ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

Source: so news | By Manju Naik | Published on 24th June 2019, 9:15 PM | Coastal News | Don't Miss |

ಕಾರವಾರ : ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮವು 2019-20ನೇ ಸಾಲಿಗೆ ಸ್ವಯಂ ಉದ್ಯೋಗ ಸಾಲ, ಪಂಚವೃತ್ತಿ ಸಾಲ, ಮೈಕ್ರೋಕ್ರೆಡಿಟ್, ಅರಿವು ಶೈಕ್ಷಣಿಕ ಸಾಲ ಹಾಗೂ ಗಂಗಾ ಕಲ್ಯಾಣ  ಯೋಜನೆಯಡಿ ಸೌಲಭ್ಯ ಪಡೆಯಲು ಇಚ್ಚಿಸುವವರಿಂದ ಅರ್ಜಿಯನ್ನು ಅಹ್ವಾನಿಸಿದೆ.   
ಅರ್ಜಿ ನಮೂನೆಯನ್ನು ನಿಗಮದ ಜಿಲ್ಲಾ ವ್ಯವಸ್ಥಾಪಕರು ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ, ಹೈ ಚರ್ಚ ಹತ್ತಿರ, ಕಾರವಾರ ಅಥವಾ ಆಯಾ ತಾಲೂಕಿನ ಹಿಂದುಳಿದ ವರ್ಗಗಳ ವಿಸ್ತಿರ್ಣಾಧಿಕಾರಿಗಳ ಕಛೇರಿಯಲ್ಲಿ ಪಡೆದು ಅಗತ್ಯ ದಾಖಲೆಗಳೊಂದಿಗೆ ದಿನಾಂಕ: 22/07/2019 ರೊಳಗೆ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿ ಕಾರವಾರದ ವಿಳಾಸಕ್ಕೆ ಸಲ್ಲಿಸುವುದು. 
ನಿಗದಿತ ನಮೂನೆಯ ಅರ್ಜಿಯೊಂದಿಗೆ ಫೋಟೋ, ರೇಷನಕಾರ್ಡ ಪ್ರತಿ, ಆಧಾರ ಪ್ರತಿ, ಜಾತಿ ಆದಾಯ ಪ್ರತಿ , ಬ್ಯಾಂಕ ಪಾಸ್‍ಬುಕ್ ಪ್ರತಿಯೊಂದಿಗೆ ಸಲ್ಲಿಸಬೇಕಾಗಿರುತ್ತದೆ. ಅರ್ಜಿದಾರರ ವಯಸ್ಸು 18 ರಿಂದ 55ರ ಮಿತಿಯಲ್ಲಿರಬೇಕು. ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶದವರಿಗೆ 40.000/- ರೂಗಳ ಒಳಗೆ ಹಾಗೂ ಪಟ್ಟಣ ಪ್ರದೇಶದವರಿಗೆ 55.000/- ರೂ. ಕ್ಕಿಂತ ಕಡಿಮೆ ಇರಬೇಕು. 
ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿಯ ದೂರವಾಣಿ ಸಂಖ್ಯೆ : 08382-223229 ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

 

Read These Next