ಕಾರವಾರ: ಪತ್ರಿಕೋದ್ಯಮ ಮಹಿಳಾ ಅಪ್ರೆಂಟಿಸ್‍ಗೆ ಅರ್ಜಿ ಆಹ್ವಾನ

Source: S.O. News Service | By I.G. Bhatkali | Published on 20th June 2019, 4:25 PM | Coastal News | Don't Miss |

ಕಾರವಾರ: 2019-20ನೇ ಸಾಲಿನ ಮಹಿಳಾ ಉದ್ದೇಶಿತ ಅಯವ್ಯಯ ಯೋಜನೆಯಡಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಅಥವಾ ಪತ್ರಿಕೋದ್ಯಮ ಪದವಿ ಪಡೆದ ಮಹಿಳಾ ಅಭ್ಯರ್ಥಿಗಳಿಂದ ಕ್ಷೇತ್ರ ಪ್ರಚಾರ ಹಾಗೂ ಮಾಧ್ಯಮ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಯು ಕರ್ನಾಟಕ ರಾಜ್ಯದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ, ವಿದ್ಯುನ್ಮಾನ ಮಾಧ್ಯಮದಲ್ಲಿ ಪದವಿ ಅಥವಾ ಸ್ನಾತಕ್ಕೋತ್ತರ ಪದವಿ ಪಡೆದಿರಬೇಕು. ಗರಿಷ್ಠ 40 ವರ್ಷ ವಯೋಮಿತಿಯಲ್ಲಿರಬೇಕು.

ರಾಜ್ಯ ಸರ್ಕಾರದ ಮಹಿಳಾ ಉದ್ದೇಶಿತ 2019-20ನೇ ಸಾಲಿನ ಆಯವ್ಯಯದ ಕಾರ್ಯಕ್ರಮದಡಿ 9 ತಿಂಗಳ ಅವಧಿಗೆ ಈ ಅಪ್ರೆಂಟಿಸ್ ತರಬೇತಿ ನೀಡಲಾಗುತ್ತಿದ್ದು ಪ್ರತಿ ತಿಂಗಳು 15 ಸಾವಿರ ರೂ. ಗೌರವಧನ ನೀಡಲಾಗುವುದು.

ಅರ್ಜಿ ಸಲ್ಲಿಸುವ ಮಹಿಳಾ ಅಭ್ಯರ್ಥಿಗಳು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಅಥವಾ ಪದವಿಯ ಜತೆಗೆ ಕಂಪ್ಯೂಟರ್ ಜ್ಞಾನ, ಕನ್ನಡ ಭಾಷಾ ಜ್ಞಾನ ಕಡ್ಡಾಯವಾಗಿ ಇರಬೇಕು. ಅರ್ಜಿಯೊಂದಿಗೆ ಈ ಎಲ್ಲಾ ದಾಖಲೆಗಳನ್ನು ಅಡಕವಿರಿಸಿ ಲಕೋಟೆ ಮೇಲ್ಭಾಗದಲ್ಲಿ `2019-20ನೇ ಸಾಲಿನ ಮಹಿಳಾ ಉದ್ದೇಶಿತ ಆಯವ್ಯಯ ಯೋಜನೆಯಡಿ ಪತ್ರಿಕೋದ್ಯಮ ಅಪ್ರೆಂಟಿಸ್ ತರಬೇತಿಗೆ ಅರ್ಜಿ’ ಎಂದು ಬರೆದಿರಬೇಕು.

ಇಬ್ಬರು ಮಹಿಳಾ ಅಪ್ರೆಂಟಿಸ್‍ಗಳನ್ನು ಮೆರಿಟ್ ಆಧಾರದಲ್ಲಿ ಆಯ್ಕೆ ಸಮಿತಿ ಆಯ್ಕೆ ಮಾಡಲಿದ್ದು ಉತ್ತರ ಕನ್ನಡ ಜಿಲ್ಲೆಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಅಪ್ರೆಂಟಿಸ್‍ಗೆ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ ಹಾಗೂ ತರಬೇತಿ ಅವಧಿಯಲ್ಲಿ ಬೇರೆ ಯಾವುದೇ ವೃತ್ತಿ ಮಾಡುವಂತಿಲ್ಲ. ಒಂದೊಮ್ಮೆ ತರಬೇತಿಯಿಂದ ಮಧ್ಯದಲ್ಲೇ ಬಿಟ್ಟು ಹೋದರೆ ಮೂಲ ದಾಖಲೆಗಳನ್ನು ಅವಧಿ ಪೂರ್ಣಗೊಳ್ಳುವವರೆಗೆ ವಾಪಸು ಕೊಡುವುದಿಲ್ಲ ಹಾಗೂ ತರಬೇತಿಯು 9 ತಿಂಗಳ ತಾತ್ಕಾಲಿಕ ಅವಧಿಯದ್ದಾಗಿದ್ದು ಯಾವುದೇ ಕಾರಣಕ್ಕೂ ಮುಂದುವರಿಸುವುದಿಲ್ಲ ಹಾಗೂ ಇಲಾಖೆ ವಿಧಿಸಬಹುದಾದ ಎಲ್ಲ ಷರತ್ತುಗಳಿಗೆ ಬದ್ದರಿರಬೇಕು.

ಅರ್ಜಿ ಸಲ್ಲಿಸಲು 2019 ಜುಲೈ 5 ಕೊನೆಯ ದಿನವಾಗಿದ್ದು ನಿಗದಿತ ಅರ್ಜಿ ನಮೂನೆಗಳಿಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾ ಭವನ, ಕಾರವಾರ, ಉತ್ತರ ಕನ್ನಡ ಜಿಲೆ,್ಲ ದೂರವಾಣಿ 08382 226344, 9480841234 ಇಲ್ಲಿ ಸಂಪರ್ಕಿಸಬಹುದು.

Read These Next

ಅಂಜುಮನ್ ಶಿಕ್ಷಣ ಸಂಸ್ಥೆಯ ಸುಪುತ್ರಿ ಶಿರಾಲಿಯ ಡಾ. ಅನಿಸಾ ಶೇಖ್ ಗೆ ದಂತ ವೈದ್ಯಕೀಯದಲ್ಲಿ ಪುರಸ್ಕಾರ

ಭಟ್ಕಳ: ಪ್ರತಿಷ್ಟಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ‘ದುಖ್ತರ್-ಎ-ಅಂಜುಮನ್(ಅಂಜುಮನ್ ಪುತ್ರಿ) ಪ್ರಶಸ್ತಿ ...

ಅಂಜುಮನ್ ಶಿಕ್ಷಣ ಸಂಸ್ಥೆಯ ಸುಪುತ್ರಿ ಶಿರಾಲಿಯ ಡಾ. ಅನಿಸಾ ಶೇಖ್ ಗೆ ದಂತ ವೈದ್ಯಕೀಯದಲ್ಲಿ ಪುರಸ್ಕಾರ

ಭಟ್ಕಳ: ಪ್ರತಿಷ್ಟಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ‘ದುಖ್ತರ್-ಎ-ಅಂಜುಮನ್(ಅಂಜುಮನ್ ಪುತ್ರಿ) ಪ್ರಶಸ್ತಿ ...