ಚಿತ್ರಕಲೆ ಹಾಗೂ ಶಿಲ್ಪಕಲೆ ಕೋರ್ಸ್‍ಗಳ ವ್ಯಾಸಂಗಕ್ಕೆ ಅರ್ಜಿ ಅಹ್ವಾನ್

Source: S O News Service | By I.G. Bhatkali | Published on 26th May 2019, 1:21 AM | Coastal News | Don't Miss |

ಕಾರವಾರ : ಕನ್ನಡ ವಿಶ್ವವಿದ್ಯಾಲಯ ಹಂಪಿಯ ವಿಸ್ತರಣಾ ಕೇಂದ್ರ,   ಬಾದಾಮಿ ಬನಶಂಕರಿಯಲ್ಲಿ  ನಡೆಸಲಾಗುತ್ತಿರುವ ಚಿತ್ರಕಲೆ ಹಾಗೂ ಶಿಲ್ಪಕಲೆ  ನಾಲ್ಕು ವರ್ಷದ  ಪದವಿ ಕೋರ್ಸ್‍ಗಳ ವ್ಯಾಸಂಗಕ್ಕೆ 2019-20ನೇ ಸಾಲಿನ ಪ್ರವೇಶಕ್ಕಾಗಿ  ಪಿಯುಸಿ. ಐಟಿಐ. ಜೆಓಡಿಸಿ ಹಾಗೂ ತತ್ಸಮಾನ (10+2) ಪರೀಕ್ಷೆಗಳಲ್ಲಿ ಪಾಸಾದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸಾಮಾನ್ಯ ಪದವಿಗಳಾದ ಬಿಎ. ಬಿಕಾಂ. ಬಿ.ಎಸ್.ಸಿ., ಬಿ.ಎಸ್.ಡಬ್ಲೂ ಇನ್ನಿತರ ತತ್ಸಮಾನ ಪದವಿಗಳಂತೆ ಪದವಿ ಹಂತದ ಯಾವುದೇ ಸ್ಪರ್ಧಾತ್ಮಕ ಪರಿಕ್ಷೇಗಳು ಬ್ಯಾಂಕಿಂಗ್, ಕೆ.ಎ.ಎಸ್, ಐ.ಎ.ಎಸ್,  ರ್ವೆಲ್ವೆ ಇಲಾಖೆ, ಎಫ್.ಡಿ.ಎ. ಹಾಗೂ ಉನ್ನತ ವ್ಯಾಸಂಗ ಮಾಡಬಯಸುವರಿಗೆ ಕಲಿಯಲು  ಅವಕಾಶವಿದೆ.

ಪ್ರಖ್ಯಾತ ಕಲಾವಿದರು ಮತ್ತು ಸೃಜನಶೀಲ ಯುವ ಕಲಾವಿದರಿಂದ ಕಲಾಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತದೆ, ಬಾದಾಮಿ ಕೇಂದ್ರದಲ್ಲಿ ಶಿಲ್ಪಕಲೆಯಲ್ಲಿ ಪ್ರಾದೇಶಿಕವಾಗಿ ದೊರೆಯುವ ಚಾಲುಕ್ಯರ ವಾಸ್ತುಶಿಲ್ಪ ಮತ್ತು ಮೂರ್ತಿ ಶಿಲ್ಪಗಳನ್ನು ಪ್ರಧಾನವಾಗಿ ಅಭ್ಯಾಸ ಮಾಡಲಾಗುತ್ತಿದೆ. ಜೊತೆಗೆ ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ಹೊಯ್ಸಳ, ವಿಜಯನಗರ ಹಾಗೂ ಮೈಸೂರು ಸಂಪ್ರದಾಯ ಶೈಲಿಯ ಶಿಲ್ಪಗಳನ್ನು ಸಾಂದರ್ಭಿಕವಾಗಿ ತಿಳಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್  ಸಂಖ್ಯೆ 9449256814, 9448580056 ಸಂಪರ್ಕಿಸಹುದಾಗಿದೆ ಎಂದು  ಕನ್ನಡ ವಿಶ್ವವಿದ್ಯಾಲಯ ಹಂಪಿ, ಬಾದಾಮಿ ಕೇಂದ್ರದ ಆಡಳಿತಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Read These Next

ಬ್ಯಾಂಕುಗಳ ವಿಲೀನ ಉನ್ಮಾದ

ವಾಸ್ತವಗಳು ಬ್ಯಾಂಕುಗಳ ಗಾತ್ರ ಮತ್ತು ದಕ್ಷತೆಯ ನಡುವಿನ ಸಂಬಂಧಗಳ ಒದಗಿಸುವ ತಿಳವಳಿಕೆಗಳಿಗೆ ಪೂರಕವಾಗಿಯೇನೂ ಇಲ್ಲ. ಉದಾಹರಣೆಗೆ ...