ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ ಎ.೩-೧೫ ಚಿಣ್ಣರ ಮೇಳ-೨ ಬೇಸಿಗೆ ಶಿಬಿರ; ಭಿತ್ತಿಪತ್ರ ಬಿಡುಗಡೆ

Source: SOnews | By Staff Correspondent | Published on 30th March 2023, 2:03 PM | Coastal News |

ಭಟ್ಕಳ: ಎ.೩ರಿಂದ ೧೫ ರ ವರೆಗೆ ಸಾಗರ ರಸ್ತೆಯ ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ ನಡೆಯುವ ಚಿಣ್ಣರ ಮೇಳ-೨ ಬೇಸಿಗೆ ಶಿಬಿರದ ಭಿತ್ತಿವನ್ನು ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಪ್ರಕಾಶ ಶಿರಾಲಿ ಬಿಡುಗಡೆಗೊಳಿಸಿದರು. 

ನಂತರ ಮಾತನಾಡಿದ ಅವರು, ಕಳೆದ ವರ್ಷ ಅತ್ಯಂತ ಯಶಸ್ವಿಯಾಗಿ ನಡೆದ ಬಿಸಿಗೆ ಶಿಬಿರ ವಿದ್ಯಾರ್ಥಿ ಮತ್ತು ಪಾಲಕರಿಂದ ಪ್ರಶಂಸೆಗೆ ಪಾತ್ರವಾಗಿದೆ. ಇದರಿಂದ ಪ್ರೇರೇಪಿತಗೊಂಡು ಈ ವರ್ಷ ಮತ್ತೆ  ಚಿಣ್ಣರ ಮೇಳ-೨ ಬೇಸಿಗೆ ಶಿಬಿರವನ್ನು ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ ಅಥ್ಲಿಟಿಕ್ ಕಲ್ಷರಲ್ ಅಂಡ್ ಎಜ್ಯುಕೇಶನಲ್ ಫೌಂಡೇಶನ್‌ನ ಸುದರ್ಶನ ಭಟ್ಕಳ ಇವರ ನೇತ್ರತ್ವದಲ್ಲಿ ಈ ವರ್ಷವೂ ಆಯೋಜಿಸುತ್ತಿರುವುದು ಪ್ರಶಂಸನೀಯವಾಗಿದೆ ಎಂದರು.  ಈ ಶಿಬಿರದಲ್ಲಿ   ಥಿಯೇಟರ್(ನಟನೆ), ಕಿರುಚಿತ್ರ, ಸಂಗೀತ, ನೃತ್ಯ, ಚಿತ್ರಕಲೆ, ಮಣ್ಣಿನ ಮಾದರಿ, ಕ್ರಾಫ್ಟ್, ವಾದ್ಯಗಳ ತರಬೇತಿ, ಜನಪದ ಆಟಗಳು, ಚಂಡೆ, ಮುಖವಾಡ ತಯಾರಿಕೆ, ಜಾದು ಮುಂತಾದ ಕಲಾಪ್ರಕಾರಗಳಲ್ಲಿ ತರಬೇತಿ ನೀಡಲಾಗುವುದು. ಎಂದೂ ಹೇಳಿದರು. 

ದಿ ನ್ಯೂ ಇಂಗ್ಲೀಷ್ ಪಿ ಯು ಕಾಲೇಜಿನ ಪ್ರಾಂಶುಪಾಲರಾದ ಡಾ. ವೀರೇಂದ್ರ ವಿ. ಶಾನಬಾಗ ಮಾತನಾಡಿ, ರಾಷ್ಟç ಹಾಗೂ ಅಂತರಾಷ್ಟಿçÃಯ ಕಲಾವಿದರಿಂದ, ಕಾಮಿಡಿ ಕಿಲಾಡಿ ಮತ್ತು ಡ್ರಾಮಾ ಜುನಿರ‍್ಸ್ ಮೆಂರ‍್ಸ್ ಮುಂತಾದ  ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು ಭಟ್ಕಳದ ವಿದ್ಯಾರ್ಥಿಗಳಿಗೆ ಒಂದು ಹೊಸ ಅವಕಾಶವನ್ನು ಸುದರ್ಶನ ಭಟ್ಕಳ ಒದಗಿಸಿಕೊಡುತ್ತಿದ್ದು, ಮಕ್ಕಳು ಟಿವಿಯ ಮುಂದೆ ಅಥವಾ ಮೊಬೈಲ್ ನೊಂದಿಗೆ ಸಮಯವನ್ನ ವ್ಯರ್ಥ ಮಾಡುವುದಕ್ಕಿಂತ ಈ ಅವಕಾಶವನ್ನು ಬಳಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ವಿದ್ಯಾಂಜಲಿ ಪಬ್ಲಿಕ್ ಶಾಲೆಯ ಮುಖ್ಯಾಧ್ಯಾಪಕಿ ಶೈಲಜಾ ಪ್ರಭು, ವಿದ್ಯಾಂಜಲಿ ಪಬ್ಲಿಕ್ ಶಾಲೆಯ ಶಿಕ್ಷಕ ರಾಘವೇಂದ್ರ ಕಾಮತ್ ಮತ್ತು ಅಸ್ಥೆಟಿಕ್ ಕಲ್ಷರಲ್ ಅಂಡ್ ಎಜ್ಯುಕೇಶನಲ್ ಫೌಂಡೇಶನ್‌ನ  ಪ್ರಸನ್ನ ಆಚರ‍್ಯ ಉಪಸ್ಥಿತರಿದ್ದರು.
 

Read These Next

ಎರಡು ವರ್ಷಗಳಿಂದ ಮೃತ ಮೀನುಗಾರ ಕುಟುಂಬಕ್ಕೆ ಪರಿಹಾರವಿಲ್ಲ. ಅಧಿಕಾರಿಗಳ ಉತ್ತರಕ್ಕೆ ಸಚಿವ ಮಂಕಾಳ ವೈದ್ಯ ಅಸಮಧಾನ.

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ವರ್ಷದಲ್ಲಿ ಮೃತಪಟ್ಟಿರುವ 40 ಮೀನುಗಾರ ಕುಟುಂಬಕ್ಕೆ ಸಂಕಷ್ಟ ಪರಿಹಾರ ನಿಧಿಯಿಂದ ...

ಪಕ್ಷದ ಕಾರ್ಯಕರ್ತರ ಹಿತಕಾಪಾಡಲು ಕುಮಟಾ ಕ್ಷೇತ್ರದಲ್ಲೇ ವಾಸ್ತವ್ಯ: ನಿವೇದಿತ್ ಆಳ್ವಾ

ಹೊನ್ನಾವರ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಗೆಲುವಿಗಾಗಿ ಹಗಲು-ರಾತ್ರಿ ಪರಿಶ್ರಮಿಸಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಹಿತ ...