ಕೋವಿಡ್ ಲಸಿಕೆ ಕಡ್ಡಾಯದ ವಿರುದ್ಧ ಯೂರೋಪ್ ರಾಷ್ಟ್ರಗಳಲ್ಲಿ ಭಾರೀ ಪ್ರತಿಭಟನೆ; ಫ್ರಾನ್ಸ್, ಜರ್ಮನಿ, ಆಸ್ಟಿಯಾ, ಇಟಲಿಗಳಲ್ಲಿ ಬೀದಿಗಿಳಿದ ಜನತೆ

Source: VB | By I.G. Bhatkali | Published on 10th January 2022, 8:56 AM | Global News |

ಹೊಸದಿಲ್ಲಿ: ಕೋವಿಡ್ ಲಸಿಕೆ ಕಡ್ಡಾ ಯಗೊಳಿಸಿರುವುದನ್ನು ವಿರೋಧಿಸಿ ಪುಮ ಯುರೋಪ್‌ನಾದ್ಯಂತ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಲಸಿಕೆ ತೆಗೆದುಕೊಳ್ಳದವರ ಹಕ್ಕುಗಳನ್ನು ನಿರ್ಬಂಧಿಸುವ ಸರಕಾರದ ಯೋಜನೆಗಳನ್ನು ವಿರೋಧಿಸಿ ಫ್ರಾನ್ಸ್‌ನಲ್ಲಿ 1 ಲಕ್ಷಕ್ಕೂ ಅಧಿಕ ಜನರು ರಾಲಿ ನಡೆಸಿದ್ದಾರೆ.

ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ ಪ್ರತಿ ಭಟನಾಕಾರರು (ಹೆಚ್ಚಿನವರು ಮಾಸ್ ಧರಿಸಿರಲಿಲ್ಲ) ಮಳೆ, ಚಳಿ ಲೆಕ್ಕಿಸದೆ ಶನಿವಾರ ರಾಲಿ ನಡೆಸಿದರು. ಅಲ್ಲದೆ ಅವರು 'ಸತ್ಯ', 'ಸ್ವಾತಂತ್ರ್ಯ' ಹಾಗೂ 'ಲಸಿಕೆ ಪಾಸ್‌ಗೆ ಧಿಕ್ಕಾರ'      ಮೊದಲಾದ ಪ್ರದರ್ಶನಾ ಫಲಕಗಳನ್ನು ಹಿಡಿದುಕೊಂಡಿದ್ದರು.

ಲಸಿಕೆ ಪಡೆದುಕೊಳ್ಳದವರ ಬದುಕು ಹೇಗೆ ದುಸ್ತರವಾಗಿ ಮಾಡುತ್ತೇನೆಂದರೆ, ಅವರು ಕೊನೆಗೆ ಲಸಿಕೆ ತೆಗೆದುಕೊಳ್ಳಬೇಕಾದ ದುಸ್ಥಿತಿ ಬರುತ್ತದೆ ಎಂದು ಕಳೆದ ವಾರ ಹೇಳಿಕೆ ನೀಡುವ ಮೂಲಕ ಕೋಲಾಹಲಕ್ಕೆ ಕಾರಣ ವಾಗಿದ್ದ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಅವರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡಿದ್ದಾರೆ.

ಫ್ರಾನ್ಸ್‌ನಲ್ಲಿ ಆಹಾರ ಸೇವನೆ ಸ್ಥಳಕ್ಕೆ ಆಗಮಿ ಸುವ, ಅಂತರ್‌ನಗರ ರೈಲುಗಳಲ್ಲಿ ಪ್ರಯಾ ಣಿಸುವ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗ ಳಲ್ಲಿ ಪಾಲ್ಗೊಳ್ಳುವ ಮುನ್ನ ಕೋವಿಡ್ ವಿರುದ್ಧ ಸಂಪೂರ್ಣ ಲಸಿಕೆ ತೆಗೆದುಕೊಂಡಿರುವು ದನ್ನು ಜನರು ಸಾಬೀತುಪಡಿಸಬೇಕೆಂಬ ಸರಕಾರದ ವಿಧೇಯಕಕ್ಕೆ ದೇಶದ ಕೆಳಮನೆ ಅನುಮೋದನೆ ನೀಡಿದ ಬೆನ್ನಲ್ಲೇ ಶುಕ್ರ ವಾರ ಒಂದೇ ದಿನ 300,000ಕ್ಕೂ ಅಧಿಕ ಕೋವಿಡ್ ಪ್ರಕರಣಗಳು ದಾಖಲಾಗುತ್ತಿರುವಂತೆ ಈ ಪ್ರತಿಭಟನೆ ನಡೆದಿದೆ.

