ಪ್ರವಾದಿ ಶೃಂಖಲೆಯ ಅಂತಿಮ ಕೊಂಡಿ ಮುಹಮ್ಮದ್ ಪೈಗಂಬರ್

Source: S O News service | By Staff Correspondent | Published on 12th December 2016, 10:59 PM | Coastal News | State News | National News | Special Report | Islam | Don't Miss |

ಎಂ.ಆರ್. ಮಾನ್ವಿ


ಜಗತ್ಗುರು ಪ್ರವಾದಿ ಮುಹಮ್ಮದ್ ಪೈಗಂಬರ್ ರ ಜನ್ಮ ದಿನಾಚರಣೆಗಾಗಿ ಇನ್ನೇನು ವೇದಿಕೆ ಸಿದ್ದಗೊಳ್ಳುತ್ತಿದೆ. ಜಗತ್ತಿನ ಎಲ್ಲ ಮುಸ್ಲಿಮರು ಒಕ್ಕೂರಲಿನಿಂದ ಒಪ್ಪಿಕೊಳ್ಳುವ ವ್ಯಕ್ತಿಯೊಬ್ಬರಿದ್ದರೆ ಅದು ಪ್ರವಾದಿ ಮುಹಮ್ಮದ್ ಪೈಗಂಬರರು ಮಾತ್ರ ಎಂದು ಖಂಡಿತವಾಗಿ ಹೇಳಬೇಕಾಗುತ್ತದೆ. 
ಈ ಜಗತ್ತಿನ ಸೃಷ್ಟಿಯ ಕಡೆ ನಾವು ಗಮನ ಹರಿಸಿದಾಗ ಒಂದಿಲ್ಲೊಂದು ರೀತಿ ಇದು ಸಮತೋಲನವನ್ನು ಕಾಣಬಹುದಾಗಿದೆ. ಮನುಷ್ಯನ ಸೃಷ್ಟಿಯಿಂದಾಗಿ ಜಗತ್ತು ವರ್ಣರಂಜಿತವಾಯಿತು. ಮನುಷ್ಯನ ಬದುಕಿಗಾಗಿ ಪ್ರಕೃತಿಯು ಎಲ್ಲ ರೀತಿಯ ಸಕಲ ಸೌಲಭ್ಯಗಳನ್ನು ಒದಗಿಸುತ್ತಿದೆ. ಲೋಕದ ಎಲ್ಲ ಸೃಷ್ಟಿಗಳ ಪೈಕಿ ಮನುಷ್ಯ ಬಹಳ ಶ್ರೇಷ್ಠ ಜೀವಿ.  ದೇವರು ಈ ಮನುಷ್ಯನೆಂಬ ಪ್ರಾಣಿಯನ್ನು ಸೃಷ್ಟಿಸಿ ಆವನ ಪಾಡಿಗೆ ಹಾಗೆಯೆ ಬಿಟ್ಟು ಬಿಡಲಿಲ್ಲ. ಅವನಿಗೆ ವಿವೇಚಿಸುವ, ಆಲೋಚಿಸುವ, ವಿಮರ್ಶಿಸುವ, ಪರಾಮರ್ಶಿಸುವ ಶಕ್ತಿಯನ್ನು ದಯಪಾಲಿಸಿದ. ಹಾಗಾಗಿ ಅವನ ಬದುಕಿಗೊಂದು ನಿಯಮವಿದೆ ಕಟ್ಟುಪಾಡುಗಳಿವೆ. ಗಡಿ, ಮೇರೆ ಹಾಗೂ ಬದುಕಿಗೊಂದಿಷ್ಟು ಮೌಲ್ಯಗಳಿವೆ. ಇವುಗಳನ್ನೇ ನಾವು ಧರ್ಮವಂದು ಕರಯುತ್ತೇವೆ. ಇದನ್ನು ಕಲಿಸಲೆಂದೆ ಜಗತ್ತಿನಾದ್ಯಂತ ಮಾರ್ಗದರ್ಶಕರು, ದಾರ್ಶನಿಕರು, ಪ್ರವಾದಿಗಳು, ಶರಣರು ಬಂದಿದ್ದಾರೆ. ಅವರು ತಮ್ಮ ಜೀವನದಲ್ಲಿ ಉತ್ತಮ ಮನುಷ್ಯರಾಗಿ ಬದುಕುವುದರ ಮೂಲಕ ಸಕಲ ಮನುಷ್ಯರಿಗೆ ಬದುಕುವ ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ. ಈ ಪ್ರಕ್ರಿಯೆ  ಎಲ್ಲ ಕಾಲಗಳಲ್ಲಿ, ಸಮುದಾಯಗಳಲ್ಲಿ, ಧರ್ಮಗಳಲ್ಲಿ ನಡೆದಿರುತ್ತದೆ. ಇದನ್ನು ಜಗತ್ತಿನ ಪ್ರಮುಖ ಧಾರ್ಮಿಕ ಗ್ರಂಥಗಳು ಪುಷ್ಟೀಕರಿಸುತ್ತವೆ. ಸನಾತನ ವೇದಗಳಿಂದ ಹಿಡಿದು ಅಂತಿಮ ದೇವವಾಣಿಯಾಗಿರುವ ಪವಿತ್ರ ಕರ್‌ಆನ್‌ನ ವರೆಗೂ ಆಯಾ ಸಮುದಾಯಗಳಲ್ಲಿ, ಧರ್ಮಗಳಲ್ಲಿ ಮನುಷ್ಯನ ಮಾರ್ಗದರ್ಶನಕ್ಕಾಗಿ ಪ್ರವಾದಿಗಳು, ದಾರ್ಶನಿಕರು, ಶರಣರು ಬಂದು ಹೋಗಿದ್ದಾರೆ ಎನ್ನುವುದನ್ನು ದಾಖಲಿಸಲಾಗಿದೆ. 
ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ
ಭಾರತ| ಅಭ್ಯುತ್ಥಾನಮಧರ್ಮಸ್ಯ
ತದಾತ್ಮಾನಂ ಸೃಜಾಮ್ಯಹಮ್||೪.೭||
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ
ದುಷ್ಕ ತಾಮ್| ಧರ್ಮಸಂಸ್ಥಾಪನಾರ್ಥಾಯ
ಸಂಭವಾಮಿ ಯುಗೇ ಯುಗೇ||೪.೮| ಎಂದು ಗೀತೆ ಹೇಳಿದರೆ “ವಲಿಕುಲ್ಲಿ ಕೌಮಿನ್ ಹಾದ್ (“ನಾವು ಪ್ರತಿಯೊಂದು ಸಮುದಾಯದಲ್ಲೂ ಅವರ ಮಾರ್ಗದರ್ಶಕರನ್ನು ಕಳುಹಿಸಿದ್ದೇವೆ’’) ಎಂದೂ ಪವಿತ್ರ ಕುರಾನ್ ಉಲ್ಲೇಖಿಸಿದೆ. 
ಈ ನಿಟ್ಟಿನಲ್ಲಿ ಮಹಾವೀರ, ಬುದ್ಧ, ಶ್ರೀರಾಮ, ಶ್ರೀಕೃಷ್ಣ ಇನ್ನಿತರ ಪುಣ್ಯ ಪುರುಷರು ಆಯಾ ಕಾಲದ ಜನರ ಮಾರ್ಗದರ್ಶಕರಾಗಿ ಬಂದಿರಬಹುದು ಎಂಬ ಸತ್ಯ ನಮಗೆ ಗೋಚರಿಸುತ್ತದೆ. ಈ ಮಾರ್ಗದರ್ಶಕರ ಶೃಂಖಲೆಯ ಕೊನೆಯ ಪ್ರವಾದಿಯಾಗಿ ಅರಬ್ ನ ಮಕ್ಕಾ ನಗರದಲ್ಲಿ ಅನಾಥ ಮಗುವೊಂದು ಜನ್ಮ ತಾಳುತ್ತದೆ ಈ ಅನಾಥ್ ಮಗುವೆ ಮುಂದೆ ಜಗತ್ಗುರು ಪ್ರವಾದಿ ಮುಹಮ್ಮದ್ ಪೈಗಂಬರರಾಗಿ ಗುರುತಿಸಿಕೊಳ್ಳುತ್ತಾರೆ. 
