ಕಾರವಾರ: ಅರ್ಜುನ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

Source: S.O. News service | By S O News | Published on 17th June 2021, 6:19 PM | Coastal News |

ಕಾರವಾರ: ಕ್ರೀಡಾ ಮಂತ್ರಾಲಯದಿಂದ 2021 ನೇ ಸಾಲಿಗೆ ಕ್ರೀಡೆಯಲ್ಲಿ ಅತ್ಯುನ್ನತ ಸಾಧನೆ ಮಾಡಿರುವ ಕ್ರೀಡಾಪಟುಗಳಿಂದ ಅರ್ಜುನ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ಜೂನ್ 21 ರೊಳಗಾಗಿ ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಮಂತ್ರಾಲಯಕ್ಕೆ ಇ ಮೇಲ್ ಮೂಲಕ ನೇರವಾಗಿ ಸಲ್ಲಿಸಬೇಕು. ಇ ಮೇಲ್ ವಿಳಾಸ Surendra.yadav(at)nic.in girnish.kumar(at)nic.in) ಆಗಿರುತ್ತದೆ. ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಯನ್ನು ಕಾರವಾರ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿಯಿಂದ ಪಡೆಯಬಹುದಾಗಿದೆ ಎಂದು ಸಹಾಯಕ ನಿರ್ದೇಶಕರಾದ ಗಿ. ಗಾಯತ್ರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next