ಜನವರಿ 15ರೊಳಗೆ ಹೊಸ ನಿಯಮ ಗಳನ್ನು ಅನುಷ್ಠಾನಗೊಳಿಸಲು ನಿರೀಕ್ಷಿಸಿದೆ. ಆದರೆ ಸೆನೆಟ್‌ನಲ್ಲಿರುವ ಶಾಸಕರು ಈ ಪ್ರಕ್ರಿ ಯೆಯನ್ನು ವಿಳಂಬ ಮಾಡಬಹುದು ಎಂದು ಸರಕಾರ ತಿಳಿಸಿದೆ.

ಫ್ರಾನ್ಸ್‌ನಾದ್ಯಂತ ಶನಿವಾರ ನಡೆದ ಪ್ರತಿಭಟನೆಯಲ್ಲಿ 105,200 ಜನರು ಪಾಲ್ಗೊಂಡಿದ್ದಾರೆ. ಪ್ಯಾರೀಸ್ ನಗರವೊಂದರಲ್ಲೇ 18,000 ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. 10 ಮಂದಿ ಪ್ರತಿಭಟನ ಕಾರರನ್ನು ಬಂಧಿಸಲಾಗಿದೆ. ಮೂವರು ಅಧಿಕಾರಿಗಳಿಗೆ ಗಾಯಗಳಾಗಿ વ્ર ವೆ ಎಂದು ಪೊಲೀಸರು ವರದಿ ಮಾಡಿದ್ದಾರೆ ಎಂದು ಫ್ರಾನ್ಸ್‌ನ ಗೃಹ ಸಚಿವಾಲಯ ತಿಳಿಸಿದೆ.

ಇನ್ನೊಂದೆಡೆ 24 ಮಂದಿಯನ್ನು ಬಂಧಿಸಲಾಗಿದೆ ಹಾಗೂ 7 ಪೊಲೀ ಸರಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ ಎಂದು ಸಚಿವಾಲಯ ತಿಳಿಸಿದೆ.

ಟೌಲೋನ್‌ನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಸುಮಾರು 6,000 ಪ್ರತಿಭಟನಾಕಾರರು ಪಾಲ್ಗೊಂಡಿದ್ದಾರೆ. ಇಲ್ಲಿ ಪ್ರತಿಭಟನಾಕಾರ ರೊಂದಿಗೆ ಘರ್ಷಣೆ ನಡೆದ ಸಂದರ್ಭ ಮೋಂಟ್‌ಪೆಲ್ಲಿಯರ್‌ ಪೊಲೀ ಸರು ಅಶ್ರುವಾಯು ಸೆಲ್‌ಗಳನ್ನು ಸಿಡಿಸಿದ್ದಾರೆ.

ಕೋವಿಡ್ ಲಸಿಕೆಯನ್ನು ಮುಂದಿನ ತಿಂಗಳಿಂದ ಕಡ್ಡಾಯಗೊಳಿ ಸಿರುವುದನ್ನು ವಿರೋಧಿಸಿ ಆತ್ಮೀಯಾದ ರಾಜಧಾನಿ ವಿಯೆನ್ನಾದಲ್ಲಿ 40,000ಕ್ಕೂ ಅಧಿಕ ಜನರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಶಾಂತಿಯುತವಾಗಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜರ್ಮನಿಯಲ್ಲಿ ಪ್ರತಿಭಟನಕಾರರು ಹಲವು ನಗರಗಳಲ್ಲಿ ಶನಿವಾರ ರಾಲಿ ನಡೆಸಿದ್ದಾರೆ. ಹಂಬರ್ಗ್‌ನಲ್ಲಿ ಬೃಹತ್ ಪ್ರತಿಭಟನೆ ನಡೆದಿದ್ದು, 16,000 ಪ್ರತಿಭಟನಾಕಾರರು ಪಾಲ್ಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. “ಸಾಕು! ನಮ್ಮ ಮಕ್ಕಳ ಮೇಲಿಂದ ಕೈ ತೆಗೆಯಿರಿ” ಸಂಘಟ ನೆಯ ಅಡಿಯಲ್ಲಿ ಪ್ರತಿಭಟನೆ ನಡೆಯಿತು.