ಇವರು ಯಾವತ್ತೂ ತಮ್ಮ ಜೀವಿತಾವಧಿಯಲ್ಲಿ ತಮ್ಮನ್ನು ದೇವರೆಂದು, ದೇವಾಂಶ ಸಂಭೂತರೆಂದು ಕರೆದುಕೊಳ್ಳಲಿಲ್ಲ. ಮಾತ್ರವಲ್ಲ ತಾವೊಬ್ಬ ದೇವನ ದಾಸರೆಂದು ಮಾತ್ರ ಗುರುತಿಸಿಕೊಂಡರು. ಬದುಕಿರುವವರೆಗೂ ಅತ್ಯಂತ ಸರಳ ಹಾಗೂ ಕಷ್ಟಕರ ಜೀವನ ನಡೆಸಿದ ಅವರು ಯಾವತ್ತೂ ಹೊಟ್ಟೆ ತುಂಬುವಷ್ಟು ಊಟ ಮಾಡಲಿಲ್ಲ. ಇವರ ಜೀವನ ಮಾನವೀಯ ಮೌಲ್ಯಗಳ ಉದ್ದಾತ್ತ ಬೋಧನೆಗಳಿಂದ ತುಂಬಿತ್ತು. ಇಡಿ ಇಸ್ಲಾಮ್ ಜಗತ್ತಿಗೆ ದೊರೆಯಾಗಿ ಮೆರೆಯಬೇಕಾಗಿದ್ದ ಅವರು ಮರಣದ ಸಮಯದಲ್ಲಿ ಕರ್ಜುರದ ಎಲೆಗಳಿಂದ ಮಾಡಿದ ಚಾಪೆಯಲ್ಲಿ ಮಲಗಿಕೊಂಡಿದ್ದರು ಎಂದರೆ ಅವರ ಬದುಕು ಎಷ್ಟೊಂದು ಸರಳವಾಗಿತ್ತು ಎಂದು ಊಹಿಸಲು ಕಷ್ಟಸಾಧ್ಯವಾಗುತ್ತದೆ. 
ಅವರು ಬದುಕಿನಲ್ಲಿ ಏನೆಲ್ಲ ಮಾಡಿದರೂ ಅದೆಲ್ಲವೂ ಅವರ ಅನುಯಾಯಿಗಳಿಗೆ ಒಂದು ಮಾದರಿಯಾಗಿತ್ತೆ ವಿನಹ ತೋರಿಕೆಯಂತೋ ಅಗಿರಲೆ ಇಲ್ಲ. ಏಕೆಂದರೆ ಅವರ ಯಾವುದೇ ಕರ್ಮವು ತೋರಿಕಯದ್ದಾಗಿರಲಿಲ್ಲ. ಅದೊಂದು ಸಮುದಾಯಕ್ಕೆ ನೀಡುವ ಪಾಠವಾಗಿತ್ತು.
ಪ್ರವಾದಿ ಮುಹಮ್ಮದ್ ಪೈಗಂಬರರು ತಮ್ಮ ಬದುಕಿನುದ್ದಕ್ಕೂ ಸಮತೂಲನವನ್ನು ಕಾಯ್ದುಕೊಂಡು ಬಂದಿದ್ದರು ಎನ್ನುವ ವಿಷಯ ಅವರ ಜೀನವ ಚರಿತ್ರೆಯ ಅಧ್ಯಯನದಲ್ಲಿ ಕಂಡುಬರುತ್ತದೆ. ಅವರು ಮದುವೆಯಾಗಿ ಸಂಸಾರಸ್ಥ ಜೀವನ ಸಾಗಿಸಿದ್ದರು. ಹೆಚ್ಚು ಧಾರ್ಮಿಕರಾಗದೆ, ಲೌಕಿಕವಾಗಿರುವ ಆಸೆ ಆಪೇಕ್ಷೆಗಳ ಹಿಂದೇಯೂ ಬೀಳದೆ ಓರ್ವ ಮನುಷ್ಯ ಹೇಗೆ ಜೀವಿಸಬೇಕೆಂಬುದನ್ನು ತೋರಿಸಿಕೊಟ್ಟರು. ಲೌಕಿಕ ಜಂಜಾಟಗಳಿಂದ ದೂರವಿದ್ದು, ಸಂಸಾರವನ್ನು ತ್ಯಜಿಸಿ ಯಾವದೋ ಗಿಡಗಂಟೆಗಳ ನಡುವೆ, ಗುಡಿಗುಂಡಾರಗಳಿಗೆ ಮೊರೆಹೋಗದೆ ಸಮಾಜದ ನಡುವೆ  ಬದುಕಿ ತೋರಿಸಿದರು. ಮನುಷ್ಯ ಧಾರ್ಮಿಕವಾಗಿಯೂ, ಲೌಕಿಕವಾಗಿಯೂ ಹೇಗೆ ಬದುಕಬೇಕೆಂಬದನ್ನು ತೋರಿಸಿಕೊಟ್ಟ ಅವರು ಮಹಾನ್ ಸತ್ಪುರುಷರಾಗಿ ಮಾನವ ಕುಲಕ್ಕೆ ಮಾದರಿಯ ಚೇತನವಾಗಿದ್ದರು. ಅವರು ಹೇಳಿದ ಒಂದು ವಚನ ಹೀಗಿದೆ. “ಅಲ್ಲಾಹನಿಗೆ ಸ್ತುತಿ. ನಾನು ವಿವಾಹಿತನಾಗಿದ್ದು ಪಾವನ ಜೀವನ ಸಾಗಿಸುತ್ತಿದ್ದೇನೆ. ನಾನು ಮಾಂಸವನ್ನು ತಿನ್ನುತ್ತೇನೆ. ಉಪವಾಸವನ್ನು ಆಚರಿಸುತ್ತೇನೆ. ನಾನು ನಿದ್ರೆಯನ್ನು ಮತ್ತು ಜಾಗರಣೆ ಎರಡನ್ನೂ  ಮಾಡುತ್ತೇನೆ”
ಪ್ರವಾದಿ ಮುಹಮ್ಮದ್(ಸ) ರು ಸಾಮಾಜಿಕ ನ್ಯಾಯ, ಮಾನವೀಯ ಮೌಲ್ಯ, ಅನುಕಂಪ, ಬಡವರ ಕುರಿತ ಕಳಕಳಿ ಎಂತಹ ಕಠಿಣ ಹೃದಯಿಗಳನ್ನು ಕರಗಿಸುವಂತಿತ್ತು. ಎಂಬುದಕ್ಕೆ ಅವರ ವಚನಗಳೇ ಸಾಕ್ಷಿ. ಇಲ್ಲಿ ಕೆಲವೊಂದು ಅವರ ವಚನಗಳನ್ನು ಉಲ್ಲೇಖಿಸುವುದು ಸೂಕ್ತ.
·    ಯಾವನ ಕಿರುಕುಳದಿಂದ ನೆರೆಯವನು ಸುರಕ್ಷಿತನಲ್ಲವೂ ಅವನು ಖಂಡಿತಾ ಮುಸ್ಲಿಮನಲ್ಲ 
·    ಕುಟುಂಬ ಸಂಬಂಧ ಮುರಿಯುವವನು ಸ್ವರ್ಗಕ್ಕೆ ಹೋಗಲಾರನು.
·    ಹಸಿದವನಿಗೆ ಉಣ ಬಡಿಸಿರಿ, ರೋಗಿಯನ್ನು ಸಂದರ್ಶಿಸಿರಿ, ಕೈದಿಯನ್ನು ಬಂಧ ಮುಕ್ತ ಗೊಳಿಸಿರಿ.
·    ಮಾತಾಡಿದರೆ ಒಳ್ಳೆಯದನ್ನೇ ಆಡಬೇಕು, ಇಲ್ಲವಾದರೆ ಮೌನವಾಗಿರಬೇಕು, ನೆರೆಹೊರೆಯವರಿಗೆ ಕಿರುಕುಳ ಕೊಡಬಾರದು.
·    ನಿಮ್ಮಲ್ಲಿ ಯಾರ ಚಾರಿತ್ರ್ಯವು ಶ್ರೇಷ್ಟವಾಗಿದೆಯೋ,ಅವರೇ ನಿಮ್ಮ ಪೈಕಿ ಶ್ರೇಷ್ಟರು.
