ಪೌಷ್ಟಿಕ ಆಹಾರ ’ಕಲಗಾ’ ಗೆ ಹೆಚ್ಚುತ್ತಿದೆ ಬೇಡಿಕೆ

Source: sonews | By Staff Correspondent | Published on 17th March 2019, 12:35 AM | Coastal News | Don't Miss |

ಭಟ್ಕಳ: ಸದ್ಯ ತಾಲೂಕಿನಲ್ಲಿ ಚಿಪ್ಪಿಕಲ್ಲಿನ ವ್ಯಾಪಾರ ಹಾಗೂ ಖರೀದಿ ಕಡಿಮೆಯಾಗಿದ್ದ ಬೆನ್ನಲ್ಲೆ ಮಾರುಕಟ್ಟೆಯಲ್ಲಿ ಕಲಗಾ(ಕಳಿನಾಡು) ಎಂಬ ಬಹುಬೇಡಿಕೆಯ ರುಚಿಯಾದ ಜಲಚರಗಳು ಸಿಗುತ್ತಿದ್ದು, ತಾಲೂಕಿನ ಹೊಳೆ ಭಾಗದಲ್ಲಿನ ಮೀನುಗಾರ ಮಹಿಳೆಯರು ಬೆಳ್ಳಂಬೆಳಗ್ಗೆ ಹೊಳೆಯಲ್ಲಿ ಇಳಿದು ಕಲಗಾ(ಕಳಿನಾಡು) ತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಕಲಗ ತೆಗೆಯುವ ಸೀಜನ ಈಗಾಗಲೇ ಆರಂಭವಾಗಿದ್ದು ಬೆಳಿಗ್ಗೆ 6 ಗಂಟೆಗೆ ತೆರಳಿ 9 ಗಂಟೆಗೆ ವಾಪಸ್ಸು ಬರಲಿದ್ದಾರೆ. ಇಲ್ಲಿನ ಮುರ್ಡೇಶ್ವರ, ವೆಂಕಟಾಪುರ, ಅಳ್ವೇಕೋಡಿ, ತೆಂಗಿನಗುಂಡಿ, ಮುಂಡಳ್ಳಿ, ಗೊರಟೆ, ಸೇರಿದಂತೆ ಹೊಳೆ ಭಾಗದಲ್ಲಿನ ಮೀನುಗಾರ ಮಹಿಳೆಯರು ಮೂರು ತಿಂಗಳು ಮಳೆಗಾಲ ಆರಂಭವಾಗುವವರೆಗೂ ಈ ಕಾರ್ಯದಲ್ಲಿ ಬ್ಯುಸಿ ಆಗುತ್ತಾರೆ. ಇದೊಂದು ರೀತಿಯಲ್ಲಿ ಇವರುಗಳಿಗೆ ಉದ್ಯೋಗದಂತೆ ಆಗುತ್ತದೆ. ವೆಂಕಟಾಪುರ ನದಿಯಲ್ಲಿ ಮಹಿಳೆಯರು ಆಳವಾದ ಹೊಳೆಗೆ ಇಳಿದು ರುಚಿಕರ ಕಲಗಾ ವನ್ನು ತೆಗೆಯುತ್ತಾರೆ. ಈ ಕಲಗಾವನ್ನು ತೆಗೆಯಲು ಹೊಳೆಯಲ್ಲಿ ನೀರಿನ ಭರ ಇಳಿತವಿದ್ದ ವೇಳೆ ತೆರಳಲಿದ್ದಾರೆ. ಸಿಹಿನೀರಿನ ಇಳಿತದ ಸಂಧರ್ಭದಲ್ಲಿ ಉಪ್ಪು ನೀರು ಹರಿದಾಡುವುದರಿಂದ ಕಲಗಾ ರುಚಿಯಾಗಿರಲು ಕಾರಣ ಎಂದು ಈ ಭಾಗದ ಮೀನುಗಾರ ಮಹಿಳೆಯರು ಹೇಳುತ್ತಾರೆ.

