ಕಲಾವಿದರ ಬದುಕು ಪ್ರೇಕ್ಷಕರಿಗಾಗಿ ಸೀಮಿತ: ಜೆ.ಸಿ. ಮಾಧುಸ್ವಾಮಿ

Source: S.O. News Service | By MV Bhatkal | Published on 26th January 2020, 8:14 PM | Coastal News | Don't Miss |


ಹಾಸನ:ಕಲಾವಿದರ ಬದುಕು ಸುಗಂಧ ಬೀರುವ ಅಗರಬತ್ತಿಯಂತೆ, ತಾವು ಉರಿದು ಇತರರಿಗೆ ಪರಿಮಳ ಬೀರುತ್ತಾರೆ ಎಂದು ಕಾನೂನು ಮತ್ತು ಸಂಸಧೀಯ ಹಾಗೂ ಸಣ್ಣ ನೀರಾವರಿ ಸಚಿವರು, ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಇಂದು ನಡೆದ ಸಾ.ನಂ.ಚಿತ್ರೋತ್ಸವದಲ್ಲಿ ಮಾತನಾಡಿದ ಅವರು ಚಲನಚಿತ್ರಗಳು ಪ್ರೇಕ್ಷಕರ ಮನಸನ್ನು ಹಗುರಗೊಳಿಸುತ್ತವೆ, ನಮ್ಮ ಎಲ್ಲಾ ರೀತಿಯ ಭಾವನೆಗಳನ್ನು ಮರೆಸಿ 3 ಗಂಟೆಗಳ ಕಾಲ ನಮಗೆ ಮನೋರಂಜನೆ ನೀಡಿ ಯಾವುದಾದರೊಂದು ರೀತಿಯಲ್ಲಿ ಬದುಕಿಗೆ ಹೊಸ ಹುರುಪನ್ನು ನೀಡುತ್ತವೆ, ಈ ಕಾರ್ಯವನ್ನು ಮಾಡುವ ಸಿನಿಮಾ ರಂಗದವರಿಗೆ ನಾವು ಸದಾ ಸಹಕಾರ ನೀಡಬೇಕಾದ್ದು ನಮ್ಮೆಲ್ಲರ ಕರ್ತವ್ಯ ಎಂದರು.
ಸಾಲಗಾಮೆ ನಂಜುಂಡೇಗೌಡರು ಹಲವಾರು ರೀತಿಯಲ್ಲಿ ಏರಿಳಿತಗಳನ್ನು ಅನುಭವಿಸಿ ಈ ಸ್ಥಾನಕ್ಕೆ ಬಂದಿರುವವರು, ಆ ಶ್ರಮ ಕೇವಲ ಅನುಭವಿಸಿದವರಿಗೆ ಮಾತ್ರ ತಿಳಿಯುತ್ತದೆ. ಸಿನಿಮಾ ರಂಗದಲ್ಲಿ ತಮ್ಮ ಸಾಧನೆಯಿಂದ ನಂಜುಂಡೇಗೌಡರು ನಮ್ಮ ಜಿಲ್ಲೆಗೆ ಅಪಾರ ಕೀರ್ತಿಯನ್ನು ತಂದುಕೊಟ್ಟಿದ್ದಾರೆ, ಇನ್ನೂ ಹೆಚ್ಚು ಹೆಚ್ಚು ಒಳ್ಳೆಯ ಸಿನಿಮಾಗಳನ್ನು ಮಾಡುವ ಶಕ್ತಿ ಅವರಿಗೆ ಬರಲಿ ಎಂದು ಶುಭಕೋರಿ ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಿದರು.
