ಕಾರ್ಮಿಕರಿಗೆ ಘೋಷಿಸಿದ ಆರ್ಥಿಕ ಧನಸಹಾಯ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ

Source: sonews | By Staff Correspondent | Published on 29th July 2020, 4:24 PM | Coastal News |

ಶಿರಸಿ: ಪ್ರಸಕ್ತ ವರ್ಷದ ಪ್ರಾರಂಭದಲ್ಲಿ ಕೋರೋನಾ ಕೋವಿಡ್-19 ಸಂದರ್ಭದಲ್ಲಿ ಕಾರ್ಮಿಕರಿಗೆ ಆರ್ಥೀಕ ಸಹಾಯ ನೀಡುವ ಉದ್ದೇಶದಿಂದ ರಾಜ್ಯ ಸರಕಾರವು ಪ್ರತಿ ಕಾರ್ಮಿಕರಿಗೂ ರೂಪಾಯಿ 5 ಸಾವಿರ ನೀಡಲು ನಿರ್ಧರಿಸಿದ್ದು, ಸರಕಾರ ಘೋಷಣೆ ಮಾಡಿ 4 ತಿಂಗಳಾದರೂ ಶಿರಸಿ ತಾಲೂಕಿನಲ್ಲಿ ಸಾವಿರಾರು ಕಾರ್ಮಿಕರಿಗೆ ಆರ್ಥೀಕ ಸಹಾಯಧನ ಇಂದಿನವರೆಗೂ ತಲುಪದೇ ಇರುವುದರಿಂದ ಅತೀ ಶೀಘ್ರದಲ್ಲಿ ಆರ್ಥೀಕ ಸಹಾಯ ಧನ ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿಗೆ ಕಾರ್ಮಿಕ ಮುಖಂಡರು ಅಗ್ರಹಿಸಿದ್ದಾರೆ.

ಶಿರಸಿ ತಾಲೂಕಿನ ವಿವಿಧ ಕಾರ್ಮಿಕ ಸಂಘಟನೆಯ ಪ್ರಮುಖರು ಇಂದು ಸ್ಥಳೀಯ ತಹಶೀಲದಾರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಶಿರಸಿ ತಾಲೂಕಿನಲ್ಲಿ ಮಾರ್ಚ 29,2020 ರವರೆಗೆ ಕಾರ್ಮಿಕ ಕಲ್ಯಾಣ ಮಂಡಳಿಗೆ ನೋಂದಾಯಿತವಾಗಿರುವ 2524 ಕಾರ್ಮಿಕರಿದ್ದು ಇಂದಿನವರೆಗೂ ಕೇವಲ 788 ಕಾರ್ಮಿಕರಿಗೆ ಮಾತ್ರ ಸಹಾಯಧನ ತಲುಪಿದ್ದು ಇರುತ್ತದೆ ಎಂದು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.

ಕೋರೋನಾ ಕೋವಿಡ್-19 ಸಂಕಷ್ಟದಿಂದ ಇಗಾಗಲೇ ಸಾಕಷ್ಟು ಆರ್ಥೀಕ ತೊಂದರೆ ಅನುಭವಿಸುತ್ತಿದ್ದು ನೋಂದಾಯಿತ ಕಾರ್ಮಿಕರಿಗೆ ಸರಕಾರ ಘೋಷಿಸಿದ ಆರ್ಥೀಕ ಸಹಾಯಧನ ಶೀಘ್ರ ಬಿಡುಗಡೆ ಮಾಡಿ ಕಾರ್ಮಿಕರಿಗೆ ನೇರವಾಗಬೇಕೆಂದು ಮನವಿಯಲ್ಲಿ ಕಾರ್ಮಿಕ ಮುಖಂಡರು ವಿನಂತಿಸಿಕೊಂಡಿದ್ದಾರೆ. 

ಮನವಿ ಕೋಡುವ ಸಂದರ್ಭದಲ್ಲಿ ಕಾರ್ಮಿಕ ಮುಖಂಡರಾದ ಜುಜೆ ಬಾಬು ಡಿಸೋಜಾ, ಅಶೋಕ ಪಡ್ತಿ, ರಾಜು, ಕಮಲಾಕರ ಆಚಾರಿ, ನಂದನ ಆಚಾರಿ, ಕೃಷ್ಣ  ಮುಂತಾದವರು ಉಪಸ್ಥಿತರಿದ್ದರು.
               
 

Read These Next