ನಾಗರಿಕ ಸೇವೆಗಳ ತರಬೇತಿಗಾಗಿ ಮತೀಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ                                                 

Source: sonews | By Staff Correspondent | Published on 3rd August 2020, 4:34 PM | Coastal News | Don't Miss |

ಕಾರವಾರ : PUE/ICSE/CBSE   ಮಂಡಳಿಗಳು ಶೈಕ್ಷಣಿಕ ವರ್ಷ 2019-20ರ ಅವಧಿಯಲ್ಲಿ ನಡೆಸಿರುವ 2ನೇ ಪಿ.ಯು.ಸಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರುವ ಕಲಾ, ವಿಜ್ಞಾನ ಮತ್ತು ಕಾಮರ್ಸ ಮತೀಯ ಅಲ್ಪಸಂಖ್ಯಾತರ (ಮುಸ್ಲಿಂ, ಕ್ರಿಶ್ಚಿಯನ್ ,ಜೈನ್, ಬೌದ್ಧ, ಪಾರ್ಸಿ, ಸಿಖ್) ಸಮುದಾಯದ ವಿದ್ಯಾರ್ಥಿಗಳಿಗೆ ನಾಗರಿಕ ಸೇವೆಗಳ ತರಬೇತಿ (B.A & B.Com with IAS/KAS Coaching) ಸಂಯೋಜಿತ ಪದವಿ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನಿಸಿರುವಂತೆ, ಆನ್ ಲೈನ್ ಮೂಲಕ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. 

ಪ್ರತಿಭೆ ಆಧಾರದ ಮೇಲೆ ಮೊದಲ 50 ವಿದ್ಯಾರ್ಥಿಗಳನ್ನು ಮಾತ್ರ ಕಿರುಪಟ್ಟಿ ಮಾಡಲಾಗುವುದು. ವಿದಾರ್ಥಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ವಿದಾರ್ಥಿಯ ಕುಟುಂಬದ ವಾರ್ಷಿಕ ಆದಾಯವು ವರ್ಗ 1 ಕ್ಕೆ ರೂ.4.5 ಲಕ್ಷ ಮತ್ತು ಇತರರಿಗೆ 3.5ಲಕ್ಷ ಮೀರಿರಬಾರದು ವಿದಾರ್ಥಿಯು 2  ನೇ ಪಿ.ಯು.ಸಿ ಪರೀಕ್ಷೆಗಳಲ್ಲಿ (ಕಲಾ ,ವಿಜ್ಞಾನ ಮತ್ತು ಕಾಮರ್ಸ ವಿದ್ಯಾರ್ಥಿಗಳಿಗೆ ಮಾತ್ರ) ತೇರ್ಗಡೆಯಾಗಿರಬೇಕು ಉಚಿತ ಊಟ, ವಸತಿ ಮತ್ತು ಇತರೇ ಮೂಲಭೂತ ಸೌಲಭ್ಯಗಳನ್ನು ಒಳಗೊಂಡಂತೆ ಸಂಪೂರ್ಣ ಸ್ಥಾನಿಕ ವಾಸಿ ಕೋರ್ಸ್ ಆಗಿರುವುದು.

ಮೂಲ ಮತ್ತು ದೃಢೀಕೃತ ಎಸ್.ಎಸ್.ಎಲ್.ಸಿ, ಪ್ರಥಮ ಪಿ.ಯು.ಸಿ ಹಾಗೂ ದ್ವಿತೀಯ ಪಿ.ಯು.ಸಿ ಅಂಕಪಟ್ಟಿ. ತಹಶೀಲ್ದಾರರಿಂದ ಪಡೆದ ಮೂಲ ಮತ್ತು ದೃಢೀಕೃತ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ದ್ವಿತೀಯ ಪಿಯುಸಿ ಹಾಗೂ ಎಸ್.ಎಸ್.ಎಲ್.ಸಿ ಯ ವರ್ಗಾವಣೆ ಪ್ರಮಾಣ ಪತ್ರ.
ಬಿ.ಪಿ.ಎಲ್ /ರೇಷನ್ ಕಾರ್ಡ್. ಇತ್ತೀಚಿನ 2 ಭಾವಚಿತ್ರ (ಸ್ವಯಂ ದೃಢೀಕೃತ). ಪೂರ್ಣ ವಿಳಾಸವನ್ನು (ಗ್ರಾಮ/ತಾಲ್ಲೂಕು/ಜಿಲ್ಲಾ) ಪಿನ್‍ಕೋಡ್ ಜೊತೆಗೆ ಸಲ್ಲಿಸುವುದು. ಮೂಲ ಮತ್ತು ದೃಢೀಕೃತ ಆಧಾರ್‍ಕಾರ್ಡ್.

ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಆನ್‍ಲೈನ್‍ನಲ್ಲಿ (https://gokdom.kar.nic.in/)   ನೋಂದಾಯಿಸಿ Pಡಿiಟಿಣ ತೆಗೆದುಕೊಳ್ಳತಕ್ಕದ್ದು, ಆಭ್ಯರ್ಥಿಗಳ ಆಂತಿಮ ಆಯ್ಕೆ ಮತ್ತು ಕೋರ್ಸ್‍ನ ಪ್ರಾರಂಭವು ಕರ್ನಾಟಕ ಸರ್ಕಾರದಿಂದ ಟೆಂಡರ್‍ನ ಅಂಗೀಕಾರವಾಗುವುದಕ್ಕೆ ಒಳಪಟ್ಟಿದ್ದು,  ಅರ್ಜಿ ಸಲ್ಲಿಸಲು ಅಗಸ್ಟ್ 31 ಕೊನೆಯ ದಿನವಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read These Next

ಸೌದಿ ಅರೇಬಿಯಾದ ತಾಯಿಫ್‌ನಲ್ಲಿ ಕಾರು ಅಪಘಾತ ಉಡುಪಿ ಜಿಲ್ಲೆಯ ಯುವಕನ ಸಾವು ಮತ್ತೊಬ್ಬ  ಗಂಭೀರ

ಭಟ್ಕಳ:  ಸೌದಿ ಅರೇಬಿಯಾದ ತಾಯಿಫ್‌ ಎಂಬಲ್ಲಿ ಬುಧವಾರ ನಡೆದ ರಸ್ತೆ ಅಪಘಾತದಲ್ಲಿ  ಉಡುಪಿ ಜಿಲ್ಲೆಯ ಗಂಗೋಳಿ ನಿವಾಸಿಗಳಾದ ಮುಹಮ್ಮದ್ ...