ಕಾರವಾರ: ಬೋಟ್ ಇಂಜನ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ

Source: S O News | By I.G. Bhatkali | Published on 6th February 2023, 5:28 PM | Coastal News |

ಕಾರವಾರ : ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ  30 ದಿನಗಳ ಕಾಲ ಬೋಟ್ ಇಂಜನ್ ರಿಪೇರಿ ತರಬೇತಿಯನ್ನು ಹಮ್ಮಿಕೊಂಡಿದೆ. 

ಆಸಕ್ತ 18 ರಿಂದ 45 ವರ್ಷದೊಳಗಿನ ಯುವಕ, ಯುವತಿಯರು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ,ವಿರ್ದ್ಯಾರ್ಹತೆ,ಇತ್ಯಾದಿ ವಿವರಗಳೊಂದಿಗೆ  ಫೆ 20 ರೊಳಗೆ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆಗೆ ಪೋನ್ ಮೂಲಕ ವಿವರ ನೀಡಿ ತರಬೇತಿಗೆ ನೋಂದಾಯಿಸಿಕೊಳ್ಳಬಹುದು.

ತರಬೇತಿಯು ಊಟ ಮತ್ತು ವಸತಿಯೊಂದಿಗೆ ಉಚಿತವಾಗಿರುತ್ತದೆ. ತರಬೇತಿಯೊಂದಿಗೆ ಸಾಫ್ಟ್ ಸ್ಕೀಲ್ಸ್, ಯೋಗ ತರಬೇತಿ, ಬ್ಯಾಂಕಿಂಗ್, ಸಾರಕಾರಿ ಯೋಜನೆಗಳು ಮತ್ತು ಯೋಜನಾ ವರದಿಗಳ ತಯಾರಿಕೆಗಳ ಬಗ್ಗೆ ಮಾಹಿತಿ ನೀಡಲಾಗುವುದು. 

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ  9986020262, 9482188780 ಗೆ ಸಂಪರ್ಕಿಸಿ ಎಂದು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ ಎ.೩-೧೫ ಚಿಣ್ಣರ ಮೇಳ-೨ ಬೇಸಿಗೆ ಶಿಬಿರ; ಭಿತ್ತಿಪತ್ರ ಬಿಡುಗಡೆ

ಭಟ್ಕಳ: ಎ.೩ರಿಂದ ೧೫ ರ ವರೆಗೆ ಸಾಗರ ರಸ್ತೆಯ ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ ನಡೆಯುವ ಚಿಣ್ಣರ ಮೇಳ-೨ ಬೇಸಿಗೆ ಶಿಬಿರದ ಭಿತ್ತಿವನ್ನು ...