ಕೃಷಿ ನೀತಿ ವಿರೋಧಿ ಹೋರಾಟ; ಪೆರುವಿನ ರೈತರ ಹೋರಾಟಕ್ಕೆ ಗೆಲವು ಸಿಕ್ಕಂತೆ, ಭಾರತೀಯರು ರೈತರಿಗೂ ಸಿಗಬಹುದೆ?

Source: S O News | By Laxmi Tanaya | Published on 18th January 2021, 11:47 PM | National News |

ನವದೆಹಲಿ : ನಮ್ಮಿಂದ ಸಾಧ್ಯವಾಯಿತು!
ಹೀಗೆ ಒಕ್ಕೊರಲನಿಂದ ಉದ್ಗಾರ ತೆಗೆದಿದ್ದು ಪೆರುವಿನ ಕೃಷಿಕರು.
ಡಿಸೆಂಬರ್‌ ತಿಂಗಳಲ್ಲಿ ಪೆರುವಿನ ಸರ್ಕಾರ ಕಾರ್ಪೊರೆಟ್‌ ವಲಯಕ್ಕೆ ಅನುಕೂಲವಾಗುವಂತಹ ಕಾಯ್ದೆಗಳನ್ನು ಜಾರಿಗೆ ತಂದಿತ್ತು. 

ಈ ಕಾಯ್ದೆಗಳು ಕಾರ್ಪೊರೆಟ್‌ ಸಂಸ್ಥೆಗಳಿಗೆ ಶೇ. 15ರಷ್ಟು ತೆರಿಗೆ ವಿನಾಯಿತಿ ನೀಡಿತ್ತು. ಜೊತೆಗೆ ಕೃಷಿ ಉತ್ಪನ್ನಗಳ ರಫ್ತಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿತ್ತು. ಈ ಕಾಯ್ದೆಗಳಿಂದ ಕೃಷಿ ಕೂಲಿಗೆ ಕತ್ತರಿ ಹಾಕಿತ್ತು. 

ಆಕ್ರೋಶಗೊಂಡ ರೈತರು ಈಗಾಗಲೇ ದುಸ್ಥಿತಿಯಲ್ಲಿರುವ ನಮ್ಮ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ಪ್ರತಿಭಟನೆ ಆರಂಭಿಸಿದ್ದರು. ದಕ್ಷಿಣಾ ಲಿಮಾದ ಅಮೆರಿಕದ ಹೆದ್ದಾರಿಯನ್ನು 300ಕಿ.ಮೀ. ಉದ್ದಕ್ಕೂ ತಡೆ ನಡೆಸಿತ್ತು. 

ಸರ್ಕಾರ ಪ್ರತಿಭಟನಾ ನಿರತ ರೈತರೊಂದಿಗೆ ಮಾತುಕತೆಯ ಮೂಲಕ ಸಂಧಾನ ಸೂತ್ರವನ್ನು ಕಂಡುಕೊಳ್ಳುವ ಪ್ರಯತ್ನ ನಡೆಸಿತ್ತಾದರೂ ಫಲಕೊಡಲಿಲ್ಲ. 

ಭಾರತದ ಹೋರಾಟವನ್ನು ನೆನಪಿಸುವಂತೆ ಅಲ್ಲೂ ಸಾವಿರಾರು ಸಂಖ್ಯೆಯಲ್ಲಿ ರೈತರು ಹೋರಾಟದಲ್ಲಿ ಪಾಲ್ಗೊಂಡರು. ಹೆದ್ದಾರಿಯಲ್ಲಿ 2000ಕ್ಕೂ ಹೆಚ್ಚು ಲಾರಿಗಳು, ಬಸ್‌ಗಳು ಸಿಲುಕಿದ್ದರು. 

ಕೃಷಿ ಕೂಲಿ ಹೆಚ್ಚಿಸುವುದು ಮತ್ತು ಹೊಸ ಕಾಯ್ದೆಯನ್ನು ಹಿಂಪಡೆಯುವುದು ಮುಖ್ಯ ಬೇಡಿಕೆಯಾಗಿತ್ತು. ಈ ಬೇಡಿಕೆ ಈಡೇರದೆ ಪ್ರತಿಭಟನೆ ನಿಲ್ಲಿಸುವಂತೆ ಮಾತೇ ಇಲ್ಲ ಎಂದು ರೈತರು ಪಟ್ಟು ಹಿಡಿದರು. 

ರೈತ ಹೋರಾಟಕ್ಕೆ ಮಣಿದ ಸರ್ಕಾರ ಕೃಷಿ ಕಾಯ್ದೆಯನ್ನು ಹಿಂಪಡೆದಿದೆ. ಅಧ್ಯಕ್ಷ ಫ್ರಾನ್ಸಿಸ್ಕೊ ಸಗಾಟಿ ಸರ್ಕಾರದ ಮುಂದೆ ಕಾಯ್ದೆ ಹಿಂಪಡೆಯುವ ಪ್ರಸ್ತಾವನೆಯನ್ನು ಇಟ್ಟು ಬಹುಮತದ ಮೇರೆಗೆ ಹಿಂಪಡೆಯಲಾಗಿದೆ. 

ಕಾರ್ಪೊರೆಟ್‌ ಸಂಸ್ಥೆಗಳು ಕೃಷಿ ವಲಯದ ಮೇಲೆ ಹಿಡಿತ ಸಾಧಿಸುವ ಪ್ರಯತ್ನಕ್ಕೆ ಹಿನ್ನಡೆ ಉಂಟು ಮಾಡಿದ ಈ ಹೋರಾಟ, ಭಾರತದ ರೈತ ಹೋರಾಟಕ್ಕೆ ಉತ್ಸಾಹ ನೀಡಿದೆ ಎಂದು ದೆಹಲಿ ಗಡಿಯಲ್ಲಿರುವ ಪ್ರತಿಭಟನಾ ನಿರಂತರ ರೈತರು ಹೇಳುತ್ತಾರೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...