ವಿಧಾನಸಭಾ ಚುನಾವಣೆ : ಮುಕ್ತ ಹಾಗೂ ನಿಷ್ಪಕ್ಷಪಾತ ಚುನಾವಣೆಗೆ ಕ್ರಮ.

Source: SO News | By Laxmi Tanaya | Published on 29th March 2023, 10:43 PM | Coastal News |

ಕಾರವಾರ :  ರಾಜ್ಯದಲ್ಲಿ ನಡೆಯುವ ವಿಧಾನಸಭೆ ಚುನಾವಣೆಯನ್ನು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲು ಜಿಲ್ಲಾಡಳಿತ ಮುಂದಾಗಿದೆ.

ಚುನಾವಣೆಗೋಸ್ಕರ ಮದ್ಯಗಳ ತಯಾರಿಕೆ, ಸಂಗ್ರಹಣೆ, ಮತ್ತು ಹಂಚಿಕೆಯನ್ನು ತಡೆಗಟ್ಟಲು ಹಾಗೂ ಚುನಾವಣೆ ನಡೆಯಲಿರುವ ಸಂದರ್ಭದಲ್ಲಿ ಹಾಗೂ ಮತ ಎಣಿಕೆ ನಡೆಯಲಿರುವ ಸಂದರ್ಭಗಳಲ್ಲಿ ಅಬಕಾರಿ ಅಕ್ರಮಗಳನ್ನು ಯಶಸ್ವಿಯಾಗಿ ತಡೆಗಟ್ಟಲು ಅಧಿಕಾರಿಗಳು ಮುಂದಾಗಿದ್ದಾರೆ.

 ಚುನಾವಣಾ ಸಂದರ್ಭದಲ್ಲಿ ಅನಧಿಕೃತವಾಗಿ ಗೋವಾ ರಾಜ್ಯದ ಮದ್ಯವನ್ನ ಕಳ್ಳಭಟ್ಟಿ ಸರಾಯಿ, ನಕಲಿ ಸಾರಾಯಿ ಮುಂತಾದುವುಗಳನ್ನು ದಾಸ್ತಾನು ಮಾಡಿ ವಿತರಿಸುವುದರ ಮೇಲೆ ಕಣ್ಣಿಡಲಾಗಿದೆ. ಅಕ್ರಮಗಳನ್ನು ತಡೆಗಟ್ಟಲು, ಕಟ್ಟುನಿಟ್ಟಿನ ಕರ್ತವ್ಯ ನಿರ್ವಹಿಸಿ, ಕಾನೂನು ಕ್ರಮ ಜರುಗಿಸಲು ಮತ್ತು ನಿಷ್ಪಕ್ಷಪಾತವಾಗಿ ಚುನಾವಣೆಯು ನಡೆಯುವಂತೆ ನೋಡಿಕೊಳ್ಳಲು ಹಾಗೂ ಯಾವುದೇ ಅಕ್ರಮ ಚಟುವಟಿಕೆಗಳಿಗೆ ಅವಕಾಶವಾಗದಂತೆ ನೋಡಿಕೊಳ್ಳಲು ಮತ್ತು ಚುನಾವಣೆ ಹಾಗೂ ಮತ ಎಣಿಕೆ ಸಂದರ್ಭದಲ್ಲಿ ಜಿಲ್ಲಾ ದಂಡಾಧಿಕಾರಿಗಳು ಮದ್ಯ ಮಾರಾಟ ನಿಷೇಧಿಸಿ ಹೊರಡಿಸುವ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಿಲ್ಲೆಯಾದ್ಯಂತ ತಾಲೂಕು ತಂಡ ಹಾಗೂ ಜಿಲ್ಲಾ ತಂಡಗಳನ್ನು ರಚಿಸಿ ದಿನದ 24 ಗಂಟೆಯು ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಜಿಲ್ಲಾ ತಂಡದಲ್ಲಿ ಅಬಕಾರಿ ಉಪ ಆಯುಕ್ತರ ಕಚೇರಿಯಿಂದ ಬಸವರಾಜ ಕರವಿನಕೊಪ್ಪ - 9449597117, 9353477936, ಕಾರವಾರ ತಾಲೂಕು ವಲಯದಿಂದ ದಯಾನಂದ - 9448954958, ಅಂಕೋಲಾ ತಾಲೂಕು ವಲಯದಿಂದ ರಾಹುಲ ನಾಯಕ - 08388-230440, ಕುಮಟಾ ತಾಲೂಕು ವಲಯದಿಂದ ಶ್ರೀಮತಿ - 9901320012, ಹೊನ್ನಾವರ ತಾಲೂಕು ವಲಯದಿಂದ ದಾಮೋದರ ಎನ್ ನಾಯ್ಕ- 9449955896, ಭಟ್ಕಳ್ ತಾಲೂಕು ವಲಯದಿಂದ ವಿಶ್ವನಾಥ್ ಭಟ್ - 9482297747, ಶಿರಸಿ ತಾಲೂಕು ವಲಯದಿಂದ ಜ್ಯೋತಿಶ್ರೀ - 9902745874, 9449597122, ತಹಸೀಲ್ದಾರ ಕಛೇರಿ ಸಿದ್ದಾಪುರದಿಂದ ಮಹೇಂದ್ರ ಎಸ್. ನಾಯ್ಕ-9448804737, ಯಲ್ಲಾಪುರ ತಾಲೂಕು ವಲಯದಿಂದ ಪ್ರಶಾಂತ್ ಪಾಟೀಲ- 9483909353, ತಹಶೀಲ್ದಾರ ಕಛೇರಿ, ಮುಂಡಗೋಡದಿಂದ ಅನಿಲ ಕೊಕಟಾನೂರು -7483393400, ದಾಂಡೇಲಿ ತಾಲೂಕು ವಲಯದಿಂದ ಗಣೇಶ್ ಎಸ್. ನಾಯ್ಕ- 9742837336, ತಹಸೀಲ್ದಾರ ಕಛೇರಿ ಜೋಯಿಡದಿಂದ ಟಿ. ಬಿ. ಮಲ್ಲಣ್ಣನವರ  ಇವರನ್ನು ತಂಡದ ಮುಖ್ಯಸ್ಥರಾಗಿ ಆಯ್ಕೆ ಮಾಡಲಾಗಿದೆ.

