ಭಟ್ಕಳ ಪೊಲೀಸರಿಂದ ಜಾನುವಾರು ಕಳ್ಳರ ಬಂಧನ; 1 ಒಮಿನಿ ಕಾರು, 3 ಬೈಕ್ ಜಫ್ತು

Source: S O News | By I.G. Bhatkali | Published on 7th December 2021, 8:42 PM | Coastal News |

ಭಟ್ಕಳ: ಬೀದಿ ಬದಿಯಲ್ಲಿ ಮಲಗುತ್ತಿದ್ದ ಜಾನುವಾರುಗಳನ್ನು ಕದ್ದು ಸಾಗಿಸುತ್ತಿದ್ದ ಆರೋಪದ ಮೇರೆಗೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ರವಿವಾರ ನಡೆದಿದೆ. 

ಬಂಧಿತರನ್ನು ಕಾರ್ಕಳ ಮೂಲದ ಜಲೀಲ್ ತಂದೆ ಮಯಾದ್ದಿ (34) ಮತ್ತು ಮುಲ್ಕಿಯ ಮುಸ್ತಫಾ ತಂದೆ ಮೊಹಿದ್ದೀನ್ (30) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 1 ಓಮಿನಿ ಕಾರು ಹಾಗೂ 3 ಮೋಟಾರ್ ಬೈಕ್‍ಗಳನ್ನು ಜಫ್ತುಪಡಿಸಿಕೊಳ್ಳಲಾಗಿದೆ. ಇವರೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನಲಾದ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಶನಿವಾರ ರಾತ್ರಿ ತಾಲೂಕಿನ ಮುಂಡಳ್ಳಿ ನೀರಗದ್ದೆ ಪ್ರದೇಶದಲ್ಲಿ ಜಾನುವಾರು ಕಳ್ಳತನ ಪ್ರಯತ್ನವೊಂದು ನಡೆದಿದ್ದು, ಸದರಿ ಪ್ರಕರಣದ ದೂರಿನ ಮೇರೆಗೆ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿರುವಾಗಲೇ ಕಳ್ಳರು ಸಿಕ್ಕಿ ಬಿದ್ದಿದ್ದಾರೆ.

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಮಹಾಬಲೇಶ್ವರ ನಾಯ್ಕ ಮಾರ್ಗದರ್ಶನದಲ್ಲಿ ಎಸೈ ರತ್ನಾ ಕುರಿ ತನಿಖೆ ಕೈಗೊಂಡಿದ್ದಾರೆ.
 

Read These Next

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭ್ರಮದಿಂದ ಗಣರಾಜ್ಯೋತ್ಸವ ಆಚರಣೆ. ಕೃಷಿ, ಉದ್ಯಮ, ಪ್ರವಾಸೋದ್ಯಮ, ಸಂಸ್ಕೃತಿ ಸ್ನೇಹಿ ಜಿಲ್ಲೆಯನ್ನಾಗಿ ದ. ಕ. ಅಭಿವೃದ್ಧಿ : ಸಚಿವ ವಿ. ಸುನೀಲ್ ಕುಮಾರ್

ಮಂಗಳೂರು : ಮುಂಬರುವ ದಿನಗಳಲ್ಲಿ ಕೃಷಿ, ಉದ್ಯಮ, ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸ್ನೇಹಿ ಜಿಲ್ಲೆಯನ್ನಾಗಿ ದಕ್ಷಿಣ ಕನ್ನಡವನ್ನು ...

ಬಡವ, ಬಲ್ಲಿದನೆಂಬ ಭೇದ ಮರೆತು ಸಶಕ್ತ ರಾಷ್ಟ್ರ ನಿರ್ಮಾಣ ಮಾಡೋಣ : ಕೋಟ ಶ್ರೀನಿವಾಸ ಪೂಜಾರಿ.

ಕಾರವಾರ : ಸ್ವಾತಂತ್ರ್ಯ ಗಳಿಸಿದ ಏಳು ದಶಕಗಳಲ್ಲಿ ಭಾರತೀಯರು ಅನೇಕ ಕ್ಷೇತ್ರಗಳಲ್ಲಿ ಗಣನೀಯ ಮತ್ತು ಗಂಭೀರ ಸಾಧನೆ ಮಾಡಿದ್ದೇವೆ. ಕೃಷಿ, ...