·    ಉಪಕಾರಕ್ಕೆ ಪ್ರತಿಯಾಗಿ ಸಂಬಂಧಿಕರಿಗೆ ಹಿತಮಾಡುವವನಲ್ಲ, ಮುರಿದ ಸಂಬಂಧವನ್ನು ಜೋಡಿಸುವವನೇ ನಿಜವಾದ ಬಂಧು ಸ್ನೇಹಿ.
·    ತಪ್ಪು ಕಲ್ಪನೆಗಳನ್ನು ತ್ಯಜಿಸಿರಿ, ತಪ್ಪು ಕಲ್ಪನೆಯು ಅತ್ಯಂತ ಕೆಟ್ಟ ಸುಳ್ಳು, ಜನರ ದೌರ್ಬಲ್ಯಗಳನ್ನು ಹುಡಕಬೇಡಿರಿ, ಹೊಂಚು ಹಾಕಬೇಡಿರಿ, ಪರಸ್ಪರ ಹೊಟ್ಟೆ ಕಿಚ್ಚು ಪಡಬೇಡಿರಿ, ಪರಸ್ಪರ ದ್ವೇಷ ಕಟ್ಟಿಕೊಳ್ಳಬೇಡಿರಿ, ಅಲ್ಲಾಹನ ದಾಸರಾಗಿ ಪರಸ್ಪರ ಏಕೋದರ ಸಹೋದರರಾಗಿರಿ.
·    ಕುಸ್ತಿಯಲ್ಲಿ ಎದುರಾಳಿಯನ್ನು ಸೋಲಿಸುವವನು ಬಲಾಡ್ಯನಲ್ಲ, ಸಿಟ್ಟು ಬಂದಾಗ ತನ್ನ ನ್ನು ತಾನು ನಿಯಂತ್ರಿಸಿ ಕೊಳ್ಳುವವನೇ ನಿಜವಾದ ಬಲಾಡ್ಯ.
ಅಲ್ಲಾಹನು ಪ್ರವಾದಿ ಮುಹಮ್ಮದ್ ಪೈಗಂಬರರನ್ನು ಕುರಿತು ಪವಿತ್ರ ಕುರಾನ್ ನಲ್ಲಿ ಹೇಳಿದ್ದು, “ನಾವು ನಿಮ್ಮನ್ನು ಸಕಲ ಲೋಕದ ಜನರಿಗೆ ಅನುಗ್ರಹವನ್ನಾಗಿ ಮಾಡಿ ಕಳುಹಿಸಿದ್ದೇವೆ” ಎಂಬುದಾಗಿದೆ. 
ಪ್ರವಾದಿ ಮುಹಮ್ಮದ್‌ರ ಹುಟ್ಟು ಈ ಲೋಕಕ್ಕೆ ಅನುಗ್ರಹವಾಗಿದೆ ಎಂಬುದು ಈ ಮೇಲಿನ ವಚನದಿಂದ ತಿಳಿದುಬರುತ್ತದೆ. ದೂರದೃಷ್ಟವಶಾತ್ ಇಂದು ಮುಸ್ಲಿಮೇತರರು ಸೇರಿದಂತೆ ಮುಸ್ಲಿಮ್ ಸಮುದಾಯ ಪ್ರವಾದಿ ಮುಹಮ್ಮದ್ ಪೈಗಂಬರ್ ರನ್ನು ಅರ್ಥಮಾಡಿಕೊಂಡು ಅವರನ್ನು ಅನುಸರಿಸುವಲ್ಲಿ ಎಲ್ಲೋ ಎಡವಿದ್ದಾರೆ ಎನ್ನುವ ಭಾವನೆ ಮೂಡುತ್ತದೆ. ಏಕೆಂದರೆ ಪ್ರವಾದಿ ಮುಹಮ್ಮದ್‌ರು ಕೇವಲ ೧೩ ವರ್ಷಗಳಲ್ಲಿ ಅತ್ಯಂತ ಅಮಾನವೀಯ ಸಮಾಜವನ್ನು ತಿದ್ದಿ ಮನುಷ್ಯರನ್ನಾಗಿ ರೂಪಿಸಿದ್ದನ್ನು ಇತಿಹಾಸ ದಾಖಲಿಸಿದೆ. ಕೆಲವೇ ವರ್ಷಗಳಲ್ಲಿ ಅವರ ಕೀರ್ತಿ ಇಡಿ ಜಗತ್ತಿಗೆ ಪಸರಿಸಿತು. ಅಂತಹ ವ್ಯಕ್ತಿತ್ವವನ್ನು ಇಂದು ಅಪಾರ್ಥ ಮಾಡಿಕೊಳ್ಳುತ್ತಿದ್ದೇವೆ. ಅವರನ್ನು ಅನುಸರಿಸುವಲ್ಲಿ ನಾವು ವಿಫಲರಾಗಿದ್ದೇವೆ. ಅದ್ದರಿಂದಲೆ ಸಮಾಜದಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ಕೆಲವು ಗೊಂದಲವನ್ನು ಸೃಷ್ಟಿಸಲೆಂದೆ ಸಕ್ರೀಯರಾಗಿದ್ದಾರೆ. ಈ ನಡುವೆ ಅವರ ನೈಜ ಅನುಯಾಯಿಗಳು ಪ್ರವಾದಿಯನ್ನು ಜಗತ್ತಿಗೆ ಪರಿಚಯಿಸಲು ಪಣವನ್ನು ತೊಟ್ಟಿದ್ದಾರೆ. ಲೋಕನಾಯಕನೆಂಬ ಎಲ್ಲ ಅರ್ಹತೆಯನ್ನು ಹೊಂದಿದೆ ಪ್ರವಾದಿ ಮುಹಮ್ಮದ್ ಪೈಗಂಬರರನ್ನು ನಾವು ಒಪ್ಪಿಕೊಳ್ಳುವ ಕಾಲವಿಂದು ಕೂಡಿಬಂದಿದೆ. ಧರ್ಮದ ಹೆಸರಿನಲ್ಲಿ ಧರ್ಮ, ಸಮುದಾಯಕ್ಕೆ ಕಳಂಕಿತವಾಗಿ ಮಾಡುವಲ್ಲಿ ನಮ್ಮ ಪಾಲು ಎಷ್ಟು ಎಂಬುದನ್ನು ಸಮುದಾಯ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಆದ್ದರಿಂದಲೇ  “ಪ್ರವಾದಿ ಮುಹಮ್ಮದ್ ಪೈಗಂಬರರ ಅನುಯಾಯಿಗಳೆಂದು ಹೇಳಿಕೊಳ್ಳಲು ನಾವೆಷ್ಟು ಯೋಗ್ಯರು? ಎಂಬ ಪ್ರಶ್ನೆ ನಮ್ಮಲ್ಲಿ ಹುಟ್ಟಿಕೊಳ್ಳುತ್ತದೆ.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಈದ್-ಉಲ್-ಫಿತರ್ ಪ್ರತಿನಿಧಿಸುವ ಮೌಲ್ಯಗಳು; ಮನುಷ್ಯ ಪ್ರೇಮ, ಕರುಣೆ, ಅನುಕಂಪ  ಮತ್ತು ಸಹಾನುಭೂತಿ

ಕೋಮು ಧ್ರುವೀಕರಣ ಮತ್ತು ಧಾರ್ಮಿಕ ಅಸಹಿಷ್ಣುತೆಯ ಹಿನ್ನೆಲೆಯಲ್ಲಿ, ಈದ್-ಉಲ್-ಫಿತರ್‌ನ ಮಹತ್ವವು ಹೆಚ್ಚಿನ ಪ್ರಾಮುಖ್ಯತೆಯನ್ನು ...

ಭಟ್ಕಳ: ಕುರಾನ್ ಕಂಠಪಾಠ ಮಾಡಿದ ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಚೀಫ್ ಖಾಝಿ

ಭಟ್ಕಳ: ಇಲ್ಲಿನ ಖಲಿಫಾ ಮರ್ಕಝಿ ಜಮಾಅತುಲ್ ಮುಸ್ಲಿಮೀನ್ ನ ಚೀಫ್ ಖಾಜಿ ಹಾಗೂ ಜಾಮಿಯಾ ಇಸ್ಲಾಮಿ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಮೌಲಾನ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...