ಲಸಿಕೆ ಕಡ್ಡಾಯಗೊಳಿಸಲು ಬಯಸುತ್ತಿರುವ ಜರ್ಮನಿ ಕಳೆದ ತಿಂಗ ಳಿಂದ 5ರಿಂದ 11 ವರ್ಷಗಳ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲು ಪ್ರಾರಂಭಿಸಿದೆ. ಓರ್ವ ಪ್ರತಿಭಟನಾಕಾರನು ಯೆಹೂದಿ ಧರ್ಮದ ಸಂಕೇತವಾದ 'ಸ್ಟಾರ್ ಆಫ್ ಡೇವಿಡ್' ಲಾಂಛನವನ್ನು 'ಲಸಿಕೆ ಪಡೆ ದುಕೊಂಡಿಲ್ಲ' ಎಂಬ ಬರಹದೊಂದಿಗೆ ಧರಿಸಿದ್ದನು ಎಂದು ಪೊಲೀಸ ರು ಟೀಟ್ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರ್ಲಿನ್‌ನಲ್ಲಿ ಕೋವಿಡ್ ಲಸಿಕೆಯ ವಿರುದ್ದ ಕಾರು ಹಾಗೂ ಬೈಕ್‌ಗಳ ಬ್ಯಾಲಿ ನಡೆಸಲಾಯಿತು. 100 ವಾಹನಗಳು, 70 ಬೈಕ್‌ಗ ಳು ಹಾಗೂ ಸರಿಸುಮಾರು 200 ಜನರು ಪಾಲ್ಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಲಸಿಕೆ ವಿರೋಧಿಸುತ್ತಿರುವವರು ಹಾಗೂ ಕೊರೋನ ವೈರಸ್ ಅನ್ನು ನಿರಾಕರಿಸುತ್ತಿರುವವರು ವಾದಗಳಲ್ಲಿ ಹುರುಳಿಲ್ಲ ಎಂದು ಜರ್ಮನ್‌ನ ಆರೋಗ್ಯ ಸಚಿವ ಕಾರ್ಲ್ ಟರ್‌ಬೇಕ್ ತಿಳಿಸಿದ್ದಾರೆ.

ಒಂದು ಸಣ್ಣ ಗುಂಪು ಎಲ್ಲಾ ವೈಜ್ಞಾನಿಕ ಜ್ಞಾನವನ್ನು ಅಲ್ಲಗಳೆಯುತ್ತಿ ದೆ ಹಾಗೂ ಸ್ವಯಂಪ್ರೇರಿತವಾಗಿ ಸುಸುಳ್ಳಿನ ಗುಳ್ಳೆ ಮೇಲೆ ತೇಲಾಡುತ್ತಿದೆ ಎಂದು ಅವರು 'ವೆಲ್ಸ್ ಆ್ಯಮ್ ಸೊಂಟೇಜ್' ಪತ್ರಿಕೆಗೆ ತಿಳಿಸಿದ್ದಾರೆ.

ಇಟಲಿಯಲ್ಲಿ ಕೂಡ ಪ್ರತಿಭಟನೆ ನಡೆದಿದೆ. 50 ವರ್ಷಕ್ಕಿಂತ ಮೇಲ್ಪ ಟ್ಟವರಿಗೆ ಕೋವಿಡ್ ಲಸಿಕೆ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಟುರಿನ್‌ನ ನಗರದಲ್ಲಿ ಸಾವಿರಾರು ಜನರು ಪ್ರತಿಭಟನೆ ನಡೆಸಿದ್ದಾರೆ.

Read These Next

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...