ತಾಲೂಕಿನ ಮುರ್ಡೇಶ್ವರದಿಂದ ಗಡಿಭಾಗವಾದ ಗೊರಟೆ ತನಕ ವಾಸಿಸುವ ಸಾಕಷ್ಟು ಮಂದಿ ಮೀನುಗಾರ ಮಹಿಳೆಯರು ನದಿಯಲ್ಲಿ ಸಿಗುವ ಕಲಗಾ ವನ್ನು ತಂದು ಮಾರಾಟ ಮಾಡಿ ಜೀವನ ಸಾಗಿಸುವುದರೊಂದಿಗೆ ಕೆಲವನ್ನು ತಮ್ಮ ಆಹಾರಕ್ಕೆ ಬಳಸುತ್ತಾರೆ. ಆದರೆ ಈ ಭಾಗದಲ್ಲಿ ಹೇರಳವಾಗಿ ಚಿಪ್ಪಿಕಲ್ಲ ಹೆಚ್ಚಿನದಾಗಿ ಇಷ್ಟ ಪಡುವ ಜನರಿದ್ದು ಕೆಲವು ಜನರಿಗಷ್ಟೇ ಕಲಗಾ(ಕಳಿನಾಡು)ದ ರುಚಿ ತಿಳಿದಿದೆ ಎನ್ನಬಹುದು. ಕಲಗಾ ಅಥವಾ ಕಳಿನಾಡು ಒಂದು ಪೌಷ್ಠಿಕಯುಕ್ತ ಆಹಾರವಾಗಿದ್ದು ಮನುಷ್ಯನ ದೇಹಕ್ಕೆ ಬೇಕಾಗುವ ಕಬ್ಬಿಣದ ಅಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ಇದು ನೀಡುತ್ತದೆ. ನದಿಯಲ್ಲಿ ಇಳಿಯುವ ಮಹಿಳೆಯರು ಕಲ್ಲು ಬಂಡೆಯ ಮೇಲೆ ಹುಟ್ಟುವ ಇದನ್ನು ಕತ್ತರಿಸಿ ಬುಟ್ಟಿಯಲ್ಲು ತುಂಬಿ ತರುತ್ತಾರೆ. ಇದನ್ನು ಕತ್ತರಿಸಲು ಚೂಪಾದ ಕತ್ತಿಯನ್ನು ಉಪಯೋಗಿಸಲಾಗುತ್ತದೆ ಇದರಿಂದ ಮಾತ್ರ ಸರಿಯಾಗಿ ತೆಗೆಯಲು ಸಾಧ್ಯ. ಇದರೊಳಗಿನ ಮಾಂಸವನ್ನು ಕಲ್ಲಿನಿಂದ ಬೇರ್ಪಡಿಸಿ ಮಾರಾಟ ಮಾಡುತ್ತಾರೆ. 

ಬೇಸಿಗೆಯ ಆಹಾರ: ಈ ಭಾಗದಲ್ಲಿನ ಮಾಂಸಹಾರಿ ಪ್ರಿಯರಿಗೆ ಕಲಗಾ ಅಥವಾ ಕಳಿನಾಡು ಭಾರಿ ಪ್ರಿಯವಾಗಿದ್ದು, ಊಟಕ್ಕೆ ಪಲ್ಯಾದ ರೀತಿಯಲ್ಲಿ ಸವಿಯುತ್ತಾರೆ. ಮಾರುಕಟ್ಟೆಯಲ್ಲಿ ಚಿಪ್ಪಿಕಲ್ಲಿನ ಬಳಿಕ ಹೆಚ್ಚಿನ ಬೇಡಿಕೆ ಈ ಜಲಚರ ಹೊಂದಿದೆ.ನದಿಯಿಂದ ತಂದ ಕಲಗಾವನ್ನು ಮನೆಗೆ ತಂದು ಶುಚ್ಚಿಗೊಳಿಸಿ ಪದಾರ್ಥ ಮಾಡಿ ತಿನ್ನಲಿದ್ದಾರೆ.  

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...