ಸಾರ್ವಜನಿಕರಿಗೆ ಯಾವುದೇ ರೀತಿಯ ಅನಧಿಕೃತ ಮದ್ಯದ ದಾಸ್ತಾನು, ಸಾಗಾಟ, ಮಾರಾಟ ಅಥವಾ ತಯಾರಿಕೆಗೆ ಸಂಬಂಧಿಸಿದ ವ್ಯವಹಾರಗಳು, ಕಂಡುಬಂದಲ್ಲಿ ಕೂಡಲೇ ಮೇಲಿನ ಅಧಿಕಾರಿಗಳಿಗೆ  ಮಾಹಿತಿಯನ್ನು ನೀಡುವಂತೆ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೆಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಎರಡು ವರ್ಷಗಳಿಂದ ಮೃತ ಮೀನುಗಾರ ಕುಟುಂಬಕ್ಕೆ ಪರಿಹಾರವಿಲ್ಲ. ಅಧಿಕಾರಿಗಳ ಉತ್ತರಕ್ಕೆ ಸಚಿವ ಮಂಕಾಳ ವೈದ್ಯ ಅಸಮಧಾನ.

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ವರ್ಷದಲ್ಲಿ ಮೃತಪಟ್ಟಿರುವ 40 ಮೀನುಗಾರ ಕುಟುಂಬಕ್ಕೆ ಸಂಕಷ್ಟ ಪರಿಹಾರ ನಿಧಿಯಿಂದ ...

ಪಕ್ಷದ ಕಾರ್ಯಕರ್ತರ ಹಿತಕಾಪಾಡಲು ಕುಮಟಾ ಕ್ಷೇತ್ರದಲ್ಲೇ ವಾಸ್ತವ್ಯ: ನಿವೇದಿತ್ ಆಳ್ವಾ

ಹೊನ್ನಾವರ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಗೆಲುವಿಗಾಗಿ ಹಗಲು-ರಾತ್ರಿ ಪರಿಶ್ರಮಿಸಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಹಿತ ...