ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯಕ್ಕೆ ಅರ್ಜಿ ಆಹ್ವಾನ

Source: sonews | By Staff Correspondent | Published on 20th July 2019, 5:45 PM | Coastal News | Don't Miss |

ಕಾರವಾರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಕಾರವಾರಕ್ಕೆ 2019-20ನೇ ಸಾಲಿಗಾಗಿ ಪ್ರವೇಶ ಬಯಸುವ ಪಿ.ಯು.ಸಿ, ಡಿಗ್ರಿ, ಡಿಪ್ಲೋಮಾ, ಐ.ಟಿ.ಐ ಇತ್ಯಾದಿ ಕೋರ್ಸುಗಳಲ್ಲಿ ಓದುತ್ತಿರುವ ಮೆಟ್ರಿಕ್ ನಂತರದ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. 

ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳ ಕಚೇರಿ, ತೆಲಿರಾಮಜಿ ರಸ್ತೆ, ಕಾರವಾರ  ಹಾಗೂ ತಾಲ್ಲೂಕಾ ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಚೇರಿ, ಕಾರವಾರ ಇವರಿಂದ ಉಚಿತವಾಗಿ ಪಡೆದು ಭರ್ತಿ ಮಾಡಿದ  ಅರ್ಜಿಗಳನ್ನು ದಿನಾಂಕ 31-07-2019ರ ಒಳಗಾಗಿ ಸಂಬಂಧಪಟ್ಟ ತಾಲೂಕಿನ ವಿಸ್ತರಣಾಧಿಕಾರಿಗಳ ಕಚೇರಿಗೆ ಸಲ್ಲಿಸತಕ್ಕದ್ದು.

ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಬಾಂಡಿಶಿಟ್ಟಾ , ಕಾರವಾರ ಇಲ್ಲಿ ಒಟ್ಟು 50 ವಿದ್ಯಾರ್ಥಿಗಳ ಸಂಖ್ಯೆಯ ನಿಲಯವಾಗಿದ್ದು 37 ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ಹಾಗೂ 13 ಇತರೆ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗುವುದು.

ಅರ್ಜಿ ಹಾಕುವ ವಿದ್ಯಾರ್ಥಿಗಳು 2018-19 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಅಂಕಪಟ್ಟಿಯ ದೃಢೀಕರಣ ಮಾಡಿದ ನಕಲು ಪ್ರತಿಯನ್ನು ಅರ್ಜಿಯ ಜೊತೆಗೆ ಲಗ್ತು ಇಡಬೇಕು. 2018-19 ನೇ ಸಾಲಿನಲ್ಲಿ ಇಲಾಖಾ ವಸತಿ ನಿಲಯದಲ್ಲಿದ್ದು, ಉತ್ತಮ ಹಾಜರಾತಿ ಮತ್ತು ನಡತೆ ಉಳ್ಳವರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು.

ಪ್ರವರ್ಗ -1 ಕ್ಕೆ ಸೇರಿದವರು ನಮೂನೆ “ಇ” ದಲ್ಲಿ ತಹಸೀಲ್ದಾರರಿಂದ ಪಡೆದ ಜಾತಿ  ಮತ್ತು ಆದಾಯ ಪ್ರಮಾಣ ಪತ್ರವನ್ನು ಲಗತ್ತಿಸಬೇಕು. (ಆದಾಯದ ಮಿತಿ ರೂ.1.00 ಲಕ್ಷ.) ಪ್ರವರ್ಗ 2ಎ, 2ಬಿ, 3ಎ, 3ಬಿ ಗೆ ಸೇರಿದ ವಿದ್ಯಾರ್ಥಿಗಳು ನಮೂನೆ ಎಫ್ ನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಲಗತ್ತಿಸಬೇಕು (ಆದಾಯ ಮಿತಿ ರೂ.44500=00) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳು ತಹಶೀಲ್ದಾರರಿಂದ ಪಡೆದ ಜಾತಿ ಪ್ರಮಾಣ ಪತ್ರವನ್ನು ಲಗ್ತ ಇಡತಕ್ಕದ್ದು. (ಆದಾಯ ಮಿತಿ ಪ.ಜಾತಿ ಹಾಗೂ ಪ.ಪಂ ರೂ.2.00ಲಕ್ಷ).

ಆಯ್ಕೆ ಸಮಿತಿಯಿಂದ ಆಯ್ಕೆಯಾದ ವಿದ್ಯಾರ್ಥಿಗಳು ಪ್ರವೇಶ ಪಡೆಯುವಾಗ ರೂ.200=00 (ಎರಡು ನೂರು ರೂಪಾಯಿಗಳು ಮಾತ್ರ) ಎಚ್ಚರಿಕೆ ಹಣವನ್ನು ತುಂಬತಕ್ಕದ್ದು, ಸದ್ರಿ ಹಣವನ್ನು ಶೈಕ್ಷಣಿಕ ವರ್ಷ ಪೂರ್ತಿಗೊಳಿಸಿದ ವಿದ್ಯಾರ್ಥಿಗಳಿಗೆ ಮಾತ್ರ ವಾಪಸ್ ನೀಡಲಾಗುವುದು. ಪ್ರವೇಶ ಹೊಂದಿದ ವಿದ್ಯಾರ್ಥಿಯು ವರ್ಷ ಪೂರ್ತಿ (ಶೈಕ್ಷಣಿಕ ವರ್ಷ) ನಿಲಯದಲ್ಲಿರತಕ್ಕದ್ದು. ಮಧ್ಯದಲ್ಲಿ ನಿಲಯ ಬಿಟ್ಟು ಹೋದಲ್ಲಿಎಚ್ಚರಿಕೆ ಹಣವನ್ನು ಪೂರ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದಲ್ಲದೇ ವಸತಿ ನಿಲಯದಲ್ಲಿದ್ದ ಅವಧಿಗೆ ಖರ್ಚಾದ ಹಣವನ್ನು ವಿಧ್ಯಾರ್ಥಿಯಿಂದ ವಸೂಲು ಮಾಡಲಾಗುವುದು. 3 ಸ್ಟ್ಯಾಂಪ್ ಸೈಜ್ ಅಳತೆಯ ಭಾವಚಿತ್ರ ಲಗತ್ತಿಸುವುದು. ವಸತಿ ನಿಲಯದಿಂದ ವಿಧ್ಯಾರ್ಥಿಯ ಸ್ವಂತ ಸ್ಥಳಕ್ಕೆ ಇರುವ ದೂರವನ್ನು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಯವರಿಂದ ಪ್ರಮಾಣ ಪತ್ರ ಒದಗಿಸುವುದು. ವಾಸಸ್ಥಳಕ್ಕೂ ಹಾಗೂ ವಸತಿ ನಿಲಯಕ್ಕೂ ಇರುವ ಅಂತರ 5 ಕಿ.ಮೀ ಗಿಂತ ಹೆಚ್ಚಾಗಿರಬೇಕು. ಪ್ರವೇಶ ಅರ್ಹತೆ ಇರುವ ವಿದ್ಯಾರ್ಥಿಗಳಲ್ಲಿ ಪ್ರತಿಶತ 75 ಅಲ್ಪಸಂಖ್ಯಾತರ (ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ) ಹಾಗೂ ಪ್ರತಿಶತ 25 ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲಾಗುವುದು ಎಂದು ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Read These Next

ಕಾರು ಪಲ್ಟಿ : ಪ್ರಯಾಣಿಕರು ಗಾಯ

ಮುಂಡಗೋಡ : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಸೇರಿ 6 ಜನರು ಗಾಯಗೊಂಡ ಘಟನೆ ತಾಲೂಕಿನ ...

ವಿದ್ಯೆ ಮತ್ತು ಡಿಗ್ರಿಗಳಿಂದ ಶಾಂತಿ ನೆಮ್ಮದಿ ದೊರೆಯದು-ಬ್ರಹ್ಮಾನಂದಾ ಸರಸ್ವತಿ ಸ್ವಾಮಿಜಿ

ಭಟ್ಕಳ: ವಿದ್ಯೆಯು ಸಂಸ್ಕಾರಯುತ ಮಕ್ಕಳನ್ನು ಸಮಾಜಕ್ಕೆ ಕೊಡುವಂತಾದಾಗ ಮಾತ್ರ ಆ ವಿದ್ಯೆಗೆ ಬೆಲೆ ಬರುತ್ತದೆ. ಆದರೆ ಇಂದಿನ ವಿದ್ಯೆ, ...

ಕಾರು ಪಲ್ಟಿ : ಪ್ರಯಾಣಿಕರು ಗಾಯ

ಮುಂಡಗೋಡ : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಸೇರಿ 6 ಜನರು ಗಾಯಗೊಂಡ ಘಟನೆ ತಾಲೂಕಿನ ...

ವಿದ್ಯೆ ಮತ್ತು ಡಿಗ್ರಿಗಳಿಂದ ಶಾಂತಿ ನೆಮ್ಮದಿ ದೊರೆಯದು-ಬ್ರಹ್ಮಾನಂದಾ ಸರಸ್ವತಿ ಸ್ವಾಮಿಜಿ

ಭಟ್ಕಳ: ವಿದ್ಯೆಯು ಸಂಸ್ಕಾರಯುತ ಮಕ್ಕಳನ್ನು ಸಮಾಜಕ್ಕೆ ಕೊಡುವಂತಾದಾಗ ಮಾತ್ರ ಆ ವಿದ್ಯೆಗೆ ಬೆಲೆ ಬರುತ್ತದೆ. ಆದರೆ ಇಂದಿನ ವಿದ್ಯೆ, ...