ನಂಜುಂಡೇಗೌಡರು ಯಾವುದೇ ಕಾರ್ಯವನ್ನು ಬಹಳ ವ್ಯವಸ್ಥಿತವಾಗಿ ಮಾಡುತ್ತಾರೆ, ಈ ವ್ಯಕ್ತಿತ್ವದಿಂದಲೇ ಕನ್ನಡ ಚಿತ್ರರಂಗಕ್ಕೆ ಹಲವಾರು ಯಶಸ್ವಿ ಚಿತ್ರಗಳನ್ನು ನೀಡಿದ್ದಾರೆ. ಸಾಧನೆಯನ್ನು ಜನರು ಗುರುತಿಸುತ್ತಾರೆ ಎನ್ನುವುದಕ್ಕೆ ಈ ಚಿತ್ರೋತ್ಸವವೇ ಸಾಕ್ಷಿ. ಮುಂದಿನ ಮೂರು ದಿನಗಳ ಕಾಲ ಈ ಚಿತ್ರೋತ್ಸವ ಯಶಸ್ವಿಯಾಗಿ ನಡೆಯಲಿ ಎಂದು ಶಾಸಕರಾದ ಪ್ರೀತಮ್ ಜೆ. ಗೌಡ ಅವರು ಶುಭಕೋರಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮಾತನಾಡಿ ನಂಜುಂಡೇಗೌಡರು ಹಲವಾರು ಸತ್ವಭರಿತ ಹಾಗೂ ಮೌಲ್ಯಾಧಾರಿತ ಚಿತ್ರಗಳನ್ನು ನೀಡಿದ್ದಾರೆ, ಅವರ ಈ ಪ್ರಯತ್ನ ಹೀಗೆ ಮುಂದುವರೆಯಲಿ ಎಂದು ತಮ್ಮ ಪ್ರಶಂಸೆ ವ್ಯಕ್ತಪಡಿಸಿದರು.
ಹಿರಿಯ ಚಲನಚಿತ್ರ ನಟರು ಹಾಗೂ ಡಾ|| ರಾಜ್‍ಕುಮಾರ್ ಪ್ರಶಸ್ತಿ ಪುರಸ್ಕøತರಾದ ಜೆ.ಕೆ ಶ್ರೀನಿವಾಸಮೂರ್ತಿ ಅವರು ಉದ್ಘಾಟನೆಯನ್ನು ನೆರವೇರಿಸದರು. ಸಾಲಗಾಮೆ ನಂಜುಂಡೇಗೌಡರ ಸಾಧನೆಗೆ ಎಲ್ಲ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿ ಶುಭಕೋರಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮ್‍ನಿವಾಸ್ ಸೆಪಟ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಸುನೀಲ್ ಪುರಾಣಿಕ್, ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಡಿ.ಕೆ.ರಾಮಕೃಷ್ಟ, ಹಿರಿಯ ಚಲನಚಿತ್ರ ನಿರ್ದೇಶಕರು ಹಾಗೂ ನಿರ್ಮಾಪಕರಾದ ಎಸ್.ವಿ. ರಾಜೇಂದ್ರಸಿಂಗ್ ಬಾಬು, ಹಿರಿಯ ಚಲನಚಿತ್ರ ನಟರಾದ ಸುಂದರ್ ರಾಜ್, ರಮೇಶ್ ಭಟ್, ಹಿರಿಯ ಚಲನಚಿತ್ರ ನಟಿ ಪ್ರಮೀಳಾ ಜೋಷಾಯ್, ಟೊರೊಂಟೊ ನಗರದ ಇಂಡಿಯಾ ಅಬ್ಸರ್ವರ್ ಪತ್ರಿಕೆಯ ಸಂಪಾದಕರಾದ ಬಿ.ವಿ. ನಾಗರಾಜ್, ರಾಜ್ಯ ಕಾರ್ಯನಿರತ ಪತ್ರಿಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದತಗಡೂರು, ಹಾಗೂ ಮಿಸ್ ಅರ್ಥ್ ಭವ್ಯ ಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತಿನ ಅಧ್ಯಕ್ಷರಾದ ನಾಯಕರಹಳ್ಳಿ ಮಂಜೇಗೌಡ ಮತ್ತು ಗೌರವಾಧ್ಯಕ್ಷರಾದ ರವಿನಾಕಲಗೂಡು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...