ರೇಷ್ಮೆ ಬೆಳೆಗಾರರ ಹಾಗೂ ರೈತ ಸದಸ್ಯರ ವಾರ್ಷಿಕ ಮಹಾಸಭೆ

Source: sonews | By Staff Correspondent | Published on 17th September 2019, 10:36 PM | State News |

ಶ್ರೀನಿವಾಸಪುರ: ತಾಲೂಕಿನ ದಳಸನೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ 2018-19ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷ ಬಿಸನಹಳ್ಳಿ ಎಸ್.ಬೈಚೇಗೌಡ ರವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.ಮಾವು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಎಲ್.ಗೋಪಾಲಕೃಷ್ಣ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ ಸಂಘದ ಅಭಿವೃದ್ಧಿಗೆ ಷೇರುದಾರರ ಸಹಕಾರ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಸಂಘದ ನಿರ್ದೇಶಕರುಗಳ ಮತ್ತು ಷೇರುದಾರರ ಸಹಕಾರದೊಂದಿಗೆ ಸಂಘವನ್ನು ಇನ್ನಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯುವಂತೆ ಅಧ್ಯಕ್ಷರಿಗೆ ತಿಳಿಸಿದರು.

ಸಭೆಯಲ್ಲಿ ಡಿ.ಸಿ.ಸಿ ಬ್ಯಾಂಕ್ ಶ್ರೀನಿವಾಸಪುರ ಶಾಖೆಯ ನಿರ್ದೇಶಕ ಬಿ.ವಿ ವೆಂಕಟರೆಡ್ಡಿ, ಸಹಕಾರ ಸಂಘದ ನಿರ್ದೇಶಕರುಗಳಾದ ಬಿ.ನಾರಾಯಣಸ್ವಾಮಿ, ಜಿ.ಎಂ.ಅಶ್ವಥ್, ಟಿ.ಎನ್ ಶ್ರೀರಾಮೇಗೌಡ, ಎಸ್.ಭಾಷಾಸಾಭಿ, ಯಲ್ಲಪ್ಪ, ಗ್ರಾಮದ ಮುಖಂಡರುಗಳಾದ ವಿ.ಕೃಷ್ಣೇಗೌಡ, ವಿ.ಮುನಿಶಾಮಿಗೌಡ, ಹೂಹಳ್ಳಿ ವೆಂಕಟೇಶ್‍ಗೌಡ, ವಿ.ನಾರಾಯಣಗೌಡ ಮತ್ತು ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

Read These Next