂದ ಒಳ್ಳೆ ಸ್ಪಂದನೆ ಬರುವುದೆಂದು ನಿರೀಕ್ಷಿಸಿದ್ದೇವೆ ಎಂದರು.  

ಸಭೆಯಲ್ಲಿ ಜಿ.ಪಂ ಸಿಇಒ ದಿವ್ಯಪ್ರಭು, ಅಪರ ಜಿಲ್ಲಾಧಿಕಾರಿ ವಿ.ಆರ್ ಶೈಲಜಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಧನಂಜಯ, ರೆಡ್ ಕ್ರಾಸ್ ಸಂಸ್ಥೆಯ ಮುಖ್ಯಸ್ಥೆ ಮೀರಾ ಶಿವಲಿಂಗಯ್ಯ, ಛೇಂಬರ್ ಆಫ್ ಕಾಮರ್ಸ್ ನ ಪ್ರಭಾಕರ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು,ಖಾಸಗಿ ಕಂಪನಿಗಳ ಮಾಲೀಕರು ಉಪಸ್ಥಿತರಿದ್ದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...